ಕೊರೋನಾ ಭೀತಿ ಮಧ್ಯೆಯೂ ರಂಗೇರಿದ ಚುನಾವಣೆ: ಮೈತ್ರಿಕೂಟದ ಸೀಟು ಹಂಚಿಕೆ ಫೈನಲ್​

By Suvarna NewsFirst Published Oct 3, 2020, 8:07 PM IST
Highlights

ಬಿಹಾರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ಯುಪಿಎ ಪೂರ್ಣಗೊಳಿಸಿದೆ. ಈ ವಿಷಯವನ್ನು ಮೈತ್ರಿಕೂಟದ ನಾಯಕರು ಪ್ರಕಟಿಸಿದ್ದಾರೆ. 

ಪಟ್ನಾ, (ಅ.03): ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಶ್ವಿ ಯಾದವ್ ಬಿಹಾರ ವಿಧಾನಸಭಾ ಚುನಾವಣೆ 2020 ರಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದೆ.

ಬಿಹಾರ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವುದಕ್ಕೆ ಯುಪಿಎ ನಾಯಕರು ತೀರ್ಮಾನಿಸಿದ್ದು, ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

3 ಹಂತದಲ್ಲಿ ಬಿಹಾರ ಚುನಾವಣೆ: ನ.10ಕ್ಕೆ ಮತ ಎಣಿಕೆ 

ಸೀಟುಹಂಚಿಕೆ ವಿಚಾರ ಪ್ರಕಟಿಸಿದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂ) 4, ಸಿಪಿಐ 6, ಸಿಪಿಐ (ಎಂಎಲ್​) 19, ಕಾಂಗ್ರೆಸ್ 70, ಆರ್​ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವಾಲ್ಮೀಕಿ ನಗರ ಲೋಕಸಭಾ ಉಪಚುನಾವಣೆಯ ಹೊರತಾಗಿ ಈ ಸೀಟು ಹಂಚಿಕೆ ನಡೆದಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯನ್ನು ಯುಪಿಎ ಮೈತ್ರಿಕೂಟದ ಪಕ್ಷಗಳೆಲ್ಲವೂ ಒಟ್ಟಾಗಿ ಎದುರಿಸಲಿವೆ. ಕಾಂಗ್ರೆಸ್​, ಆರ್​ಜೆಡಿ, ಸಿಪಿಐ, ಸಿಪಿಎಂಗಳ ಜತೆಗೆ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿ ಕೂಡ ಮೈತ್ರಿಕೂಟ ಸೇರ್ಪಡೆಗೊಂಡಿದೆ. ಬಿಹಾರದಲ್ಲಿ ಯುಪಿಎ ಮೈತ್ರಿಕೂಟಕ್ಕೆ ಆರ್​ಜೆಡಿಯದ್ದೇ ನಾಯಕತ್ವ ಎಂದು ಕಾಂಗ್ರೆಸ್​ ನಾಯಕ ಅವಿನಾಶ್ ಪಾಂಡೆ ಸ್ಪಷ್ಟಪಡಿಸಿದ್ದಾರೆ.

click me!