ಬಿಜೆಪಿಯವರು ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ: ಸಚಿವ ಸತೀಶ್ ಜಾರಕಿಹೊಳಿ

Published : May 04, 2025, 06:38 PM IST
ಬಿಜೆಪಿಯವರು ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ: ಸಚಿವ ಸತೀಶ್ ಜಾರಕಿಹೊಳಿ

ಸಾರಾಂಶ

ಬಿಜೆಪಿಯವರು ಹಳೆಯದನ್ನು ಹೊಸದಾಗಿ, ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಹುಬ್ಬಳ್ಳಿ (ಮೇ.04): ಬಿಜೆಪಿಯವರು ಹಳೆಯದನ್ನು ಹೊಸದಾಗಿ, ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕೊಲೆಯಾದ ಸುಹಾಸ್ ಶೆಟ್ಟಿ ಪರಿಹಾರದಲ್ಲಿ ಸರ್ಕಾರದಿಂದ ತಾರತಮ್ಯ ನಡೆದಿಲ್ಲ ಬಿಜೆಪಿಯವರು ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡ್ತಾರೆ. ಆರೋಪಿ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟಿಲ್ಲ. ಪ್ರಕರಣ ದಾಖಲಾಗಿದೆ, ತನಿಖೆ ಮಾಡ್ತಿದ್ದಾರೆ. ಈಗಾಗಲೇ 6 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರನ್ನು ಬಂಧಿಸಬೇಕಿದೆ ಎಂದರು.

ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡ್ತಿಲ್ಲ ಎಂಬ ಆರೋಪಕ್ಕೆ ಕಿಡಿಕಾರಿದ ಅವರು, ಫ್ರೀ ಹ್ಯಾಂಡ್ ಕೊಟ್ಟಿದ್ದರಿಂದಲೇ ಆರೋಪಿಗಳನ್ನು ತಕ್ಷಣ ಬಂಧಿಸುವಸಂತಾಗಿದೆ. ಹಿಂದೂ ಮುಸ್ಲಿಂ ಅಂತ ಯಾರನ್ನು ಟಾರ್ಗೆಟ್ ಮಾಡಲು ಬರಲ್ಲ. ಘಟನೆ ನಡೆದಿದೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಸುಹಾಸ್ ಶೆಟ್ಟಿ ಜೊತೆಗೆ ಇತರೆ ಕೆಲವರ ಕೊಲೆಗೆ ಬೆದರಿಕೆ ವಿಚಾರವಾಗಿ ಯಾರಿಗೆ ಬೆದರಿಕೆ ಇದೆಯೋ ಅವರು ಪೊಲೀಸರಿಗೆ ದೂರು ನೀಡಬೇಕು. ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರವಾಗಿ ಯಾವುದಾದರೂ ಒಂದು ಘಟನೆ ನಡೆದಿರಬಹುದು. ಕಳೆದ ಬಾರಿ ನಡೆದಿದ್ದ ಘಟನೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಸಂಸ್ಥೆಗಳಲ್ಲಿ ಈ ಘಟನೆ ನಡೆದಿಲ್ಲ. ಈ ವಿಚಾರಕ್ಕೆ ನಮ್ಮ ಸರ್ಕಾರವನ್ನು ಹೊಣೆ ಮಾಡಲು ಆಗಲ್ಲ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಸತ್ಯ ನಾವು ಹುಷಾರಾಗಿರಬೇಕು: ಸಚಿವ ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಲ್ಲಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಬೇಕು ಅನ್ನೋದು ನನ್ನ ವಿವೇಚನೆ ಗೆ ಬಿಟ್ಟಿದ್ದಲ್ಲ, ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಕೆಪಿಎಸ್ಸಿಯಲ್ಲಿ ಗೊಂದಲ ಮುಂದಿರುವ ವಿಚಾರವಾಗಿ ಎಲ್ಲ ಸರ್ಕಾರಗಳ ಸಂದರ್ಭದಲ್ಲಿಯೂ ಈ ರೀತಿಯ ಗೊಂದಲಗಳಾಗಿವೆ. ಕೆಪಿಎಸ್ಸಿ ಸ್ವತಂತ್ರ ಆಯೋಗವಿದ್ದು, ಇದನ್ನು ಅವರೇ ಸರಿಮಾಡಬೇಕು. ಗುತ್ತಿಗೆದಾರರಿಗೆ ಬಿಲ್ ಕೊಡುವ ವಿಚಾರದಲ್ಲಿ ತಾರತಮ್ಯ ಆರೋಪ ವಿಚಾರವನ್ನು ಜಾರಕಿಹೊಳಿ ಅಲ್ಲಗಳೆದರು.

