ಕಾಂಗ್ರೆಸ್‌ಗೆ ಮತ್ತೊಂದು ಆಘಾತ, ಸದ್ದಿಲ್ಲದೆ ಪಕ್ಷ ತೊರೆದ ಶಾಸಕ

By Suvarna NewsFirst Published Jul 24, 2020, 7:24 PM IST
Highlights

ಕಾಂಗ್ರೆಸ್ ಗೆ ಒಂದಾದ ಮೇಲೊಂದು ಆಘಾತ/ ಪಕ್ಷ ತೊರೆದ ಮತ್ತೊಬ್ಬ ಶಾಸಕ/  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾರಾಯಣ ಪಟೇಲ್/ 89 ಕ್ಕೆ ಇಳಿದ ಕಾಂಗ್ರೆಸ್ ಶಾಸಕರ ಸಂಖ್ಯೆ 

ಇಂದೋರ್(ಜು. 24) ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ಗೆ ಒಂದಾದ ಮೇಲೆ ಒಂದು ಆಘಾತ ಎದುರಾಗುತ್ತಲೇ ಇದೆ.  ಕಾಂಗ್ರೆಸ್ ಶಾಸಕ ನಾರಾಯಣ ಸಿಂಗ್ ಪಟೇಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಈ ಮೂಲಕ  230 ಜನರ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ  89ಕ್ಕೆ ಇಳಿದಿದೆ.  ಮಧ್ಯಪ್ರದೇಶದ 27  ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ.

ಶಾಸಕ ದುರ್ಯೋಧನ ದರ್ಪ, ತಹಶೀಲ್ದಾರ್ ಗೆ ಕಿರುಕುಳ

ಐದು ದಿನಗಳ ಹಿಂದೆ ಪ್ರದ್ಯಮ್ನ ಸಿಂಗ್ ಲೋಧಿ ಕಾಂಗ್ರೆಸ್ ತೊರೆದಿದ್ದರು.  ಮೊದಲ ಸಾರಿ ಎಂಎಲ್ ಎ ಆಗಿದ್ದ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ.  ನನ್ನ ಕ್ಷೇತ್ರ ಮಂಧಾಟಾದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಪಟೇಲ್ ತಿಳಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ಜತೆ ಕಾಂಗ್ರೆಸ್ ಶಾಸಕರು ತಂಡೊಪ ತಂಡವಾಗಿ ರಾಜೀನಾಮೆ ನೀಡಿದ್ದರು. ಆ ಪರ್ವ ಮುಂದುವರಿದೆ ಇದೆ. 

भाजपा प्रदेश अध्यक्ष श्री एवं मुख्यमंत्री श्री ने आज प्रदेश भाजपा कार्यालय में कांग्रेस छोड़कर आये मांधाता से पूर्व विधायक श्री नारायण पटेल को भाजपा की सदस्यता दिलाई। pic.twitter.com/WCkaNu5GOx

— BJP MadhyaPradesh (@BJP4MP)
click me!