ಜೆಡಿಎಸ್ ಅಧ್ಯಕ್ಷರ ಬದಲಾವಣೆ: ಇದು ದೇವೇಗೌಡ ಕೊಟ್ಟ ಸ್ಪಷ್ಟನೆ

By Suvarna NewsFirst Published Feb 15, 2020, 7:08 PM IST
Highlights

ಸದ್ಯಕ್ಕೆ ಬಿಬಿಎಂಪಿ ಚುನಾವಾಣೆಯನ್ನು ಟಾರ್ಗೆಟ್ ಮಾಡಿರುವ ಜೆಡಿಎಸ್ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕೂ ಮೊದಲು ಜೆಡಿಎಸ್ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದು ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಹೇಳಿದ್ದಾರೆ.

ಬೆಂಗಳೂರು, [ಫೆ.15]: ಬಿಬಿಎಂಪಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ಜೆಡಿಎಸ್, ಇಂದು [ಶನಿವಾರ] ಎಚ್.ಡಿ.ದೇವೇಗೌಡ್ರು ಮಹಿಳಾ ಘಟಕ ಸಭೆ ನಡೆಸಿದರು.

ಮಹಿಳಾ ಘಟಕ ಸಭೆ ನಂತರ ಮಾತನಾಡಿದ ದೇವೇಗೌಡ್ರು, ಮಾರ್ಚ್ ಮೊದಲ ವಾರದಲ್ಲಿ  ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡುತ್ತಿದ್ದೇವೆ. 
ಶಿಘ್ರದಲ್ಲಿಯೇ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ಹೇಳಿದರು.

ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

ಲೀಲಾವತಿ ಆರ್ ಪ್ರಸಾದ್ ಗೆ ಅನಾರೋಗ್ಯದ ಕಾರಣ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿ ಮುಂದುವರೆಯಲು ಸಾಧ್ಯ ಇಲ್ಲ ಎಂದು ಅವರೆ ಹೇಳಿದ್ದಾರೆ. ಹೀಗಾಗಿ ಶಿಘ್ರದಲ್ಲೇ ಹೊಸ ಮಹಿಳಾ ರಾಜ್ಯಾಧ್ಯಕ್ಷ ರನ್ನ ಆಯ್ಕೆ ಮಾಡಲಾಗುತ್ತದೆ ಎಂದು ಎಂದರು. ಆದ್ರೆ, ಮುಂದಿನ ಮಹಿಳಾ ಘಟಕದ ರಾಜ್ಯಾಧ್ಯಕ್ಷರು ಯಾರು ಎನ್ನುವುದು ಹೆಸರು ಬಹಿರಂಗಪಡಿಸಿಲ್ಲ.

ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಹಿಳಾ ಸಮಾವೇಶ ಮಾಡುತ್ತಿದ್ದು, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೊರಮಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇನ್ನು ರಾಜ್ಯಸಭೆಗೆ ಹೋಗುವ ಬಗ್ಗೆ ಪ್ರತಿಕ್ರಿಯಿಸಿದ ಗೌಡ್ರು, ನಾನು ಈಗ ರಾಜ್ಯಸಭೆಗೂ ಹೋಗುವ ಆಸಕ್ತಿ ಅಂತೂ ಹೊಂದಿಲ್ಲ. ಹೀಗಾಗಿ ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುವ ಕೇಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

click me!