ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಗೋವಾ ಸಿಎಂ ಸಾವಂತ್‌

By Kannadaprabha News  |  First Published Feb 9, 2023, 2:20 AM IST

ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಭವಿಷ್ಯ ನುಡಿದಿದ್ದಾರೆ. 
 


ಮಂಗಳೂರು (ಫೆ.09): ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಭವಿಷ್ಯ ನುಡಿದಿದ್ದಾರೆ. ಕೆನರಾ ಹೈಸ್ಕೂಲ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ನವ ಕರ್ನಾಟಕ ಪರಿಕಲ್ಪನೆಯ ಸಾಕಾರ ಆಗಬೇಕಾದರೆ ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವುದರೊಂದಿಗೆ ಮತ್ತೆ ಡಬಲ್‌ ಎಂಜಿನ್‌ ಸರ್ಕಾರವೇ ಬರಲಿದೆ ಎಂದರು. ಪ್ರಧಾನಮಂತ್ರಿ ಕೌಶಲ್ಯ ಯೋಜನೆ ಮೂಲಕ ಹಲವು ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಈ ಕೋರ್ಸ್‌ಗಳನ್ನು ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ವೃತ್ತಪರ ಕೋರ್ಸ್‌ಗಳತ್ತ ಆಸಕ್ತರಾಗಬೇಕು: ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ನಿರ್ಮಾಣದ ಸ್ಕಿಲ್‌ ಇಂಡಿಯಾ ಪರಿಕಲ್ಪನೆಯಂತೆ ಉದ್ಯೋಗ ಆಧಾರಿತ ಕೋರ್ಸುಗಳನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ನತ್ತ ಹೆಚ್ಚು ಗಮನಹರಿಸಬೇಕು ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಸಿ.ಎಂ. ಪ್ರಮೋದ್‌ ಸಾವಂತ್‌ ತಿಳಿಸಿದರು. ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಪೂರ್ವ ವಿಭಾಗದಲ್ಲಿ ನಡೆದ ದೀಪಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Tap to resize

Latest Videos

ಅಭಿ​ವೃದ್ಧಿ ವಿಚಾ​ರ​ದಲ್ಲಿ ಶಿರಾ​ಳ​ಕೊಪ್ಪ, ಶಿಕಾ​ರಿ​ಪುರ ಕಣ್ಣು​ಗ​ಳಿ​ದ್ದಂತೆ: ಸಂಸದ ಬಿ.ವೈ.ರಾಘವೇಂದ್ರ

ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಜೀವನದಲ್ಲಿ ನಿರ್ಣಾಯಕ ಘಟ್ಟವಾಗಿದ್ದು, ತಮ್ಮ ಮುಂದಿನ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚು ಗಮನ ಹರಿಸಿದರೆ ಸ್ಕಿಲ್‌ ಇಂಡಿಯಾದ ಮೂಲಕ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಾಜೇಶ್‌ ನಾಯ್ಕ್ ಉಳಿಪಾಡಿಗುತ್ತು, ವೇದವ್ಯಾಸ ಕಾಮತ್‌, ಪ್ರಸಾದ್‌ ನೇತ್ರಾಲಯದ ನಿರ್ದೇಶಕ ಕೃಷ್ಣಪ್ರಸಾದ್‌ ಕೂಡ್ಲು , ಉದ್ಯಮಿಗಳಾದ ನವೀನ್‌ ಹೆಗ್ಡೆ ಮುಂಬೈ, ಬಾಲಕೃಷ್ಣ ಭಂಡಾರಿ, ಹಂಪಿ ವಿ.ವಿ. ಉಪಕುಲಪತಿ ಡಾ.ಎಸ್‌.ಸಿ. ರಮೇಶ್‌ ಅತಿಥಿಗಳಾಗಿ ಭಾಗವಹಿಸಿದ್ದರು. ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತಮಾಧವ ವೇದಿಕೆಯಲ್ಲಿದ್ದರು.

