ಪಶ್ಚಿಮ ಬಂಗಾಳ: ಟಿಎಂಸಿ ಫೈರ್‌ ಬ್ರಾಂಡ್‌ ಮಹುವಾಗೆ ರಾಜಮಾತೆ ಸವಾಲು..!

Published : Apr 07, 2024, 10:20 AM IST
ಪಶ್ಚಿಮ ಬಂಗಾಳ: ಟಿಎಂಸಿ ಫೈರ್‌ ಬ್ರಾಂಡ್‌ ಮಹುವಾಗೆ ರಾಜಮಾತೆ ಸವಾಲು..!

ಸಾರಾಂಶ

ಮಹುವಾ ಮೊಯಿತ್ರಾ, ಟಿಎಂಸಿಯ ಫೈ‌ರ್ ಬ್ರಾಂಡ್ ನಾಯಕಿ ಎಂದೇ ಗುರುತಿಸಿಕೊಂಡವರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೂ ಹೊರಗೂ ಅಂಕಿ ಅಂಶ ಸಮೇತ ವಾಗ್ದಾಳಿ ನಡೆಸಿ ಗಮನ ಸೆಳೆದವರು. ಆದರೆ ಇತ್ತೀಚೆಗೆ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಆದರೂ ಅವರ ಮೇಲೆ ವಿಶ್ವಾಸ ಇಟ್ಟು ಮಮತಾ ಮತ್ತೆ ಸೀಟು ನೀಡಿದ್ದಾರೆ.

ಕೃಷ್ಣಾನಗರ(ಏ.07):  ಬಾಂಗ್ಲಾದೇಶದ ಜೊತೆ ಗಡಿ ಹಂಚಿ ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರ ಈ ಬಾರಿ ಮಹಿಳಾ ಕದನಕ್ಕೆ ಸಾಕ್ಷಿಯಾಗುತ್ತಿದೆ. ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಅನರ್ಹ ಸಂಸದೆ ಮಹುವಾ ಕುರಿತು ಬಿಜೆಪಿ ಹರಿಹಾಯುತ್ತಿದ್ದರೆ ರಾಜ ಕುಟುಂಬದ ಅಮೃತಾ ರಾಯ್ ಪೂರ್ವಜರು ಬ್ರಿಟಿಷರಿಗೆ ಬೆಂಬಲಿಸಿದ್ದರು ಎಂದು ಟಿಎಂಸಿ ತಿರುಗೇಟು ನೀಡುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷ ಒಂದಾಗಿರುವುದು ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.

1967ರಲ್ಲಿ ಇಲ್ಲಿ ನಡೆದ ಮೊದಲ ಚುನಾವಣೆಯಿಂದ ಇದುವರೆಗೆ ಒಮ್ಮೆ ಪಕ್ಷೇತರ, 9 ಬಾರಿ ಎಡಪಕ್ಷಗಳು, ಒಮ್ಮೆ ಬಿಜೆಪಿ ಗೆದ್ದಿವೆ. 2009ರ ಬಳಿಕ ಕ್ಷೇತ್ರ ಸತತವಾಗಿ ಟಿಎಂಸಿಗೆ ಒಲಿಯುತ್ತಲೇ ಬಂದಿದೆ. ಕ್ಷೇತ್ರದ ವ್ಯಾಪ್ತಿಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಎಂಸಿ ಶಾಸಕರು ಇದ್ದಾರೆ.

ಎನ್‌ಐಎ ಹಲ್ಲೆ ಮಾಡಿದ್ದು, ಅದಕ್ಕೆ ಮಹಿಳೆಯರ ತಿರುಗೇಟು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಸ್ತುತ ಚುನಾವಣೆಯಲ್ಲಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ. ಬಾಂಗ್ಲಾದೇಶದ ವಲಸಿಗ ಮತುವಾ ಸಮುದಾಯದ ಶೇ.10 ಮತದಾರರು ಕ್ಷೇತ್ರದಲ್ಲಿದ್ದು, ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಜೊತೆಗೆ ಕಾಂಗ್ರೆಸ್ ಮತ್ತು ಸಿಪಿಎಂ ಒಂದಾಗಿದ್ದು, ಟಿಎಂಸಿ ಪಡೆಯುತ್ತಿದ್ದ ಒಂದಷ್ಟು ಮತಗಳನ್ನು ಕಸಿಯಬಹುದು. ಆಗ ಬಿಜೆಪಿ ಅಭ್ಯರ್ಥಿಗೆ ಲಾಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಫೈರ್‌ ಬ್ರಾಂಡ್ ನಾಯಕಿ: 

ಮಹುವಾ ಮೊಯಿತ್ರಾ, ಟಿಎಂಸಿಯ ಫೈ‌ರ್ ಬ್ರಾಂಡ್ ನಾಯಕಿ ಎಂದೇ ಗುರುತಿಸಿಕೊಂಡವರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೂ ಹೊರಗೂ ಅಂಕಿ ಅಂಶ ಸಮೇತ ವಾಗ್ದಾಳಿ ನಡೆಸಿ ಗಮನ ಸೆಳೆದವರು. ಆದರೆ ಇತ್ತೀಚೆಗೆ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಆದರೂ ಅವರ ಮೇಲೆ ವಿಶ್ವಾಸ ಇಟ್ಟು ಮಮತಾ ಮತ್ತೆ ಸೀಟು ನೀಡಿದ್ದಾರೆ.

ರಾಜಮಾತೆಗೆ ಮೋದಿ ಬಲ: ಮಹುವಾಗಿ ಸಡ್ಡು ಹೊಡೆಯಲು ಕ್ಷೇತ್ರದಲ್ಲಿ ಪ್ರಭಾವಿಯಾಗಿ ರುವ ರಾಜಮಾತೆ ಅಮೃತಾರಾಯ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಅಮೃತಾಜನರ ಗಮನ ಸೆಳೆಯುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಪಕ್ಷ ಅಧಿಕಾರಕ್ಕೆ ಬಂದರೆ ಜನರಿಂದ ಮಮತಾ ಲೂಟಿ ಹೊಡೆದ ಹಣ ಮರಳಿಸುವ ಭರವಸೆ ಯನ್ನು ರಾಯ್ ನೀಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್