Davanagere: ತಾರಕಕ್ಕೇರಿದ ಬಿಜೆಪಿ- ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ವಾರ್!

By Govindaraj S  |  First Published Dec 28, 2022, 2:41 PM IST

ದಾವಣಗೆರೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸೋಶಿಯಲ್ ಮಿಡಿಯಾ ವಾರ್ ತಾರಕಕ್ಕೇರಿದೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ನರಹಂತಕ ಎಂದು ಹೇಳಿಕೆಗಳನ್ನು ಬಿಜೆಪಿಯವರು ಪೋಸ್ಟರ್ ಮಾಡಿದ್ದರು.


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ

ದಾವಣಗೆರೆ (ಡಿ.28): ದಾವಣಗೆರೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸೋಶಿಯಲ್ ಮಿಡಿಯಾ ವಾರ್ ತಾರಕಕ್ಕೇರಿದೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ನರಹಂತಕ ಎಂದು ಹೇಳಿಕೆಗಳನ್ನು ಬಿಜೆಪಿಯವರು ಪೋಸ್ಟರ್ ಮಾಡಿದ್ದರು. ಇಷ್ಟೇ ಅಲ್ಲದೇ ಎಸ್.ಎಸ್.ಮಲ್ಲಿಕಾರ್ಜುನ್ ಮುಖಕ್ಕೆ ವೀರಪ್ಪನ್ ದೇಹ ಅಂಟಿಸಿ ಬಿಜೆಪಿಯವರು ವೈರಲ್ ಮಾಡಿದ್ದರು. ವನ್ಯಜೀವಿಗಳ ಚರ್ಮ, ಕೊಂಬು ಮಾರಾಟ ಪ್ರಕರಣದಲ್ಲಿ ಮಲ್ಲಿಕಾರ್ಜುನ್ ಕೈವಾಡ ಅಂತ ಬಿಂಬಿಸಿ ವೀರಪ್ಪನ್ ತರ ಬೇಟೆಗಾರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟರ್ ಹಾಕಿದ್ದರು. 

Tap to resize

Latest Videos

ಇದೀಗ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಪೋಸ್ಟರ್ ವಾರ್‌ಗೆ ಇಳಿದಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಬಗ್ಗೆ ಪೋಸ್ಟರ್ ಮಾಡಿ ಹಾಕಿದ್ದಾರೆ. ಪೇ ಸಿಎಂ ಮಾದರಿಯಲ್ಲಿ ಪೇ ಜಿಎಂಎಸ್ ಕರೋ... ಪೇ ಜಿಎಂಎಸ್ ಅಂತ ಫೋಸ್ಟರ್ ವೈರಲ್ ಮಾಡಿದ್ದಾರೆ. ಯುವ ಪೀಳಿಗೆಗೆ ಕ್ಯಾನ್ಸರ್‌ ಹಂಚುತ್ತಿರುವ ಯುಮ ಕಿಂಕರ, 40% ಸಿದ್ದೇಶ್ವರನ ಚೇಲಾ ಯಶವಂತರಾವ್ ಜಾಧವ್, ಬೇಲಿಕೆರೆ ಅದಿರು ಪ್ರಕರಣ ಹೀಗೆ ವಿವಿಧ ಪೋಸ್ಟರ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ನವರು ಹರಿಬಿಟ್ಟಿದ್ದಾರೆ. 

ಧರ್ಮವನ್ನು ನಾವು ರಕ್ಷಿಸದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ: ಶಾಸಕ ರೇಣುಕಾಚಾರ್ಯ

ಸೋಶಿಯಲ್ ಮಿಡಿಯಾದಲ್ಲಿ ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್ ಶುರುವಾಗಿದ್ದು ವಾಟ್ಸಪ್, ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ನಾಯಕರ ಭಾವಚಿತ್ರ ವಿರೂಪಗೊಳಿಸಿದ ಪೋಟೋಗಳು ಹರಿದಾಡುತ್ತಿವೆ. ಕಳೆದೆರೆಡು ದಿನಗಳಿಂದ ಪೋಸ್ಟರ್ ವಾರ್  ಜೋರಾಗಿಯೇ ನಡೆಯುತ್ತಿದ್ದು, ದಾವಣಗೆರೆ ಸಾರ್ವಜನಿಕರಿಗೆ ಪುಕ್ಕಟ್ಟೆ ಮನರಂಜನೆ‌ ನೀಡುತ್ತಿವೆ.

click me!