ದೇಶದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲೋದು ಕಷ್ಟ: ಸಿ.ಟಿ.ರವಿ

By Girish Goudar  |  First Published Jan 30, 2024, 9:46 PM IST

ಮೊನ್ನೆ ಸಿಎಂ ಹೇಳಿದ್ರು 20 ಸ್ಥಾನ ಗೆಲ್ತೀವಿ ಅಂತ. ಆದರೆ, 20 ಸ್ಥಾನ ಇಡೀ ದೇಶದಲ್ಲಾ ಅನ್ನೋದಂದೇ ನನ್ನ ಪ್ರಶ್ನೆ ಎಂದು ವ್ಯಂಗ್ಯವಾಡಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್ ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲೋದು ಕಷ್ಟ. ರಾವಣನ ಪಕ್ಷದಲ್ಲಿ ಯಾರ್ಯಾರು ವಿಭೀಷಣರಿದ್ದೀರೋ ಎಲ್ಲರೂ ಬನ್ನಿ ಬಿಜೆಪಿಗೆ ಬನ್ನಿ ಎಂದು ಕರೆ ನೀಡಿದ ಸಿ.ಟಿ.ರವಿ 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.30):  ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಹಾಕಿ ಮೇಲಿಂದ ಮೇಲೆ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಅವರು "ಆ" ಪದ ಬಳಸಿದ್ದಾರೆ. ಬಹುಶಃ ಅವರು ಅದೇ ಇರಬೇಕು. ಅವರ ಮಾತಿನ ದಾಟಿ ನೋಡಿದರೆ ಅವರು ಅದೇ ಇರಬೇಕು ಎಂದು ತಿವಿದಿದ್ದಾರೆ. ಅವರು ಅದೇ ರೀತಿ ಇರಬೇಕು. ಅದಕ್ಕೆ ಆ ಪದ ಬಳಸಿದ್ದಾರೆ ಎಂದಿದ್ದಾರೆ. ಅದಿಲ್ಲ ಅಂದ್ರೆ ಗೊತ್ತಾಲ್ಲ. ಫಲ ಕೊಡಲ್ಲ. ರಾಜಕೀಯವಾಗಿ ಅವರು ಅದೇ. ಅದಕ್ಕೆ ಆ ಪದ ಬಳಸಿದ್ದಾರೆ ಎಂದಿದ್ದಾರೆ ಎಂದು ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. 

Tap to resize

Latest Videos

undefined

ರಾಜ್ಯಸಭೆಗೆ ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಮಾತಿಗೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ಎಲ್ಲಿಂದ ಬೇಕಾದ್ರು ನಿಂತುಕೊಳ್ಳಲಿ. ಮೊನ್ನೆ ಸಿಎಂ ಹೇಳಿದ್ರು 20 ಸ್ಥಾನ ಗೆಲ್ತೀವಿ ಅಂತ. ಆದರೆ, 20 ಸ್ಥಾನ ಇಡೀ ದೇಶದಲ್ಲಾ ಅನ್ನೋದಂದೇ ನನ್ನ ಪ್ರಶ್ನೆ ಎಂದು ವ್ಯಂಗ್ಯವಾಡಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್ ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲೋದು ಕಷ್ಟ. ರಾವಣನ ಪಕ್ಷದಲ್ಲಿ ಯಾರ್ಯಾರು ವಿಭೀಷಣರಿದ್ದೀರೋ ಎಲ್ಲರೂ ಬನ್ನಿ ಬಿಜೆಪಿಗೆ ಬನ್ನಿ ಎಂದು ಸಿ.ಟಿ.ರವಿ ಕರೆ ನೀಡಿದ್ದಾರೆ. 

ಬೀಟಮ್ಮ ಗ್ಯಾಂಗ್‌ನಲ್ಲಿರುವ ಹಂತಕ ಸಲಗ ಭೀಮ: ಸಿಕ್ಕ-ಸಿಕ್ಕ ಕಡೆ ಸಂಚಾರ ಮಾಡುತ್ತಿರುವ ಕಾಡಾನೆ ಹಿಂಡು

ಕೌರವನ ಪಕ್ಷದಲ್ಲೇ ಇದ್ದ ದುರ್ಯೋಧನನ ಸಹೋದರ ಯುಯೂತ್ಸು ಕುರುಕ್ಷೇತ್ರದ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆ ನೀಡಿದಾಗ ಆತ ಪಾಂಡವರ ಪರ ಬಂದಿದ್ದ, ದೇಶಬೇಕು ಅನ್ನೋ ವಿಭೀಷಣರು ಬಿಜೆಪಿ ಬನ್ನಿ ಎಂದು ಕರೆ ನೀಡಿದ್ದು, ಮೋದಿ ಪ್ರಧಾನಿಯಾಗಬೇಕು, ದೇಶ ಉಳೀಬೇಕು ಅನ್ನೋ ವಿಭೀಷಣರು ಬನ್ನಿ ಎಂದು ಮನವಿ ಮಾಡಿದ್ದಾರೆ. 

