
ಚಿಕ್ಕಮಗಳೂರು (ನ.30): ಮಂಗಳೂರಲ್ಲಿ ಉಗ್ರವಾದದ ಪರ ಮತ್ತೆ ಪ್ರತ್ಯಕ್ಷವಾದ ಗೋಡೆ ಬರಹಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಉಗ್ರವಾದಕ್ಕೆ ಜಾಗ ಇಲ್ಲ. ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಯ್ತು ಎಂದು ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಗ್ರವಾದಿಗಳು ಹೋಗಬೇಕಾಗಿರೋದು ಮಸಣಕ್ಕೆ ಮಾತ್ರ. ಅವರನ್ನು ಮಸಣಕ್ಕೆ ಕಳುಹಿಸುವ ಕೆಲಸವನ್ನು ನಮ್ಮ ಪೊಲೀಸರು, ಸೈನಿಕರು ಸಮರ್ಥವಾಗಿ ಮಾಡುತ್ತಿದ್ದಾರೆ.
ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಯ್ತು. ಉಗ್ರವಾದಿಗಳಿಗೆ ಮಣೆ ಹಾಕಿ ಅವರು ಹೇಳಿದಂತೆ ತಲೆದೂಗಿ ಅವರ ಪರ ನಿಲ್ಲುವ ರಾಜಕೀಯ ವ್ಯವಸ್ಥೆ ಈಗಿಲ್ಲ ಎಂದರು.
ಪೂಜೆ ಹೆಸರಲ್ಲಿ ದಿಲ್ಲಿಯಲ್ಲಿ ಕರ್ನಾಟಕ ಬಿಜೆಪಿ ರಾಜಕೀಯ ಹೈಡ್ರಾಮ..!
ಉಗ್ರರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲಾಗುವುದು. ಕಾಶ್ಮೀರದಲ್ಲಿ ತಲೆ ಎತ್ತಿದವರ ತಲೆ ಕಟ್ ಮಾಡಿದ್ದೇವೆ. ಬಾಲವೂ ಕಟ್ ಮಾಡಿದ್ದೇವೆ. ಇಲ್ಲೂ ನಾವು ಅವರ ಬಾಲ ಬಿಚ್ಚಲು ಬಿಡುವುದಿಲ್ಲ. ಬಾಲ ಬಿಚ್ಚಿದರೆ, ಉಳಿದಿರುವುದನ್ನೂ ಕಟ್ ಮಾಡಬೇಕಾಗುತ್ತದೆ ಎಂದ ಅವರು, ದೇಶ ವಿರೋಧಿ ಚಟುವಟಿಕೆಯನ್ನು ಯಾವತ್ತಿಗೂ ಸಹಿಸುವುದಿಲ್ಲ. ಅದನ್ನು ಒಪ್ಪಿಕೊಳ್ಳುವ ಸಮಾಜ ವ್ಯವಸ್ಥೆ ಈಗಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.