ಬಿಜೆಪಿ ಅವಧಿಯ ಬಿಟ್‌ ಕಾಯಿನ್‌ ತನಿಖೆಗೆ ಎಲ್ಲ ನೆರವು: ಸಚಿವ ಪರಮೇಶ್ವರ್‌

Published : Jul 04, 2023, 03:40 AM IST
ಬಿಜೆಪಿ ಅವಧಿಯ ಬಿಟ್‌ ಕಾಯಿನ್‌ ತನಿಖೆಗೆ ಎಲ್ಲ ನೆರವು: ಸಚಿವ ಪರಮೇಶ್ವರ್‌

ಸಾರಾಂಶ

ಬಿಜೆಪಿ ಅವಧಿಯ ಬಿಟ್‌ ಕಾಯಿನ್‌ ಹಗರಣದ ಮರು ತನಿಖೆಗೆ ಎಸ್‌ಐಟಿಯು ಯಾವುದೇ ತಜ್ಞರು, ಸಂಸ್ಥೆಯ ಸಹಕಾರ ಕೇಳಿದರೂ ನೀಡಲು ಸರ್ಕಾರ ಸಿದ್ದವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರು (ಜು.04): ಬಿಜೆಪಿ ಅವಧಿಯ ಬಿಟ್‌ ಕಾಯಿನ್‌ ಹಗರಣದ ಮರು ತನಿಖೆಗೆ ಎಸ್‌ಐಟಿಯು ಯಾವುದೇ ತಜ್ಞರು, ಸಂಸ್ಥೆಯ ಸಹಕಾರ ಕೇಳಿದರೂ ನೀಡಲು ಸರ್ಕಾರ ಸಿದ್ದವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಕೋಟ್ಯಾಂತರ ರು.ಗಳ ಬಿಟ್‌ ಕಾಯಿನ್‌ ಹಗರಣ ನಡೆದಿದ್ದು ಅದನ್ನು ಮುಚ್ಚಿಹಾಕಲಾಗಿದೆ ಎಂಬ ಆರೋಪಗಳನ್ನು ನಾವು ಈ ಹಿಂದೆ ಮಾಡಿದ್ದೆವು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮರು ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. 

ಈ ಎಸ್‌ಐಟಿ ತಂಡವು ತಮಗೆ ಇನ್ನೂ ಯಾವುದೇ ತಾಂತ್ರಿಕ ತಜ್ಞರು, ಸಂಸ್ಥೆಯ ಸಹಕಾರ ಬೇಕು ಎಂದು ಕೇಳಿದರೆ ನೀಡಲು ಸರ್ಕಾರ ಸಿದ್ಧವಿದೆ. ಆದಷ್ಟುಬೇಗ ತನಿಖೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ವೈಎಸ್‌ಟಿ ಬಗ್ಗೆ ಎಚ್‌ಡಿಕೆನೇ ಕೇಳಿ: ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಮಾಡಿರುವ ವೈಎಸ್‌ಟಿ ತೆರಿಗೆ ಆರೋಪದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ವೈಎಸ್‌ಟಿ ಬಗ್ಗೆ ನನಗೆ ಗೊತ್ತಿಲ್ಲ. ಹೇಗಿದ್ದರೂ ಕುಮಾರಸ್ವಾಮಿ ಅವರು ಈ ಬಾರಿ ಸದನಕ್ಕೆ ಬರುವುದಾಗಿ ಹೇಳಿದ್ದಾರೆ. ಬಂದಾಗ ಅವರನ್ನೇ ಕೇಳಿ ಎಂದು ಪರಮೇಶ್ವರ್‌ ಟಾಂಗ್‌ ನೀಡಿದರು.

ಬರಿದಾಗುತ್ತಿದೆ ಕೆಆರ್‌ಎಸ್‌ ಜಲಾಶಯ: ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಂಕಷ್ಟ ಪರಿಸ್ಥಿತಿ

ಬೆಂಗಳೂರು- ಮೈಸೂರು ಹೈವೆ ವ್ಯವಸ್ಥಿತವಾಗಿಲ್ಲ: ಬೆಂಗಳೂರು- ಮೈಸೂರು ಹೈವೆಯಲ್ಲಿ ಸುಗಮ ಸುರಕ್ಷಿತ ಸಂಚಾರಕ್ಕೆ ಯಾವುದೇ ಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿಲ್ಲ. ಹೈವೆಯಲ್ಲಿ ಸಂಚಾರ ಸೂಚನಾಫಲಕ ಯಾವುದು ಅಳವಡಿಕೆ ಆಗಿಲ್ಲ. ಬೇರೆ ಹೈವೆಗಳ ರೀತಿ ಇಲ್ಲಿ ವ್ಯವಸ್ಥಿತವಾಗಿ ಏನೂ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಂಚಾರ ವಿಭಾಗದ ಎಡಿಜಿಪಿ ನನಗೆ ಈ ಬಗ್ಗೆ ಮೌಖಿಕವಾಗಿ ವರದಿ ಕೊಟ್ಟಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ಕೂಡ ನಡೆಯುತ್ತಿವೆ. ಇದನ್ನು ತಡೆಯೋಕೆ ಕ್ರಮ ವಹಿಸಿದ್ದೇವೆ ಎಂದು ಹೇಳಿದರು. 

ಬಿಜೆಪಿ 605 ಭರ​ವ​ಸೆ​ಗ​ಳಲ್ಲಿ ಎಷ್ಟು ಈಡೇ​ರಿ​ಸಿ​ದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪ್ರಶ್ನೆ

ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್‌ ವಸೂಲಿ ಬೇಡ ಅಂತಾ ಸೂಚನೆ ಕೊಟ್ಟಿದ್ದೇವು. ಆದರೂ ಟೋಲ್‌ ವಸೂಲಿ ಶುರು ಮಾಡಿದ್ದಾರೆ. ಹೆದ್ದಾರಿ ಪ್ರಾಧಿಕಾರವು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಅವಸರವಾಗಿ ಹೆದ್ದಾರಿ ಉದ್ಘಾಟನೆ ಮಾಡಿದರು. ರಾಜಕೀಯ ಉದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಹೀಗಾಗಿ, ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಹೈವೆಯಲ್ಲಿ ಇಷ್ಟು ಬೇಗ ಅಷ್ಟುಜನ ಸಾಯುತ್ತಾರೆ ಎಂದರೆ ಅದರ ಅರ್ಥ ಬಹಳ ಲೋಪವಾಗಿದೆ ಎಂದರು. ಹೈವೆಯಲ್ಲಿ ಡ್ರಿಂಕ್‌ ಅಂಡ್‌ ಡ್ರೈವ್‌ ಚೆಕಿಂಗ್‌ ಅನ್ನು ಜನರಿಗೆ ತೊಂದರೆ ಆಗದಂತೆ ಜನರ ಸುರಕ್ಷತೆಗೆ ಬೇಕಾದ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