ಸುಮಲತಾ, ರಮ್ಯಾ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲು ರೆಡಿ: ಸಚಿವ ಕೆ.ಸಿ.ನಾರಾಯಣಗೌಡ

Published : May 15, 2022, 03:20 AM IST
ಸುಮಲತಾ, ರಮ್ಯಾ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲು ರೆಡಿ: ಸಚಿವ ಕೆ.ಸಿ.ನಾರಾಯಣಗೌಡ

ಸಾರಾಂಶ

ಸುಮಲತಾ ಬರಲಿ, ರಮ್ಯಾನೇ ಬರಲಿ ನಾವು ಪಕ್ಷಕ್ಕೆ ಸೇರಿಸಿಕೊಳ್ಳಲು ರೆಡಿಯಾಗಿದ್ದೇವೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.ಸುಮಲತಾ ಹಾಗೂ ರಮ್ಯಾ ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸುಮಲತಾ ಹಾಗೂ ರಮ್ಯಾ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲು ರೆಡಿ ಇದ್ದೇವೆ.

ಪಾಂಡವಪುರ (ಮೇ.15): ಸುಮಲತಾ (Sumalatha) ಬರಲಿ, ರಮ್ಯಾನೇ (Ramya) ಬರಲಿ ನಾವು ಪಕ್ಷಕ್ಕೆ ಸೇರಿಸಿಕೊಳ್ಳಲು ರೆಡಿಯಾಗಿದ್ದೇವೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ (KC Narayana Gowda) ಹೇಳಿದರು.ಸುಮಲತಾ ಹಾಗೂ ರಮ್ಯಾ ಬಿಜೆಪಿ (BJP) ಸೇರ್ಪಡೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸುಮಲತಾ ಹಾಗೂ ರಮ್ಯಾ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲು ರೆಡಿ ಇದ್ದೇವೆ. ಈ ವಿಚಾರದಲ್ಲಿ ಪಕ್ಷದ ಹಿರಿಯರ ನಿರ್ಧಾರಕ್ಕೆ ನಾವು ಬದ್ಧ. ಅವರು ಪಕ್ಷದ ಸಂಪರ್ಕದಲ್ಲಿ ಇರುವುದನ್ನು ಬಿಡಿಸಿ ಹೇಳಲು ಸಾಧ್ಯವಿಲ್ಲ. ಪಕ್ಷದಲ್ಲಿ ಏನೇನೋ ಬೆಳವಣಿಗೆಗಳು ನಡೆಯುತ್ತದೆ. ಅದನ್ನು ಬಹಿರಂಗವಾಗಿ ಹೇಳೋಕೆ ಆಗುವುದಿಲ್ಲ ಎಂದರು. ನಮ್ಮ ಪಕ್ಷ ಮಂಡ್ಯದಲ್ಲಿ ಹಾಗೂ ರಾಜ್ಯದಲ್ಲಿ ಭದ್ರವಾಗಿದೆ. 

ಪಕ್ಷ ಶಕ್ತಿಯುತವಾಗಿ ಇದ್ದಾಗ ಪಕ್ಷಕ್ಕೆ ಬೇರೆಯವರು ಬರುವುದು ಸಹಜ. ನಮ್ಮ ಪಕ್ಷ ಮುಂಬರುವ ಚುನಾವಣೆಯಲ್ಲಿ 140 ರಿಂದ 150 ಸ್ಥಾನಗಳಲ್ಲಿ ಗೆಲ್ಲಲಿದೆ. ಅವರು ಪಕ್ಷ ಸೇರ್ಪಡೆ ವಿಚಾರವಾಗಿ ನಮ್ಮನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ. ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ ಎಂದು ಜಾರಿಕೊಂಡರು. ಫ್ರಾನ್ಸ್‌ಗೆ ತೆರಳುತ್ತಿದ್ದ ಕ್ರೀಡಾಪಟುಗಳಿಗೆ ವೀಸಾ ಸಮಸ್ಯೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕಾನೂನು ಸಮಸ್ಯೆಯಾಗಿತ್ತು. ನಮ್ಮ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿಕೊಟ್ಟಿದ್ದೀನಿ. ಕ್ರೀಡಾಪಟುಗಳಿಗೆ ಏನು ಸಮಸ್ಯೆಯಾಗಿದೆ ಎನ್ನುವುದನ್ನು ಶಾಲಿನಿ ರಜಿನೀಶ್‌, ಅನುರಾಗ್‌ ಠಾಕೂರ್‌ ಬಳಿ ಮಾತನಾಡಿದ್ದೀನಿ. ಏತಕ್ಕಾಗಿ ಸಮಸ್ಯೆಯಾಗಿದೆ ಎಂದು ಮಾಹಿತಿ ಬರುತ್ತಿದೆ. ಈ ಬಗ್ಗೆ ನಾಳೆ ಮಾತನಾಡುತ್ತೇನೆ. ಎಲ್ಲರನ್ನೂ ಫ್ರಾನ್ಸ್‌ಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಅಷ್ಟುಸುಲಭವಾಗಿ ಬಿಡೋಲ್ಲ ಎಂದು ಹೇಳಿದರು.

