'ನಿಮ್ಮ ಪತ್ನಿ ಹೆಸರಲ್ಲಿ ನೀವು ತಗೊಂಡಿರೋ 14 ಅಕ್ರಮ ಸೈಟ್ ವಾಪಸ್ ಕೊಟ್ಬುಡಿ' ಅಂತಾ ಎರಡೂವರೆ ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸಾಹೇಬರಿಗೆ ಸಲಹೆ ರೂಪದಲ್ಲಿ ಹೇಳಿದ್ದೆ. ಅಂದು ನನ್ನ ಮಾತು ಕೇಳಿದ್ದಿದ್ರೆ ಅವರಿಗಿಂದು ಇಂಥ ಸ್ಥಿತಿ ಬರ್ತಿರಲಿಲ್ಲ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.
ದಾವಣಗೆರೆ (ಸೆ.29): 'ನಿಮ್ಮ ಪತ್ನಿ ಹೆಸರಲ್ಲಿ ನೀವು ತಗೊಂಡಿರೋ 14 ಅಕ್ರಮ ಸೈಟ್ ವಾಪಸ್ ಕೊಟ್ಬುಡಿ' ಅಂತಾ ಎರಡೂವರೆ ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸಾಹೇಬರಿಗೆ ಸಲಹೆ ರೂಪದಲ್ಲಿ ಹೇಳಿದ್ದೆ. ಅಂದು ನನ್ನ ಮಾತು ಕೇಳಿದ್ದಿದ್ರೆ ಅವರಿಗಿಂದು ಇಂಥ ಸ್ಥಿತಿ ಬರ್ತಿರಲಿಲ್ಲ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.
ಮುಡಾ ಹಗರಣ ವಿಚಾರವಾಗಿ ಇಂದು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಹಗರಣ ಬಯಲಿಗೆ ಬಂದಾಗಲೇ ಅಕ್ರಮ ಸೈಟ್ ಸರ್ಕಾರಕ್ಕೆ ವಾಪಸ್ ಕೊಟ್ಟುಬಿಟ್ಟಿದ್ದರೆ, ತನಿಖೆ ತಾರ್ಕಿಕ ಅಂತ್ಯ ಕಾಣುತ್ತಿತ್ತು. ಅದರ ಜೊತೆಗೆ ಯಾರೆಲ್ಲ ತಗೊಂಡಿದ್ದಾರೋ ಅವರೆಲ್ಲ ಹೊರಗೆ ಬರ್ತಿದ್ರು. 62 ಕೋಟಿ ರೂ. ಪರಿಹಾರ ಕೊಟ್ಟರೆ ವಾಪಸ್ ಕೊಡತಿನಿ ಅಂದ್ರು. ಯಾವಾಗ ಸಿದ್ದರಾಮಯ್ಯನವರ ಬಾಯಲ್ಲಿ 62 ಕೋಟಿ ರೂ. ಅಂತ ಬಂತೋ ಅವರ 45 ವರ್ಷಗಳ ರಾಜಕೀಯ ಜೀವನ ಅಂದೇ ಅಂತ್ಯವಾಯಿತು. ರಾಜ್ಯದ ಜನರು ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ನಂಬಿದ್ದರು. ಆದರೆ ಅವರ ಪ್ರಾಮಾಣಿಕತೆ ಅವರ ಬಾಯಿಂದಲೇ ಸುಳ್ಳಾಯಿತು ಎಂದರು.
undefined
ಶೂದ್ರರಿಗೆ ಮಾನ-ಮಾರ್ಯಾದೆ ಇದ್ರೆ ಬ್ರಾಹ್ಮಣರ ದೇಗುಲಕ್ಕೆ ಹೋಗಬಾರದು, ಮತ್ತೆ ನಾಲಗೆ ಹರಿಬಿಟ್ಟ ಭಗವಾನ್
ಈಗ ಕೇಸ್‌ಗೆ ಕೌಂಟರ್ ಕೇಸ್ ಅಂತಾ ಮಾತನಾಡುತ್ತಿದ್ದಾರೆ. 2023ರಲ್ಲಿ ಅಂದಿನಿ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ, ಬಿಟ್ ಕಾಯಿನ್, 40 ಪರ್ಸೆಂಟ್ ಸರ್ಕಾರ ಅಂತಾ ನೀವೇ ಕ್ಯಾಂಪೇನ್ ಮಾಡಿದ್ರಲ್ಲ. ಇವತ್ತಿಗೆ ಒಂದೂವರೆ ವರ್ಷ ಆಯ್ತು ಒಂದು ಸಣ್ಣ ಸಾಕ್ಷ್ಯ ಹುಡುಕೋಕೆ ಆಯ್ತ? ಆಗಲಿಲ್ಲ. ಆದರೆ ಈಗ ಮುಡಾ ಹಗರಣ ಸಿದ್ದರಾಮಯ್ಯರ ಕುತ್ತಿಗೆಗೆ ಬಂದಿದೆ. ಸಿಎಂ ಕುರ್ಚಿ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಈಗ ಧಮ್ಕಿ ಹಾಕ್ತೀರಾ? ಅದ್ಯಾರ ಮೇಲೆ ಕೇಸ್ ಹಾಕ್ತಿರೋ ಹಾಕಿ ಒಂದೂವರೆ ವರ್ಷದಲ್ಲಿ ಒಂದು ಸಾಕ್ಷ್ಯ ಹುಡುಕೋಕೆ ಆಗಿಲ್ಲ. ತಮ್ಮ ಮೇಲೆ ಕೇಸ್ ಬಿದ್ದಿದ್ದಕ್ಕೆ ಸೇಡಿನ ರಾಜಕಾರಣ ಮಾಡಲು ಕೇಸ್ ಹಾಕಿಸುತ್ತಿದ್ದಾರೆ. ಹಾಕಲಿ ಯಾರರ ಮೇಲೆ ಹಾಕ್ತಾರೋ ಹಾಕಲಿ ನಾವದನ್ನು ಫೇಸ್ ಮಾಡುತ್ತೇವೆ ಎಂದರು.
ನೀವೆಲ್ಲ ಟಾಪ್ ರಾಜಕಾರಣಿಗಳು ಮ್ಯೂಚುವಲ್ ಅಂಡರಸ್ಟ್ಯಾಂಡಿಂಗ್ ನಿಮಗೆ ಅವರು, ಅವರು ನಿಮಗೆ ಸಪೋರ್ಟ್ ಮಾಡ್ತಾರೆ ನೀವೆಲ್ಲ ಸೀನಿಯರ್ಸ್ ಹಣೆಬರಹ ರಾಜ್ಯದ ಜನರು ನೋಡಿದ್ದಾರೆ. ಮೊಂಡುತನ ಬಿಟ್ಟು ರಾಜೀನಾಮೆ ಕೊಡಿ ಮುಕ್ತ ನ್ಯಾಯ ಸಮ್ಮತ ತನಿಖೆಗೆ ಅವಕಾಶ ಮಾಡಿಕೊಡಿ ಎಂದರು.