Congress Politics: ಕಾಂಗ್ರೆಸ್‌ನಲ್ಲಿ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸುವ ಬಣವಿದೆ: 'ಕೈ' ನಾಯಕನ ಆರೋಪ

By Kannadaprabha NewsFirst Published Jan 16, 2022, 11:54 AM IST
Highlights

*  ವಿಧಾನ ಪರಿಷತ್‌ ಮಾಜಿ ಸದಸ್ಯ ಶ್ರೀಕಾಂತ ಘೋಟ್ನೇಕರ್‌ ಆರೋಪ
*  ಉತ್ತರ ಕನ್ನಡ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲಲು ಈ ಕಾಂಗ್ರೆಸ್‌ ಬಣವೇ ಕಾರಣ 
*  ಜೈಲಿಗೆ ಹೋಗಿ ಬಂದವನ ಮುಂದಿಟ್ಟುಕೊಂಡು ಸುಳ್ಳು ಆರೋಪ ಹೊರಿಸುವ ಕೆಲಸ 

ಶಿರಸಿ(ಜ.15):  ಕಾಂಗ್ರೆಸ್‌ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸುವ ಒಂದು ಬಣವಿದೆ. ರಾಜಕೀಯವಾಗಿ ತಮ್ಮ ಹೊರತಾಗಿ ಯಾರಿಗೂ ಈ ಬಣ ಬೆಳೆಯಲು ಬಿಡುವುದಿಲ್ಲ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಕಾಂಗ್ರೆಸ್‌ ಪ್ರಮುಖ ಶ್ರೀಕಾಂತ ಘೋಟ್ನೇಕರ(Shrikant Ghotnekar) ಆರೋಪಿಸಿದರು.

ನಗರದ ಕೆಡಿಸಿಸಿ ಬ್ಯಾಂಕಿಗೆ ಶನಿವಾರ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ವಿಧಾನಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ(Uttara Kannada) ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲಲು ಈ ಕಾಂಗ್ರೆಸ್‌ ಬಣವೇ ಕಾರಣ ಎಂದರು.

Save Aghanashini : ನದಿ ಉಳಿಸುವ ಹೋರಾಟಕ್ಕೆ ಎಚ್‌ಡಿಕೆ ಬಲ

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳಿವೆ. ಒಂದು ಬಣ ಪಕ್ಷದ ಸಂಘಟನೆ, ಗೆಲುವಿಗೆ ಹಗಲು ರಾತ್ರಿ ದುಡಿಯುತ್ತದೆ. ಎರಡನೇ ಬಣ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ ಮಾಡುತ್ತದೆ. ಎರಡನೇ ಬಣವನ್ನು ಮುನ್ನಡೆಸುವವರು ಯಾರು ಎಂದು ಜಿಲ್ಲೆಯ ಜನ ಹಲವು ವರ್ಷದಿಂದ ನೋಡುತ್ತಿದ್ದಾರೆ. ಈ ಬಣದ ನಾಯಕನ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಮರಾಠ ಸಮುದಾಯದ ಅಭಿವೃದ್ಧಿಗೆ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದೇನೆ ಎಂಬ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಈ ಕೃತ್ಯದ ಹಿಂದೆ ಮಾಜಿ ಸಚಿವ, ಕಾನೂನು ಪದವಿಯ ಗೋಲ್ಡ್‌ ಮೆಡಲಿಸ್ವ್‌ ಮತ್ತು ಬಿಜೆಪಿ, ಜೆಡಿಎಸ್‌(JDS) ಮುಖಂಡರಿದ್ದಾರೆ. ನನ್ನ ವಿರುದ್ಧ ಮಾಡಲಾದ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಆರೋಪ ಮಾಡಿದ ಎನ್‌.ಎಸ್‌.ಜೀವೊಜಿ ಒಬ್ಬ ಬ್ಲ್ಯಾಕ್‌ ಮೇಲರ್‌. ಆತನ ವಿರುದ್ಧವೇ ಚೆಕ್‌ ಬೌನ್ಸ್‌ ಪ್ರಕರಣವಿದೆ. ಜೈಲಿಗೆ ಹೋಗಿ ಬಂದವನ ಮುಂದಿಟ್ಟುಕೊಂಡು ಸುಳ್ಳು ಆರೋಪ ಹೊರಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂಬುದೇ ಸುಳ್ಳು. ತಾಕತ್ತಿದ್ದರೆ ಈ ಬಗ್ಗೆ ದಾಖಲೆಯನ್ನು ಜೀವೋಜಿ ನೀಡಲಿ ಎಂದರು.

ಮುಂದಿನ ವಿಧಾನಸಭೆ ಚುನಾವಣೆಗೆ(Assembly Elections) ಹಳಿಯಾಳ(Haliyal) ಕ್ಷೇತ್ರದಿಂದ ನಾನೂ ಆಕಾಂಕ್ಷಿ ಎಂದು ಘೋಷಿಸಿದ ಬಳಿಕ ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ನಡೆದಿದೆ ಅಂತ ಶ್ರೀಕಾಂತ ಘೋಟ್ನೇಕರ್‌ ಹೇಳಿದ್ದಾರೆ. 

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ದೇಶವನ್ನೇ ಮಾರಾಟ ಮಾಡುತ್ತೆ: ಜಬ್ಬಾರ್‌ ಖಾನ್‌

ಭಟ್ಕಳ: ಕೇಂದ್ರದ ಬಿಜೆಪಿ ಸರ್ಕಾರದ(BJP Government) ಸಾಧನೆ ಶೂನ್ಯವಾಗಿದ್ದು, 70 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿದ್ದನ್ನು ಬಿಜೆಪಿ(BJP) ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್‌(Congress) ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಜಬ್ಬಾರ್‌ ಖಾನ್‌(Jabbar Khan) ಆರೋಪಿಸಿದ್ದರು. 

Uttara Kannada: ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಾಂಕ ನಿಗದಿ

ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಜ.05 ರಂದಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಖಾಸಗೀಕರಣಕ್ಕೆ(Privatization) ಹೆಚ್ಚು ಒತ್ತು ನೀಡುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಯಾವುದೇ ರೀತಿಯ ಗಮನಾರ್ಹ ಸಾಧನೆ ಮಾಡಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಜತೆಗೆ ದೇಶವನ್ನೇ ಮಾರಾಟ ಮಾಡಬಹುದು ಎಂದು ದೂರಿದ್ದರು.

ಬಿಜೆಪಿ ಸರ್ಕಾರಕ್ಕೆ ಜನಪರ ಚಿಂತನೆ ಇಲ್ಲ. ಕಾಂಗ್ರೆಸ್‌ನಿಂದ ಮಾತ್ರ ದೇಶದಲ್ಲಿ ಅಭಿವೃದ್ಧಿ ಮತ್ತು ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಮತ್ತು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‌ ಮಜೀದ್‌ ಶೇಖ, ಮುಖಂಡರಾದ ಅಜೀಂ ಅಂಬಾರಿ, ವಿಠಲ ನಾಯ್ಕ, ಟಿ.ಡಿ. ನಾಯ್ಕ, ವಿಷ್ಣು ದೇವಡಿಗ, ನಾರಾಯಣ ನಾಯ್ಕ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಯನಾ ನಾಯ್ಕ, ನಾರಾಯಣ ಬಿ. ನಾಯ್ಕ, ಮಹೇಶ ನಾಯ್ಕ, ಎಂ.ಪಿ. ಶೈಲೇಂದ್ರ ಗೌಡ, ಅಬ್ದುರ್‌ ರಹೀಂ ಮುಂತಾದವರಿದ್ದರು.
 

click me!