* ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಪ್ರಚಾರ
* ಈ ಹಿಂದೆ ಬಿಜೆಪಿ ವರ್ಸಸ್ ಹೊರಟ್ಟಿ ನಡುವಿನ ಚುನಾವಣೆಯಾಗಿತ್ತು
* ಈಗ ಹೊರಟ್ಟಿ ಅವರು ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲ
ಗಜೇಂದ್ರಗಡ(ಜೂ.01): ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲದ್ದರಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಅವರು ಈಗಾಗಲೇ ಗೆದ್ದಾಗಿದೆ. ಹೊರಟ್ಟಿಅವರು ಎಷ್ಟುಅಧಿಕ ಮತಗಳನ್ನು ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ರಾಜ್ಯದ ಜನತೆ ಕಾಯುತ್ತಿದ್ದಾರೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆ, ಪಿಯು, ಪದವಿ ಕಾಲೇಜು, ಸರ್ಕಾರಿ ಬಾಲಕರ, ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜು ಹಾಗೂ ಬಿಎಸ್‌ಎಸ್ ಕಾಲೇಜಿನಲ್ಲಿ ಮಂಗಳವಾರ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಪ್ರಚಾರ ಹಾಗೂ ಮತಯಾಚಿಸಿ ಮಾತನಾಡಿದರು.
Gadag: ಓದುಗ ವರ್ಗ ಸೃಷ್ಟಿಸಲು ಹೈಟೆಕ್ ಲೈಬ್ರರಿ: ಗ್ರಾಮದ ಗ್ರಂಥಾಲಯದಲ್ಲಿ ಕಂಪ್ಯೂಟರ್, ಟಿವಿ!
ಜನಪ್ರತಿನಿಧಿಗಳ ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರವಾಗಿರುವ ಬಸವರಾಜ ಹೊರಟ್ಟಿ ಅವರ ಗೆಲುವು ಐತಿಹಾಸಿಕವಾಗಲಿದ್ದು, ಈ ಹಿಂದೆ ಬಿಜೆಪಿ ವರ್ಸಸ್ ಹೊರಟ್ಟಿ ನಡುವಿನ ಚುನಾವಣೆಯಾಗಿತ್ತು. ಈಗ ಹೊರಟ್ಟಿ ಅವರು ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲ. ಹೀಗಾಗಿ ಹೊರಟ್ಟಿಅವರ ಬೆನ್ನಿಗೆ ಶಿಕ್ಷಕ ಸಮೂಹ ಮತ್ತು ಬಿಜೆಪಿ ಜೊತೆಗೆ ಇರುವುದರಿಂದ ಹೊರಟ್ಟಿಈಗಾಗಲೇ ಗೆದ್ದಾಗಿದೆ. ಆದರೆ ಮತಗಳ ಅಂತರ ಹಾಗೂ ಸಂಭ್ರಮಕ್ಕಾಗಿ ರಾಜ್ಯ ಕಾತುರತೆಯಿಂದ ಕಾಯುತ್ತಿದೆ ಎಂದ ಅವರು, ಮತಕ್ಷೇತ್ರದಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳನ್ನು ನೀಡುವುದರ ಜತೆಗೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊರಟ್ಟಿಅವರು ನಡೆಸಿದ ಹೋರಾಟ ಅವಿಸ್ಮರಣೀಯ. ಬಸವರಾಜ ಹೊರಟ್ಟಿಅವರು ಅಧಿಕಾರಿಗಳಿಗೆ ಹೇಳುವ ಮಾತು ಸೂರ್ಯ ಮುಳುಗುವ ಅಥವಾ ಉದಯಿಸುವುದರ ಒಳಗೆ ಆಗುತ್ತದೆ ಎನ್ನುವ ಮಾತಿದೆ. ಹೀಗಾಗಿ ಅವರ ಗೆಲವು ಗಿನ್ನಿಸ್ ದಾಖಲೆಗೆ ಸೇರಲಿದ್ದು ಶಿಕ್ಷಕ ಸಮೂಹ ತಮ್ಮ ಅಮೂಲ್ಯವಾದ ಮತದಿಂದ ಹೊರಟ್ಟಿಅವರನ್ನು ಗೆಲ್ಲಿಸಬೇಕು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಶಿವಾನಂದ ಮಠದ ಮಾತನಾಡಿ, ಶಿಕ್ಷಕ ಸಮೂಹ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿದ್ದ ಸಾಲು, ಸಾಲು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹೊರಟ್ಟಿಅವರ ಕೊಡುಗೆ ಪ್ರಶಂಸಾರ್ಹ. ಶಾಸಕ ಕಳಕಪ್ಪ ಬಂಡಿ ಅವರು ಹೊರಟ್ಟಿಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಮುಂದಾಗಿದ್ದು ಶಾಸಕರ ಕೈ ಬಲಪಡಿಸಲು ಮುಂದಾಗೋಣ. ಪಟ್ಟಣದ ಸಿಬಿಎಸ್ ಶಾಲೆಗೆ ಜೂ. 2ರಂದು ಹೊರಟ್ಟಿಅವರು ಪ್ರಚಾರಾರ್ಥ ಆಗಮಿಸಲಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಮೋಹನಸಾ ರಾಯಬಾಗಿ, ಮುತ್ತಣ್ಣ ಕಡಗದ, ಬಸವರಾಜ ಬಂಕದ, ಭಾಸ್ಕರ ರಾಯಬಾಗಿ, ಅಮರೇಶ ಗಾಣಿಗೇರ, ಬಿ.ಎಸ್. ಬಸವನಗೌಡರ, ಬಸವರಾಜ ಬಂಕದ, ಬಾಳು ಗೌಡರ, ಪ್ರಾಚಾರ್ಯ ಡಾ. ಪಿ.ಎಚ್. ಕ್ಯಾರೇಕೊಪ್ಪ, ಡಾ. ಮಹೇಂದ್ರ ಜಿ, ಡಾ. ಕರುನೇಶಕುಮಾರ, ಸಿದ್ದೇಶ ಕೆ, ಡಾ. ಜಗದೀಶ ಹುಲ್ಲೂರ, ಮಹಾಂತೇಶ ಜೀವಣ್ಣವರ, ಬಿ.ವಿ. ಮುನವಳ್ಳಿ, ರೂಪಾ ಟಿ.ಪಿ, ವಿನಾಯಕ ಜಾಧವ್ ಸೇರಿ ಇತರರು ಇದ್ದರು.