ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಸೇರಿ 114 ಕೋಟಿ ರೂ. ಒಡೆಯರಾಗಿರುವ ಶಾಸಕ ಎಂ.ಬಿ. ಪಾಟೀಲರ ಬಳಿ ಒಂದು ಗುಲಗಂಜಿಯಷ್ಟೂ ಬಂಗಾರವಿಲ್ಲ.
ವಿಜಯಪುರ (ಏ.17) : ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಸೇರಿ 114 ಕೋಟಿ ರೂ. ಒಡೆಯರಾಗಿರುವ ಶಾಸಕ ಎಂ.ಬಿ. ಪಾಟೀಲರ ಬಳಿ ಒಂದು ಗುಲಗಂಜಿಯಷ್ಟೂ ಬಂಗಾರವಿಲ್ಲ. ಅವರ ಧರ್ಮಪತ್ನಿ ಆಶಾ ಪಾಟೀಲ ಅವರು ಚರಾಸ್ತಿಯಲ್ಲಿ ಅವರಗಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದಾರೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಂ.ಬಿ. ಪಾಟೀಲರು ತಾವು ಘೋಷಿಸಿರುವಂತೆ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತವಾಗಿ 94,29,41,500 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಅವರ ಧರ್ಮಪತ್ನಿ ಆಶಾ ಪಾಟೀಲ ಅವರು ಸ್ವಯಾರ್ಜಿತ-ಪಿತ್ರಾರ್ಜಿತ ಸೇರಿ 24,32,13,600 ಕೋಟಿ ರೂ. ಒಡೆಯರಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಎಂ.ಬಿ. ಪಾಟೀಲರ ಬಳಿ ನಗದು ರೂಪದಲ್ಲಿ 1 ಲಕ್ಷ ರೂ. ಇದ್ದು, ಆಶಾ ಪಾಟೀಲ ಅವರ ಬಳಿ 50 ಸಾವಿರ ರೂ.ಗಳಿವೆ.
ಹೊಸಕೋಟೆಯಲ್ಲ ಇದು ಶ್ರೀಮಂತರ ಕೋಟೆ: 1,600 ಕೋಟಿ ಒಡೆಯ ಎಂಟಿಬಿ ನಾಗರಾಜ್, ಶತಕೋಟಿ ವೀರ ಶರತ್ ಬಚ್ಚೇಗೌಡ
ಎಂ.ಬಿ. ಪಾಟೀಲರು ಒಟ್ಟು 8,59,69,928 ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಆಶಾ ಪಾಟೀಲರು 12,39,05,877 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಚರಾಸ್ತಿಯ ಪೈಕಿ ಎಂ.ಬಿ. ಪಾಟೀಲರು ಹಲವಾರು ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ, ಅವರ ಹೆಸರಿನಲ್ಲಿ 8 ಲಕ್ಷ ರೂ. ಮೌಲ್ಯದ ಹೋಂಡಾ ಜೀಪ್, 97.22 ಲಕ್ಷ ರೂ. ಮರ್ಸಿಡಿಸ್ ಬೆಂಜ್, 1.50 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು ಹೊಂದಿದ್ದಾರೆ. ಆಶಾ ಪಾಟೀಲ ಅವರು 8.33 ಲಕ್ಷ ರೂ. ಮೌಲ್ಯದ ಹೋಂಡಾ ಝಾಜ್, 14.78 ಲಕ್ಷ ರೂ. ಮೌಲ್ಯದ ಸ್ಕಾರ್ಫಿಯೋ ಸೇರಿದಂತೆ ಹಲವಾರು ಕಾರುಗಳು ಅವರ ಹೆಸರಿನಲ್ಲಿವೆ.ಕೋಟಿ ಕೋಟಿ ಒಡೆಯನಾದರೂ ಸಹ ಎಂ.ಬಿ. ಪಾಟೀಲರ ಬಳಿ ಒಂದೇ ಒಂದು ಗುಂಜಿ ಬಂಗಾರವಿಲ್ಲ. ಆದರೆ ಅವರ ಪತ್ನಿ ಆಶಾ ಫಾಟೀಲ ಅವರ ಬಳಿ 92.80 ಲಕ್ಷ ರೂ. ಮೌಲ್ಯದ ಬಂಗಾರವಿದೆ.
