PSI Recruitment Scam: ಕನಕಗಿರಿ ಶಾಸಕರ ಮತ್ತೊಂದು ಆಡಿಯೋ ವೈರಲ್‌!

By Kannadaprabha News  |  First Published Sep 7, 2022, 1:56 PM IST

ಪಿಎಸ್‌ಐ ನೇಮಕಾತಿ ವಿಚಾರದಲ್ಲಿ ಹಣದ ವ್ಯವಹಾರದ ಬಗ್ಗೆ ಮಾತನಾಡಿ ಭಾರಿ ಸುದ್ದಿಯಾಗಿದ್ದ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರದು ಎನ್ನಲಾದ ಮತ್ತೊಂದು ಆಡಿಯೋ ಮಂಗಳವಾರ ವೈರಲ್‌ ಆಗಿದೆ. ಪರಸಪ್ಪ ಎನ್ನುವ ವ್ಯಕ್ತಿಗೆ ಧಮ್ಕಿ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಆ ಆಡಿಯೋದಲ್ಲಿ ಕೇಳಿಬರುತ್ತಿದೆ.


ಕೊಪ್ಪಳ (ಸೆ.7) : ಪಿಎಸ್‌ಐ ನೇಮಕಾತಿ ವಿಚಾರದಲ್ಲಿ ಹಣದ ವ್ಯವಹಾರದ ಬಗ್ಗೆ ಮಾತನಾಡಿ ಭಾರಿ ಸುದ್ದಿಯಾಗಿದ್ದ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರದು ಎನ್ನಲಾದ ಮತ್ತೊಂದು ಆಡಿಯೋ ಮಂಗಳವಾರ ವೈರಲ್‌ ಆಗಿದೆ. ಪರಸಪ್ಪ ಎನ್ನುವ ವ್ಯಕ್ತಿಗೆ ಧಮ್ಕಿ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಆ ಆಡಿಯೋದಲ್ಲಿ ಕೇಳಿಬರುತ್ತಿದೆ.

PSI Scam ಮತ್ತೊಬ್ಬ ಬಿಜೆಪಿ ನಾಯಕನ ಹೆಸರು, ಆಡಿಯೋ ಲೀಕ್‌ನಿಂದ ರಹಸ್ಯ ಬಯಲು!

Latest Videos

undefined

ಪಿಎಸ್‌ಐ ನೇಮಕಾತಿ(PSI Scam) ವಿಷಯದಲ್ಲಿ ಶಾಸಕ ದಢೇಸೂಗೂರು(MLA Dadhesuguru) ಹಾಗೂ ಪರಸಪ್ಪ(Parasappa) ಎಂಬ ವ್ಯಕ್ತಿಯ ನಡುವೆ ನಡೆದ ಆಡಿಯೋ ಸಂಭಾಷಣೆ ಸೋಮವಾರವಷ್ಟೇ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಶಾಸಕರು ಆಡಿಯೋ ಧ್ವನಿ ನನ್ನದೇ, ಮಧ್ಯಸ್ಥಿಕೆ ನನ್ನನ್ನು ವಹಿಸುವಂತೆ ಕೇಳಿದ್ದರು. ಹಾಗಾಗಿ ಮಧ್ಯಸ್ಥಿಕೆ ವಹಿಸಿದ್ದೆ. ನಾನು ಹಣ ಪಡೆದಿಲ್ಲ ಎಂದಿದ್ದರು.

ಆದರೆ ಮಂಗಳವಾರ ಮತ್ತೊಂದು ಆಡಿಯೋ ವೈರಲ್‌ ಆಗಿದ್ದು, ಇದರಲ್ಲಿ, ನೀನು ಪ್ರೆಸ್‌ಮೀಟ್‌ ಮಾಡಲು ಹೋಗ್ತಿಯಾ.. ನಾನೇನು ನಿನ್ನ ಮನೆಗೆ ಬಂದೇನಾದ್ರು ರೊಕ್ಕ ಕೇಳಿದ್ನಾ? ನಿನ್ನ ರೊಕ್ಕ ನಾನೇನು ತಿಂದಿದ್ನಾ.. ಬೋ.. ಮಗನೆ.. ಮಾನ ಮರ್ಯಾದೆ ಇದೆಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೇ ಆಡಿಯೋದಲ್ಲಿ ಕೈ ಮಿಲಾಯಿಸವಂತಹ ಸಂಭಾಷಣೆಗಳು ನಡೆದಿವೆ.

