ರಾಜಕೀಯ ನೆಲೆಗೆ ಆಲ್ಕೋಡ್ ಅವಿರತ ಶ್ರಮ. ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಅದ್ಧೂರಿ ಹುಟ್ಟು ಹಬ್ಬ.
ಲಿಂಗಸುಗೂರು (ಜು.24) : ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒಂದು ಕೈ ನೋಡೇ ಬಿಡೋಣ ಎಂಬಂತೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿರುವ ಹಿರಿಯ ನಾಯಕ, ರಾಜಕೀಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ, ಕೆಪಿಸಿಸಿ ಕಾರ್ಯದರ್ಶಿ ಹನುಮಂತಪ್ಪ ವೈ. ಆಲ್ಕೋಡ್ ಅವಿರಥ ಶ್ರಮ ವಹಿಸುತ್ತಿದ್ದು ಇದಕ್ಕೆ ನಿನ್ನೆ ನಡೆದ ಅವರ ಹುಟ್ಟು ಹಬ್ಬದ ಸಮಾರಂಭ ಸಾಕ್ಷಿಯಾಯಿತು..
ಲಿಂಗಸಗೂರು: ಕಂದಕಕ್ಕೆ ಉರುಳಿ ಬಿದ್ದ ವಾಹನ, 15ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಗಾಯ
undefined
ಲಿಂಗಸಗೂರು ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಒಳಗೊಳಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಅವರ ಅದ್ದೂರಿ ಹುಟ್ಟು ಹಬ್ಬದ ಸಮಾರಂಭ ನಡೆಸಿದರು. ಪಕ್ಷದ ಮುಖಂಡರು ಬಹುತೇಕರು ಗೈರು ಆಗಿದ್ದರು. ಆಲ್ಕೋಡ್ ಅವರ ಅಭಿಮಾನಿ ಬಳಗದಿಂದ ಸಮಾರಂಭ ಆಯೋಜಿಸಿ ಅದರಲ್ಲಿ ಯಶಸ್ಸು ಕಾಣುವ ಜೊತೆಗೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದೇವದುರ್ಗದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ಕಿರು ಹೊತ್ತಗೆ. ಪ್ರಕಟಣೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮುಂದಿನ ಯೋಜನೆ ಅಭಿಮಾನಿ ಬಳಗದ ಮುಂದೆ ಅನಾವರಣ ಮಾಡಿದರು.
ಲಿಂಗಸುಗೂರು: ರಾಜಕೀಯ ದ್ವೇಷ, ಗ್ರಾ. ಪಂ ಸದಸ್ಯೆಯ ಪುತ್ರನ ಕೊಲೆ
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎನ್ನುವ ಹಾಗೇ ಚುನಾವಣೆ ಇನ್ನು ದೂರ ಇರುವಾಗಲೇ ಮೀಸಲು ಕ್ಷೇತ್ರದಲ್ಲಿ ರಾಜಕೀಯ ಸಮಾರಂಭ ನಡೆಸಲಾಗುತ್ತಿದ್ದಾರೆ. ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಮಾತುಗಳಾಗುತ್ತಿವೆ. ಅದೇನೆ ಇರಲಿ, ಇಲ್ಲಿ ಗಮನಿಸಬೇಕಾದುದ್ದೇನೆಂದರೆ ತಾವು ಪ್ರತಿನಿಧಿಸುವ ಪಕ್ಷದ ಬದಲು ತಮ್ಮ ಇಲ್ಲಿ ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಕೊಳ್ಳಲು ಕಾರ್ಯಕ್ರಮ ನಡೆಸುತ್ತಿರುವುದರಿಂದ ವಿಧಾನಸಭಾ ಚುನಾವಣೆ ಆಕಾಂಕ್ಷಿಗಳ ಈರ್ಶೆಯಾಗಿದೆ. ಇದೇ ಕಾರಣಕ್ಕೆ ಹುಟ್ಟು ಹಬ್ಬಕ್ಕೆ ಬಹುತೇಕ ಮುಖಂಡರು ಗೈರು ಆಗಿದ್ದಾರೆಂದು ಹೇಳಲಾಗುತ್ತಿದೆ. ಪಕ್ಷಕ್ಕಿಂತ ಕ್ಷೇತ್ರದಲ್ಲಿ ವ್ಯಕ್ತಿ ಆರಾಧನೆ ಹೆಚ್ಚಾಗಿ ನಡೆಯುತ್ತಿರುವುದು ಪ್ರಮುಖ ಅಂಶವಾಗಿದೆ. ಲಿಂಗಸುಗೂರು, ದೇವದುರ್ಗ ಸೇರಿ ಮಾಜಿ ಸಚಿವ ಆಲ್ಕೋಡ್‌ರ ಅಭಿಮಾನಿ ಬಳಗದವರು ಸಾವಿರಾರು ಜನರ ಮಧ್ಯ ಹುಟ್ಟು ಹಬ್ಬದ ಅದ್ದೂರಿ ಸಮಾರಂಭ ಭಾರಿ ಯಶಸ್ಸು ಕಂಡಿದ್ದು ರಾಜಕೀಯ ವಿರೋಧಿಗಳ ನಿದ್ದೆಗೆಡಿಸಿದೆ.