ಡಿಕೆಶಿಯ ಒಂದೇ ಮೀಂಟಿಂಗ್ ಗೆ ಹಾಡಿ ಹೊಗಳಿದ ಉದ್ಯಮಿ ಮೋಹನ್ ದಾಸ್ ಪೈ!

Published : Oct 26, 2025, 01:59 PM IST
Mohandas Pai Vs DK Shivakumar

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಇದೀಗ ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಉದ್ಯಮಿ ಮೋಹನ್ ದಾಸ್ ಪೈ ಅವರಂತಹ ಪ್ರಮುಖರು, ಡಿಕೆಶಿ ಅವರ 'ನಾಗರಿಕರೊಂದಿಗೆ ನಡಿಗೆ' ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು: ನಗರ ಅಭಿವೃದ್ಧಿಯ ವಿಚಾರವಾಗಿ ಉದ್ಯಮಿಗಳಿಂದ ಬಂದಿದ್ದ ಟೀಕೆಗಳ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಬೆಳವಣಿಗೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಇದೀಗ ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಉದ್ಯಮಿ ಮೋಹನ್ ದಾಸ್ ಪೈ ಅವರು ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ನಿನ್ನೆ ರಾತ್ರಿ ನಡೆದ ವಿಶೇಷ ಡಿನ್ನರ್ ಮೀಟಿಂಗ್ ವೇಳೆ ಡಿಕೆ ಶಿವಕುಮಾರ್ ಅವರು ನಗರದಲ್ಲಿನ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ವಿಶ್ವಾಸವನ್ನು ಗಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಹೂಡಿಕೆ ವಾತಾವರಣ ಕುರಿತಂತೆ ಉದ್ಯಮಿಗಳಿಂದ ಹಲವು ಸಲಹೆಗಳನ್ನು ಪಡೆದುಕೊಂಡರು.

ಸಂವಾದದ ಬಳಿಕ, ಡಿಕೆ ಶಿವಕುಮಾರ್ ಅವರ “ನಾಗರೀಕರೊಂದಿಗೆ ನಡಿಗೆ” ಕಾರ್ಯಕ್ರಮಕ್ಕೆ ಉದ್ಯಮಿಗಳಿಂದ ಪ್ರಶಂಸೆಯ ಸುರಿಮಳೆಬಂತು. ಈ ಕಾರ್ಯಕ್ರಮದ ಮೂಲಕ ಜನರ ಮಧ್ಯೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುತ್ತಿರುವುದಕ್ಕೆ ಉದ್ಯಮಿಗಳ ಶ್ಲಾಘನೆ ವ್ಯಕ್ತವಾಯಿತು. ಮುಖ್ಯವಾಗಿ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

ಧನ್ಯವಾದಗಳು ಡಿಸಿಎಂ ಡಿಕೆ ಶಿವಕುಮಾರ್ ಈ ಅದ್ಭುತ ಕಾರ್ಯಕ್ಕಾಗಿ. ನಾಗರಿಕರನ್ನು ಭೇಟಿ ಮಾಡುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರಿಗೆ ಸಹಾಯ ಮಾಡುವುದು, ಅವರ ಸಮಸ್ಯೆಗಳನ್ನು ಪರಿಹರಿಸುವುದು ಮಹಾನ್ ರಾಜಕೀಯ ನಾಯಕರ ಕೆಲಸ. ನಿಮ್ಮ ಸಂವಹನವು ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ. ಕಳೆದ 3 ತಿಂಗಳುಗಳಲ್ಲಿ ನೀವು ಅನೇಕ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ. ನಮ್ಮ ನಗರ, ನೀವು ಜಿಬಿಎ ರಚಿಸುವ ಮೂಲಕ ಯಾವುದೇ ಭಾರತೀಯ ನಗರಕ್ಕೆ ದಶಕಗಳಲ್ಲಿ ಅತಿದೊಡ್ಡ ನಗರ ಸುಧಾರಣೆಯನ್ನು ಪೂರ್ಣಗೊಳಿಸಿದ್ದೀರಿ! ನಾವು ಭವಿಷ್ಯವನ್ನು ಭರವಸೆಯಿಂದ ನೋಡುತ್ತೇವೆ ಎಂದು ಉದ್ಯಮಿ ಕಿರಣ್

ಉದ್ಯಮಿಗಳಿಂದ ಬಂದಿರುವ ಈ ಮೆಚ್ಚುಗೆ ಡಿಕೆ ಶಿವಕುಮಾರ್ ಅವರ ಕಾರ್ಯತಂತ್ರಕ್ಕೆ ಮತ್ತೊಂದು ಬಲ ತುಂಬಿದೆ. ನಗರದ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ, ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಕೈಗೊಂಡಿರುವ ಮುಂದಾಳತ್ವ ಕ್ರಮಗಳು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