ಸಿಎಂ ಸಿದ್ದರಾಮಯ್ಯನವರ ನಿಲುವೇನು?

ಅಯೋಧ್ಯೆಯಂತೆ ಕಾಶಿಯಲ್ಲಿ ಭವ್ಯ ಮಂದಿರ ಕಟ್ಟೇ ಕಟ್ತೀವಿ ಎಂದು ಉತ್ಸುಕದ ಮಾತನ್ನಾಡಿರೋ ಸಿ.ಟಿ.ರವಿ, ಈಗ ನಾವು ಹಿಂದೂ ಅನ್ನೋ ಸಿದ್ದರಾಮಯ್ಯನವರ ನಿಲುವೇನು ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಆಗ ನಾನು ಹಿಂದು ಅಂತ ನಾಟಕ ಮಾಡೋದು ಬೇಡ, ಈಗ ತಮ್ಮ ನಿಲುವನ್ನ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ. 

ಜ್ಞಾನವಾಪಿ ಮಸೀದಿಯನ್ನ ಅತಿಕ್ರಮಿಸಿ ಕಟ್ಟಿದ್ದಾರೆ. ಅಲ್ಲಿ ನಮಾಜ್ ಮಾಡುದ್ರೆ ಹರಾಮ್ ಎಂದು ಒಳ್ಳೆ ಮುಸ್ಲೀಮರು ಹೇಳುತ್ತಾರೆ. ಆ ಹರಾಮಿ ಕೆಲಸಕ್ಕೆ ಹೋಗೋರೆಲ್ಲಾ ಹರಾಮಿಗಳೇ. ನಾವು ಕಳೆದುಕೊಂಡಿರೋದನ್ನೆಲ್ಲಾ ಮತ್ತೆ ಪಡೆಯುತ್ತೇವೆ. ಇದು ನಮ್ಮ ನಿಲುವು. ಮುಸ್ಲಿಮರು ಆ ಜಾಗಗಳನ್ನ ಬಿಟ್ಟುಕೊಡಬೇಕು ಎಂದು ಮನವಿ ಮಾಡಿರೋ ಸಿ.ಟಿ.ರವಿ, ಈ ಬಗ್ಗೆ ಕಾಂಗ್ರೆಸ್, ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

ರಾಮಮಂದಿರ ನಿರ್ಮಾಣದ ಬಳಿಕ ಇಡೀ ದೇಶ ಜೈ ಶ್ರೀರಾಮ್ ಅಂದಮೇಲೆ ಸಿದ್ದರಾಮಯ್ಯನವರು  ಜೈ ಶ್ರೀರಾಮ ಎಂದ್ರು. ಆಗ ಎಲ್ಲಾ ದೇವಾಲಯ ಕಟ್ಟಿದ ಮೇಲೆ ಆಗ ಮತ್ತೆ ನಾಟಕ ಮಾಡೋದು ಬೇಡ, ಈಗ ನಿಮ್ಮ ನಿಲುವು ತಿಳಿಸಿ. ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಾಲಯ ಇತ್ತು ಅನ್ನೋದು ಸ್ಪಷ್ಟ. 1666 ಹಾಸುಪಾಸಿನಲ್ಲಿ ಔರಂಗಜೇಬ್ ದೇವಾಲಯದ ಅವಶೇಷ ಬಳಸಿಕೊಂಡೇ ದೇವಾಲಯ ಕಟ್ಡಿದ್ದ. ಇದನ್ನ ಅವನೇ ಬರೆದುಕೊಂಡಿರೋ ಅಲಂಗಿರ್ ನಾಮ ಎಂಬ ದಾಖಲೆ ಹೇಳುತ್ತೆ. ಮುಸ್ಲಿಮರು ಪಾಪಿ ಔರಂಗಜೇಬ್ ಜೊತೆ ಗುರುತಿಸಿಕೊಳ್ಳಬಾರದು. ವಿವಾದಿತ ಜಾಗದಲ್ಲಿ ನಮಾಜ್ ಮಾಡುದ್ರೆ ಹರಾಮ್ ಆಗುತ್ತೆ ಎಂದು ಮುಸ್ಲಿಮರೇ ಹೇಳಿಕೊಂಡಿದ್ದಾರೆ. ನಿಮಗೆ ಅದು ಹರಾಮ್ ಆದ್ರೆ, ನಮಗೆ ಅದು ಪವಿತ್ರ ಸ್ಥಳ. ಹಾಗಾಗಿ, ಬಿಟ್ಟುಕೊಡಿ ಎಂದಿದ್ದು, ಈ ಬಗ್ಗೆ ಕಾಂಗ್ರೆಸ್ ಈಗಲೇ ತಮ್ಮ ನಿಲುವು ತಿಳಿಸಲಿ ಎಂದು ಮನವಿ ಮಾಡಿದ್ದಾರೆ.

click me!