ವಿಶ್ವ ಕೊಂಕಣಿ ಸಮ್ಮೇಳನ ಅಗತ್ಯ: ಗೋವಾದಲ್ಲಿ ವಿಶ್ವ ಮಟ್ಟದ ಕೊಂಕಣಿ ಸಮ್ಮೇಳನ ಮಾಡಲು ಇಲ್ಲಿಯವರು ಸಹಕಾರ ನೀಡಿದರೆ ಸಮರ್ಥವಾಗಿ ಮಾಡಲು ಗೋವಾ ಸರ್ಕಾರ ತಯಾರಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್‌ ಹೇಳಿದರು. ಬುಧವಾರ ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ದಿ. ಬಸ್ತಿ ವಾಮನ ಶೆಣೈ ಅವರ ಹಿತ್ತಾಳೆಯ ಪ್ರತಿಮೆ, ಗೋವಾ ಮುಖ್ಯಮಂತ್ರಿ ದಿ.ಡಾ.ಮನೋಹರ್‌ ಪರೀಕ್ಕರ್‌ ಭಾವಚಿತ್ರ ಅನಾವರಣ ಮತ್ತು ವಿವಿಧ ಉದ್ಘಾಟನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಕೊಂಕಣಿಯಲ್ಲೇ ಮಾತನಾಡಿದರು. ಕೇರಳದಲ್ಲಿ ಅಖಿಲ ಭಾರತ ಮಟ್ಟದ ಕೊಂಕಣಿ ಸಮ್ಮೇಳನ ನಡೆದಿದೆ. 

ಆದರೆ ವಿಶ್ವ ಮಟ್ಟದ ಕೊಂಕಣಿ ಸಮ್ಮೇಳನ ಈ ವರೆಗೆ ನಡೆದಿಲ್ಲ. ಗೋವಾ ರಾಜ್ಯ ಕೊಂಕಣಿಯ ರಾಜಧಾನಿಯಾಗಿರುವುದರಿಂದ ಇಲ್ಲಿಯೇ ವಿಶ್ವ ಕೊಂಕಣಿ ಸಮ್ಮೇಳನ ಮಾಡುವ ಮೂಲಕ ಜಗತ್ತಿನಲ್ಲಿರುವ ಎಲ್ಲ ಕೊಂಕಣಿ ಸಮುದಾಯಗಳನ್ನು ಒಟ್ಟು ಸೇರಿಸುವ ಕೆಲಸ ಆಗಬೇಕಿದೆ ಎಂದರು. ಪೋಚ್‌ರ್‍ಗೀಸ್‌ರ ಕಾಲದಲ್ಲಿ ಧರ್ಮ ಪರಿವರ್ತನೆಯ ಸಂದಿಗ್ದ ಪರಿಸ್ಥಿತಿಗೆ ಸಿಲುಕಿಕೊಂಡು 200-300 ವರ್ಷಗಳ ಹಿಂದೆ ನಮ್ಮ ಕೊಂಕಣಿ ಸಮುದಾಯದ ಹಿರಿಯರು ಗೋವಾದಿಂದ ಕೇರಳ, ಕರ್ನಾಟಕದ ಕರಾವಳಿ ತೀರಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆ ನಿಂತು ತಮ್ಮ ಭಾಷೆ, ಸಂಸ್ಕೃತಿಯನ್ನು ಕೂಡ ಉಳಿಸಿ ಬೆಳೆಸಿದರು. 

ನನ್ನ ಮೇಲೆ ದಾಳಿಗಷ್ಟೆ ಇಡಿ ಇರೋದು: ಡಿ.ಕೆ.ಶಿವಕುಮಾರ್‌

ಈಗ ಗೋವಾದಲ್ಲಿ ಮತ್ತೆ ಕೊಂಕಣಿ ಸಮುದಾಯದವರು ಉದ್ಯಮ ಸ್ಥಾಪನೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ಕೊಂಕಣಿ ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಕೊಳ್ಳುವ ಜತೆಯಲ್ಲಿ ಕೊಂಕಣಿ ಕಲಿತವರಿಗೂ ಉತ್ತಮವಾದ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರಿನ ರಾಷ್ಟ್ರೀಯ ಗ್ರಂಥಾಲಯದ ಮೂಲಕ ಗೆಜೆಟೆಟ್‌, ಕೃತಿಗಳ ಕೊಂಕಣಿ ತರ್ಜುಮೆಗೆ ಬಹಳಷ್ಟುಮಂದಿಗೆ ಅವಕಾಶವಿದೆ. ಗೋವಾದ ಕೊಂಕಣಿ ಅಕಾಡೆಮಿಗೆ ಪ್ರತ್ಯೇಕವಾದ ಕಟ್ಟಡದ ಕೆಲಸ ಕೂಡ ಪೂರ್ಣವಾಗುತ್ತಿದ್ದು, ಈ ಮೂಲಕ ಸುಸಜ್ಜಿತ ವಿಭಾಗ, ಸಂಶೋಧನೆ ಕೆಲಸವನ್ನು ಶುರು ಮಾಡಿದ್ದೇವೆ. ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಮೂಲಕ ಸಾಕಷ್ಟುಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.

click me!