ಇತ್ತ ಪರಸಪ್ಪ ಎನ್ನುವ ವ್ಯಕ್ತಿಯು ನಾನು ಕೊಟ್ಟಿರುವ ರೊಕ್ಕವನ್ನು ನಿಮ್ಮಲ್ಲಿ (ಶಾಸಕರನ್ನು) ಕೇಳಿರುವೆ. ವರ್ಷದಿಂದ ನನ್ನನ್ನು ಅಲೆದಾಡಿಸುತ್ತಿದ್ದೀರಿ. ನಮ್ಮ ರೊಕ್ಕ ಕೊಡಿ ಎಂದಿದ್ದೇನೆ. ಎಷ್ಟುಬಾರಿ ಕೇಳೋದು? ನಾವು ಕೇಳಿದ್ರೂ ಕೊಡುತ್ತಿಲ್ಲ. ಯಾರಿಂದ ಹೇಳಿಸಿದ್ರೂ ಕೊಡುತ್ತಿಲ್ಲ. ಹಾಗಾಗಿ ನಾವು ಸಂಸದರು ಸೇರಿ ನಮಗೆ ಬೇಕಾದ ದೊಡ್ಡವರ ಹತ್ರ ಹೋಗಿದ್ವಿ ಎಂದಿದ್ದಾನೆ. ನನ್ನ ಈಗ ಕರೆದು ಹೊಡೆಯುತ್ತೀರಾ ಹೊಡೆಯಿರಿ. ನಾನು ಹಲವು ವರ್ಷ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದೀನಿ. ನಮಗೂ ಗೊತ್ತಿದೆ ಎಂದಿದ್ದಾನೆ.

ಹೀಗೆ ಪರಸಪ್ಪ ಎನ್ನುವ ವ್ಯಕ್ತಿ ಹಾಗೂ ಶಾಸಕ ದಢೇಸೂಗೂರು ಎನ್ನುವ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿರುವ ಆಡಿಯೋ ವೈರಲ್‌ ಆಗಿದೆ. ಇದರಲ್ಲಿ ನಾಲ್ಕೆ ೖದು ಜನರ ಸಂಧಾನದ ಮಾತುಗಳು ಕೇಳಿ ಬಂದಿವೆ.

ಧ್ವನಿಯು ನನ್ನದಲ್ಲ:

ಶಾಸಕರೊಂದಿಗೆ ಮಾತನಾಡಿದ ಆಡಿಯೋ ವೈರಲ್‌ ವಿಚಾರವಾಗಿ ಪರಸಪ್ಪ ಎನ್ನುವ ವ್ಯಕ್ತಿಯು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದು, ಆಡಿಯೋದಲ್ಲಿನ ಧ್ವನಿಯು ನನ್ನದಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಉಲ್ಟಾಹೊಡೆದಿದ್ದಾರೆ. ನನ್ನ ಹೆಸರಿನ ನಾಲ್ವರು ನಮ್ಮೂರಿನಲ್ಲಿ ಇದ್ದಾರೆ. ಆಡಿಯೋದಲ್ಲಿ ನಾನು ಮಾತನಾಡಿಲ್ಲ ಎಂದಿದ್ದಾರೆ.