ಪಾಕಿಸ್ತಾನಕ್ಕೆ ಬಾಂಬ್ ಹಾಕಲು ನಮ್ಮವರು ಹೋಗಲ್ಲಾ, ಬಿಜೆಪಿಯವರು ಹೋಗಲ್ಲಾ ಎಂದು ಪಾಕಿಸ್ತಾನಕ್ಕೆ ಬಾಂಬ್ ಕಟ್ಟಿಕೊಂಡು ಹೋಗುವುದಾಗಿ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ಬಾಂಬ್ ಕೊಟ್ಟರೆ ನಾನು ಬಾಂಬ್ ಹಾಕಿ ಬರ್ತೇನೆ ಜಮೀರ್ ಅಹ್ಮದ್ ಹೇಳಿದ್ದಾರೆ. ಆದರೆ ಬಾಂಬ್ ಹಾಕಲು ಸೈನಿಕರಿದ್ದಾರೆ. ಎಲ್ಲರು ಹೇಳ್ತಾರೆ. ನಮ್ಮವರು ಹೋಗಲ್ಲಾ, ಬಿಜೆಪಿಯವರು ಹೋಗಲ್ಲಾ. ದೇಶ ಕಾಯಲು 22 ಲಕ್ಷ ಸೈನಿಕರಿದ್ದಾರೆ. ಅವರ ಕೆಲಸವನ್ನು ಅವರು ಮಾಡ್ತಾರೆ. ಪಾಕಿಸ್ತಾನದ ಮೇಲೆ ಬಾಂಬ್ ಹಾಕಲು ಸೈನಿಕರಿದ್ದಾರೆ. 

ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕರಿಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ನಾನು ಹೋಗ್ತೇನೆ ನಾನು ಹೋಗ್ತೇನೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಯಾರೂ ಹೋಗಲ್ಲ. ಪೆಹಲ್ಗಾಂವ್ ಉಗ್ರರ ದಾಳಿಗೆ  ಪಾಕಿಸ್ತಾನದ ಮೇಲೆ ಯುದ್ದ ಮಾಡಬೇಕು ಅನ್ನೋ ವಿಚಾರವಾಗಿ ಅದು ಕೇಂದ್ರಕ್ಕೆ ಬಿಟ್ಟದ್ದು, ಯಾವಾಗ ಏನು ಮಾಡಬೇಕು  ಅಂತ ಅವರು ನಿರ್ಧಾರ ಮಾಡ್ತಾರೆ. ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ. ಜಾತಿ ಗಣತಿಯಲ್ಲಿ ಬಿಜೆಪಿ ಯೂಟರ್ನ್ ಹೊಡೆದಿದೆ. ಏಕಾಏಕಿ ಅವರಿಗೆ ಜಾತಿ ಗಣತಿ ಬಗ್ಗೆಪ್ರೀತಿ ಬಂದಿದೆ. ನಾವು ಮಾಡುವಾಗ ವಿರೋಧ ಮಾಡಿದ್ರು.  ಇದೀಗ ದೂರದೃಷ್ಟಿಯಿದೆ ಅಂತ ಹೇಳ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!