ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ Akhilesh Yadav!

By Suvarna News  |  First Published Mar 22, 2022, 4:03 PM IST

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಿಲೇಶ್, ಅಜಂ ಖಾನ್

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಿಪಕ್ಷವನ್ನು ಮುನ್ನಡೆಸಲಿದ್ದಾರೆ ಅಖಿಲೇಶ್
 


ನವದೆಹಲಿ (ಮಾ. 22): ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್  (Akhilesh Yadav ) ಅವರು ಇತ್ತೀಚಿನ ಉತ್ತರ ಪ್ರದೇಶ ಚುನಾವಣೆಯಲ್ಲಿ(Uttar Pradesh Election) ಶಾಸಕರಾಗಿ (MLA) ಆಯ್ಕೆಯಾದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.  ರಾಜ್ಯ ರಾಜಕೀಯದತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವುದರೊಂದಿಗೆ ಮತ್ತು 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ತಮ್ಮ ಮತ ಬ್ಯಾಂಕ್ ಅನ್ನು ಕ್ರೋಡೀಕರಣ ಮಾಡುವ ದೃಷ್ಟಿಯಲ್ಲಿ ಮಂಗಳವಾರ ತಮ್ಮ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ (Loksabha Speaker Om Birla) ಸಲ್ಲಿಸಿದ್ದಾರೆ.

ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ಆಜಂ ಖಾನ್ (Azam Khan) ಕೂಡ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯೊಂದಿಗೆ ಸಂಸತ್ತಿನಲ್ಲಿ ಸಮಾಜವಾದಿ ಸಂಸದರ ಸಂಖ್ಯೆ ಮೂರಕ್ಕೆ ಇಳಿಯಲಿದೆ. ಆದರೆ, ಪ್ರಸ್ತುತ ಅವರು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷವನ್ನು ಮುನ್ನಡೆಸುವ ಉತ್ಸಾಹದಲ್ಲಿದ್ದು ಆ ಮೂಲಕ ರಾಜ್ಯದಲ್ಲಿ ಪಕ್ಷದ ಸ್ಥಾನವನ್ನು ಭದ್ರಪಡಿಸುವ ಇರಾದೆಯಲ್ಲಿದ್ದಾರೆ.

ಅಖಿಲೇಶ್ ಯಾದವ್ ಅವರು ಪೂರ್ವ ಉತ್ತರಪ್ರದೇಶದ ಅಜಂಗಢದಿಂದ ಸಂಸದರಾಗಿದ್ದರು. ಫೆಬ್ರವರಿ-ಮಾರ್ಚ್ ನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಭದ್ರಕೋಟೆಯಾಗಿದ್ದ ಕರ್ಹಾಲ್ ನಿಂದ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿ ಶಾಸಕರಾಗಿದ್ದರು.

Samajwadi Party (SP) chief Akhilesh Yadav hands over his resignation to Lok Sabha Speaker Om Birla from his membership of the House. pic.twitter.com/BNxpZUWKwJ

— ANI (@ANI)


ಭಾರತದದಲ್ಲಿ ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಲೇಬೇಕು ಎನ್ನುವ ಆಸೆಯಲ್ಲಿ ಅಖಿಲೇಶ್ ಯಾದವ್ ಇದ್ದಾರೆ. 2027ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಪ್ರಮುಖ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಗಮನಸೆಳೆಯುವ ಉದ್ದೇಶವನ್ನು ಅಖಿಲೇಶ್ ಯಾದವ್ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರು ಆದರೆ ಅವರ ಪಕ್ಷವು 403-ಸದಸ್ಯರ ಅಸೆಂಬ್ಲಿಯಲ್ಲಿ 111 ಸ್ಥಾನಗಳಲ್ಲಿ ಜಯಿಸುವ ಮೂಲಕ 2ನೇ ಸ್ಥಾನ ಪಡೆದರೆ, ಬಿಜೆಪಿ ಸ್ವಂತ ಬಲದಲ್ಲಿ 255 ಸ್ಥಾನ ಗೆದ್ದಿದ್ದರೆ, ಮಿತ್ರಪಕ್ಷಗಳೊಂದಿಗೆ 273 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ.