ಕೋಟಿ ಕೋಟಿ ಸ್ಥಿರಾಸ್ತಿ: ಚರಾಸ್ತಿಯ ಜೊತೆಗೆ ಕೋಟಿ ಕೋಟಿ ರೂ. ಸ್ಥಿರಾಸ್ತಿಯನ್ನು ಸಹ ಎಂ.ಬಿ. ಪಾಟೀಲ ಹಾಗೂ ಆಶಾ ಪಾಟೀಲ ಹೊಂದಿದ್ದಾರೆ. ಎಂ.ಬಿ. ಪಾಟೀಲರು ಸ್ವಯಾರ್ಜಿತ ರೂಪದಲ್ಲಿ 87.61 ಕೋಟಿ ರೂ. ಹಾಗೂ ಪಿತ್ರಾರ್ಜಿತ ರೂಪದಲ್ಲಿ 6,68,46,500 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದೇ ತೆರನಾಗಿ ಆಶಾ ಪಾಟೀಲ ಅವರು ಸ್ವಯಾರ್ಜಿತ ರೂಪದಲ್ಲಿ 20,80,26,000 ರೂ. ಹಾಗೂ ಪಿತ್ರಾರ್ಜಿತ ರೂಪದಲ್ಲಿ 3,51,87,600 ರೂ. ಆಸ್ತಿ ಹೊಂದಿದ್ದಾರೆ. ವಿವಿಧ ಭಾಗಗಳಲ್ಲಿ ಕೃಷಿ ಜಮೀನು, ಬೆಂಗಳೂರು ಮೊದಲಾದ ಕಡೆಗಳಲ್ಲಿ ವಾಣಿಜ್ಯ ಕಟ್ಟಡ, ಅಪಾರ್ಟಮೆಂಟ್, ಹೋಟೆಲ್ ಸಾಮ್ರಾಟ್, ವಿವಿಧ ಕಂಪನಿಗಳಲ್ಲಿ ಶೇರು ತೊಡಗಿಸಿರುವ ಬಗ್ಗೆಯೂ ಎಂ.ಬಿ. ಪಾಟೀಲರು ವಿವರವಾದ ಘೋಷಣೆಯನ್ನು ಘೋಷಣಾ ಪತ್ರದಲ್ಲಿ ಮಾಡಿದ್ದಾರೆ.
ಡಿ.ಕೆ. ರವಿ ಪತ್ನಿ ಕುಸಮಾ ಆಸ್ತಿ ಮೌಲ್ಯ 2 ಕೋಟಿ: ಒಂದು ಕಿಲೋ ಬಂಗಾರ
34.26 ಕೋಟಿ ರೂ. ಸಾಲ: ಕೋಟಿ ಕೋಟಿ ಒಡೆಯನಾಗಿರುವ ಎಂ.ಬಿ. ಪಾಟೀಲರಿಗೆ ಒಟ್ಟು 34,26,50,980 ಸಾಲವಿದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ಗೃಹ ಸಾಲದ ರೂಪದಲ್ಲಿ 2.42 ಕೋಟಿ ರೂ., ಶೈಕ್ಷಣಿಕ ಸಾಲ (ಧೃವ ಪಾಟೀಲ) 60.67 ಲಕ್ಷ ರೂ., ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 97.94 ಕೋಟಿ ರೂ., ಬಾಗಮಾನೆ ಡೆವಲಪರ್ಸಗೆ ಪಾವತಿಸಬೇಕಾದ 4 ಕೋಟಿ ರೂ., ಎ.ಶ್ರೀನಿವಾಸ.ಪಿ. ಅವರಿಂದ 1.80 ಕೋಟಿ ರೂ. ಸಾಲ, ಬಸವೇಶ್ವರ ಶುಗರ್ಸ್ ಷೇರು ಮೇಲೆ ತೆಗೆದುಕೊಂಡ ಮುಂಗಡದ ರೂಪದಲ್ಲಿ 21.87 ಕೋಟಿ ರೂ. ಹೀಗೆ ಒಟ್ಟು 34,26,50,980 ರೂ. ಸಾಲವಿದೆ.
ಅದೇ ತೆರನಾಗಿ ಆಶಾ ಪಾಟೀಲ ಅವರು ಸಹ 12,98,49,000 ಸಾಲ ಹೊಂದಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 8,39,19,242 ರೂ., ಅದೇ ಬ್ಯಾಂಕ್‌ನಲ್ಲಿ 3,84,29,752 ರೂ. ಹಾಗೂ ಸಿ.ಆರ್. ಬಿದರಿ ಅವರ ಬಳಿ 30 ಲಕ್ಷ ರೂ. ಸಾಲ ಹೊಂದಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.