Mandya ನಾರಾಯಣಗೌಡ ಆಪ್ತನಿಗೆ ಮತ್ತೊಮ್ಮೆ ಮೂಡಾ ಅಧ್ಯಕ್ಷ ಪಟ್ಟ

ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ: ಸಹಕಾರಿ ಸಂಸ್ಥೆಗಳು ಅಭಿವೃದ್ಧಿ ಹೊಂದಿದಷ್ಟುಅದರ ಫಲ ನಾಡಿನ ರೈತರಿಗೆ ದೊರೆಯುತ್ತದೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಟಿಎಪಿಸಿಎಂಎಸ್‌ ವತಿಯಿಂದ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ರೈತರ ದೃಷ್ಟಿಯಿಂದ ರೂಪಿತವಾಗಿರುವ ಸಹಕಾರ ಸಂಘಗಳು ಹೆಚ್ಚು ಅಭಿವೃದ್ಧಿ ಹೊಂದಬೇಕು ಎಂದರು. ಸಹಕಾರಿ ಸಂಸ್ಥೆಗಳು ಅಭಿವೃದ್ಧಿ ಹೊಂದಿದಷ್ಟುಅದರ ಫಲ ನಾಡಿನ ರೈತರಿಗೆ ದೊರಕುತ್ತದೆ. ಒಬ್ಬ ಜವಾಬ್ದಾರಿಯುತ ಸಚಿವನಾಗಿ ನಾನು ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ.

ಪಟ್ಟಣದ ಟಿಎಪಿಸಿಎಂಎಸ್‌ ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಸ್ಥೆಯಾಗಿ ಹೆಸರು ಮಾಡಿದೆ. ಒಳ್ಳೆಯ ಕೆಲಸ ಮಾಡುತ್ತಿರುವ ಆಡಳಿತ ಮಂಡಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸೊಸೈಟಿ ಆವರಣ ಡಾಂಬರೀಕರಣವಾಗದೆ ಮಳೆಗಾಲದಲ್ಲಿ ಲಾರಿಗಳು ಮತ್ತು ರೈತರು ಒಳಬರಲು ತೊಂದರೆಯಾಗುತ್ತಿದೆ. ಡಾಂಬರೀಕರಣಕ್ಕೆ ಅಗತ್ಯವಾದ 50 ಲಕ್ಷ ರು. ಅನುದಾನ ಒದಗಿಸಿಕೊಡುವಂತೆ ಆಡಳಿತ ಮಂಡಳಿ ನಿರ್ದೇಶಕ ಎಸ್‌.ಆರ್‌.ನವೀನ್‌ಕುಮಾರ್‌ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದರಲ್ಲದೆ ಮುಂದಿನ ಚುನಾವಣೆಯ ನಂತರವೂ ನಾನೇ ಶಾಸಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Ramya Politics ರಮ್ಯಾ ರಾಜಕೀಯ ರೀ-ಎಂಟ್ರಿ ಮುನ್ಸೂಚನೆ?

ಮಾಜಿ ಶಾಸಕ ಬಿ.ಪ್ರಕಾಶ್‌ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಗಳ ಪಾತ್ರ ದೊಡ್ಡದು. ಚುನಾಯಿತ ಸದಸ್ಯರು ಪ್ರಾಮಾಣಿಕರಾದಾಗ ಸಹಕಾರ ಸಂಘಗಳ ಸೋರಿಕೆ ತಡೆಗಟ್ಟಬಹುದು. ರಾಜ್ಯಕ್ಕೆ ಮಾದರಿಯಾಗಿ ಸಂಸ್ಥೆಯನ್ನು ಕಟ್ಟಿಬೆಳೆಸಿದ ಕೀರ್ತಿ ಮಾಜಿ ಶಾಸಕ ದಿ.ಎಸ್‌.ಎಂ. ಲಿಂಗಪ್ಪ ಅವರಿಗೆ ಸಲ್ಲುತ್ತದೆ. ಪ್ರಸ್ತುತ ಆಡಳಿತ ಮಂಡಳಿ ಲಿಂಗಪ್ಪ ತೋರಿಸಿದ ಮಾರ್ಗದಲ್ಲಿಯೇ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ರಾಜ್ಯಾದ್ಯಂತ ಇಂದು ಸಹಕಾರ ಸಂಸ್ಥೆಗಳು ಸಂಕಷ್ಟದಲ್ಲಿಯೇ ನಡೆಯುತ್ತಿವೆ. ಖಾಸಗಿಯವರ ಪ್ರಬಲ ಸ್ಪರ್ಧೆಯನ್ನು ಸಹಕಾರ ಸಂಘಗಳು ಎದುರಿಸುತ್ತಿವೆ. ಸ್ಪರ್ಧೆ ನಡುವೆಯೂ ನಮ್ಮ ಸಂಸ್ಥೆ 5 ಕೋಟಿಯಷ್ಟುಗೊಬ್ಬರ ಮಾರಾಟ ವಹಿವಾಟು ನಡೆಸಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!