Karnataka JDS ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಅಧಿಕೃತ ಘೋಷಣೆ

By Suvarna News  |  First Published Feb 9, 2022, 6:29 PM IST

* ಅನಿತಾ ಕುಮಾರಸ್ವಾಮಿ ರಾಜಕೀಯ ನಿವೃತ್ತಿ
*  ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ
* ಅಧಿಕೃತವಾಗಿ ಘೋಷಣೆ ಮಾಡಿದ ಕುಮಾರಸ್ವಾಮಿ


ಬೆಂಗಳೂರು, (ಫೆ.09): ಅನಿತಾ ಕುಮಾರಸ್ವಾಮಿ (Anitha Kumaraswamy) ಅವರನ್ನು ಮುಂದಿನ ಚುನಾವಣೆಗೆ ನಿಲ್ಲಿಸಲ್ಲ. ಅನಿತಾರನ್ನು ಮುಂದಿನ ಚುನಾವಣೆಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪಕ್ಷ ಉಳಿಸಿಕೊಳ್ಳಲು ನನ್ನ ಪತ್ನಿಯನ್ನ ಕಣಕ್ಕಿಳಿಸಬೇಕಾಯಿತು. ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

Tap to resize

Latest Videos

DK Suresh Vs Ashwath Narayan : ಉಭಯ ನಾಯಕರಿಗಾದ ರಾಜಕೀಯ ಲಾಭವೇನು..?

ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡೋದಿಲ್ಲ ಅಂತ ಹೇಳಿದ್ದಾರೆ. ಕಳೆದ ಬಾರಿ ಅನಿತಾ ಕುಮಾರಸ್ವಾಮಿ ನನ್ನ ಒತ್ತಾಯಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು ಎಂದು ತಿಳಿಸಿದರು.

ಅನಿತಾ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಲ್ಲ ಎಂಬ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯಿಸಿದ್ದು,  ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ಕುಮಾರಸ್ವಾಮಿ ಈಗಲೇ ಈ ರೀತಿ ಹೇಳಿಕೆ ನೀಡಬಾರದು. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತು ಏನೂ ಹೇಳಿಲ್ಲ. ನಾವು ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧೆ ಮಾಡ್ತಿದ್ದೇವೆ ಎಂದು ಹೇಳಿದರು. 

ಇನ್ನು ಜೆಡಿಎಸ್​ ನಾಯಕ ವೈಎಸ್​ವಿ ದತ್ತಾ ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿದ ದೇವೇಗೌಡ್ರು,  ಒಂದೆರಡು ವಿಚಾರದಲ್ಲಿ ಹೆಚ್​ಡಿಕೆ ಮೇಲೆ ಬೇಸರ ಇರಬಹುದು. ಕುಮಾರಸ್ವಾಮಿಯೇ ಹಿಂದೆ ದತ್ತಾರನ್ನ ಎಂಎಲ್‌ಸಿ ಮಾಡಿದ್ದರು. ನನ್ನ ಜೊತೆ ಇರುವಂತೆ ವೈಎಸ್‌ವಿ ದತ್ತಾಗೆ ಹೇಳಿದ್ದೇನೆ. ಪುಟ್ಟರಾಜು ವಿಚಾರದಲ್ಲೂ ಇಂತಹ ಊಹಾಪೋಹಗಳಿದ್ದವು. ಮೇಲುಕೋಟೆ ಶಾಸಕ ಸಿ.ಎಸ್​. ಪುಟ್ಟರಾಜು ಸ್ಪಷ್ಟನೆ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.

ರಾಮನಗರದಿಂದ ನಿಖಿಲ್ ಕಣಕ್ಕೆ?
 ಸ್ಯಾಂಡಲ್​ವುಡ್​ ನಟ ಹಾಗೂ ಜೆಡಿಎಸ್​​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (Nikhil kumaraswamy) ಜಿಲ್ಲೆಯಲ್ಲಿ ಫುಲ್​ ಆಕ್ಟಿವ್​ ಆಗಿ ಓಡಾಡ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಬದಲಿಗೆ ನಿಖಿಲ್​ ಸ್ಪರ್ಧೆಗಿಳಿಯುತ್ತಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿತ್ತು. ಇದೀಗ ಮಾತು ಮಾಜಿ ಸಿಎಂ ಕುಮಾರಸ್ವಾಮಿಯವರು ನೀಡಿರೋ ಹೇಳಿಕೆ ರಾಮನಗರದಿಂದ  ನಿಖಿಲ್​ ಸ್ಪರ್ಧೆ  ಪುಷ್ಠಿ ನೀಡಿದೆ.

ರಾಮನಗರ ಕ್ಷೇತ್ರ ಜೆಡಿಎಸ್​ನ ಭದ್ರ ಕೋಟೆಯಾಗಿದೆ. ಹೀಗಾಗಿ ಕುಮಾರಸ್ವಾಮಿ ಬೇರೆಯವರಿಗೆ ಕ್ಷೇತ್ರ ನೀಡುವ ಸಾಧ್ಯತೆ ತೀರ ಕಡಿಮೆ. ಕಳೆದ ಬಾರಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರು. ಈ ಬಾರಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯೋದಿಲ್ಲ ಅಂತ ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ. ಹೀಗಾಗಿ  ಪುತ್ರ ನಿಖಿಲ್ ಅವರನ್ನೇ ಕುಮಾರಸ್ವಾಮಿ ರಾಮನಗರದಿಂದ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಾಗಿದೆ. ಪುತ್ರನಿಗಾಗಿ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ​

click me!