ನನ್ನ ಮಗ ಪಿಎಸ್‌ಐ ನೇಮಕಾತಿಗೆ ಅರ್ಜಿ ಹಾಕಿದ್ದ. ಆತನ ಫಿಜಿಕಲ್‌ ಆಗಿರಲಿಲ್ಲ. ಹಾಗಾಗಿ ಸುಮ್ಮನೆ ಇದ್ದೆವು. ಪತ್ರಿಕೆಯಲ್ಲಿ ನನ್ನ ಫೋಟೊ ಬಳಕೆ ಮಾಡಿದ್ದಾರೆ. ಹಾಗಾಗಿ ಮಾಧ್ಯಮಗೋಷ್ಠಿ ಕರೆದು ಮಾತನಾಡುತ್ತಿದ್ದೇನೆ ಎಂದಿದ್ದಾರಲ್ಲದೇ, ನನ್ನ ಹಾಗೂ ಆನಂದಪ್ಪ ಎನ್ನುವ ವ್ಯಕ್ತಿಯ ನಡುವೆ ಭತ್ತಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ನಡೆದಿತ್ತು. ಅದನ್ನು ಶಾಸಕರು ಮಧ್ಯಸ್ಥಿಕೆ ವಹಿಸಿ ಬಗೆಹರಿಸುವ ಮಾತನ್ನಾಡಿದ್ದರು. ಆದರೆ ಈಗ ವೈರಲ್‌ ಆಗಿರುವ ಆಡಿಯೋಗೂ ನನಗೂ ಸಂಬಂಧವಿಲ್ಲ. ಇದರಲ್ಲಿ ಯಾರದ್ದೇ ತಪ್ಪಿದ್ದರೂ ತನಿಖೆಯಾಗಲಿ. ತಪ್ಪಿದ್ದವರ ಮೇಲೆ ಕ್ರಮ ಕೈಗೊಳ್ಳಲಿ ಎಂದಿದ್ದಾರಲ್ಲದೇ, ನನ್ನ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಎಂದಿದ್ದಾರೆ.

ತನಿಖೆಯಿಂದ ಮತ್ತಷ್ಟುಸತ್ಯ ಬಯಲಿಗೆ: ಮುಕುಂದರಾವ್‌

ಶಾಸಕ ಬಸವರಾಜ ದಢೇಸೂಗೂರು ಹಾಗೂ ಪರಸಪ್ಪ ಮೇಗೂರು ನಡುವಿನ ಆಡಿಯೋ ಸಂಭಾಷಣೆಯಲ್ಲಿ ಬಯಲಿಗೆ ಬಂದಿರುವ ಮಾಹಿತಿಯನ್ನಾಧರಿಸಿ ತನಿಖೆ ನಡೆಸಿದರೆ ಇನ್ನಷ್ಟುಅಕ್ರಮಗಳು ಬಯಲಿಗೆ ಬರಲಿವೆ ಎಂದು ಕೆಪಿಸಿಸಿ ಸಂಯೋಜಕ ಮುಕುಂದರಾವ್‌ ಭವಾನಿಮಠ ಒತ್ತಾಯಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೊದಲ ಆಡಿಯೋದಲ್ಲಿ ಶಾಸಕ ದಢೇಸೂಗೂರು ಪರಸಪ್ಪನಿಂದ ಪಡೆದ .15 ಲಕ್ಷ ಹಣವನ್ನು ಸರ್ಕಾರಕ್ಕೆ ಮುಟ್ಟಿಸಿದ್ದೇನೆ. ಅವರು ಕೊಡುವವರೆಗೆ ಕಾಯಿರಿ ಎಂದಿರುವುದು ಇಡೀ ರಾಜ್ಯವೇ ಕೇಳಿದೆ. ಮತ್ತೊಂದು ಆಡಿಯೋದಲ್ಲಿ ಪರಸಪ್ಪನಿಗೆ ಶಾಸಕರು, ಅವಾಚ್ಯ ಪದಗಳಿಂದ ನಿಂದಿಸಿ ಧಮಕಿ ಹಾಕಿದ್ದಾರೆ. ಶಾಸಕರು ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದಾರೆ.

PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!

ದಢೇಸೂಗೂರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರರ ಕಚೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕನಕಗಿರಿ ಶಾಸಕರು ಭಾಗಿಯಾಗಿದ್ದಾರೆ ಎಂಬುದು ಸ್ವತಃ ತಾವೆ ಆಡಿಯೋದಲ್ಲಿ ಮಾತನಾಡಿದ್ದಾರೆ. ವ್ಯಕ್ತಿಯೊಬ್ಬರಿಂದ .15 ಲಕ್ಷ ಪಡೆದ ಬಗ್ಗೆ ಅವರ ಮೇಲೆ ಆರೋಪ ಕೇಳಿಬಂದ ಹಿನ್ನೆಲೆ ಸರ್ಕಾರ ಕೂಡಲೆ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಶಾಸಕರನ್ನು ಅಮಾನತು ಮಾಡುವುದರ ಜತೆಗೆ ಬಂಧಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್‌ ಎಂ. ಬಸವರಾಜ ಅವರಿಗೆ ಮನವಿಪತ್ರ ನೀಡಿದರ

click me!