ಯೋಗಿ ಪ್ರಮಾಣವಚನ, 45 ಸಾವಿರ ಮಂದಿಗೆ ಆಮಂತ್ರಣ: ರಾಗಾ, ಸೋನಿಯಾ, ಅಖಿಲೇಶ್‌ಗೂ ಆಹ್ವಾನ!
ಆದರೆ, ಸಮಾಜವಾದಿ ಪಕ್ಷವು 2017 ರಲ್ಲಿ ಗೆದ್ದ ಸ್ಥಾನಗಳಿಗೆ ಹೋಲಿಸಿದರೆ, ಈ ಬಾರಿ 47 ಸ್ಥಾನಗಳ ಏರಿಕೆ ಕಂಡಿದೆ. ಅದರೊಂದಿಗೆ ವೋಟ್ ಶೇರ್ ನಲ್ಲಿ 32.06ರಷ್ಟು ಸಾಧನೆ ಮಾಡಿದೆ. ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರು ಪ್ರಯಾಗರಾಜ್ ಬಳಿಯ ಸಿರತು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮೈತ್ರಿಕೂಟದ ಅಭ್ಯರ್ಥಿಯಿಂದ ಸೋಲನುಭವಿಸಿದ್ದು, ಅಖಿಲೇಶ್ ಯಾದವ್ ಅವರಿಗೆ ಮತ್ತೊಂದು ಧನಾತ್ಮಕ ಅಂಶವಾಗಿದೆ.

ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೇವಲ ಒಂದು ಸ್ಥಾನವನ್ನು ಗೆದ್ದಿರುವುದು ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸ್ಥಾನಗಳ ಏರಿಕೆಯಲ್ಲಿ ಪ್ರಮುಖವಾಗಿ ಕಾರಣವಾಗಿದೆ. ಪಕ್ಷದ ವೋಟ್‌ ಶೇರ್ ಅನ್ನು ಹಾಗೆಯೇ ಉಳಿಸಿಕೊಳ್ಳುವ ತಂತ್ರವನ್ನು ಅಖಿಲೇಶ್ ಯಾದವ್ ಸದ್ಯ ಹೊಂದಿದ್ದಾರೆ. ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಗರಿಷ್ಠ ಮತಗಳನ್ನು ಪಡೆದ ಪಕ್ಷದ ಮುಖ್ಯಸ್ಥ ಸೋಲಿನ ಬಳಿಕ ರಾಜ್ಯದಿಂದ ಓಡಿಹೋಗಿದ್ದಾರೆ ಎನ್ನುವ ಮಾತು ಬರಬಾರದು ಎನ್ನುವ ಕಾರಣಕ್ಕೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ತೀಮಾರ್ನ ಮಾಡಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾರಿಗೆ ಅಡ್ಡಬಂದ ಎತ್ತು, ಟ್ವೀಟ್ ಮಾಡಿ ಹೇಳಿದ್ದು ಹೀಗೆ!
ತಮ್ಮ ಮುಖ್ಯಸ್ಥರು ರಾಜ್ಯ ರಾಜಕಾರಣದಲ್ಲಿ ಕ್ರಿಯಾಶೀಲರಾಗದಿದ್ದರೆ, ಮೇಲ್ನೋಟಕ್ಕೆ ಪಕ್ಷವನ್ನು ಬೆಂಬಲಿಸಿದ ಮುಸ್ಲಿಂ ಮತ್ತು ಯಾದವ ಮತದಾರರು ಬೇರೆ ಪಕ್ಷಗಳನ್ನು ಕಂಡುಕೊಳ್ಳಬಹುದು ಎಂದು ಪಕ್ಷದ ಉನ್ನತ ನಾಯಕರು ಆತಂಕ ಹೊಂದಿದ್ದಾರೆ. ಆ ಕಾರಣದಿಂದ ಅಖಿಲೇಶ್ ಯಾದವ್ ಶಾಸಕರಾಗಿ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆ.

Latest Videos

 

click me!