ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿರುವ ಮಾಲಿಕಯ್ಯ ಗುತ್ತೇದಾರ್, ತಆಸ್ಪತ್ರೆಯಿಂದ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಸೆ.20): ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೇತರಿಗೆ ಅವರ ಅಭಿಮಾನಿಗಳು ಪೂಜೆ-ಪುನಸ್ಕಾರಗಳನ್ನ ಮಾಡುತ್ತಿದ್ದಾರೆ. ಇದಕ್ಕೆ ಮಾಲೀಕಯ್ಯ ಗುತ್ತೇದಾರ್ ಆಸ್ಪತ್ರೆಯಿಂದಲೇ ಧನ್ಯವಾದ ಹೇಳಿದ್ದಾರೆ.
ಕೊರೋನಾ ಹೋರಾಟ: ಮೊಝಂಬಿಕ್‌ಗೆ ಭಾರತದಿಂದ 13 ಬಗೆಯ ಔಷಧ ನೆರವು
ನಾನು ಬೇಗ ಗುಣಮುಖನಾಗಲೆಂದು ನಾಡಿನೆಲ್ಲೆಡೆ ಅಭಿಮಾನಿಗಳು ಕಾರ್ಯಕರ್ತರು ಪ್ರಾರ್ಥಿಸುತ್ತಿದ್ದಾರೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ನಮನಗಳು. ತಂದೆ-ತಾಯಿ, ಗುರುಹಿರಿಯರ ಆಶಿರ್ವಾದದಿಂದ ನನಗೆ ಇನ್ನೂ ಮಾತನಾಡುವ ಶಕ್ತಿ ಇದೆ. ಶೀಘ್ರದಲ್ಲಿ ಗುಣಮುಖನಾಗಿ ಮತ್ತೆ ಜನಸೇವೆಗೆ ಮರಳಲಿದ್ದೇನೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.