ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ 53 ಕೋಟಿಯ ಒಡೆಯ..!

By Kannadaprabha News  |  First Published Apr 13, 2024, 10:37 AM IST

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಡಾ.ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ರಾಜೇಂದ್ರಪ್ಪ ದೊಡ್ಮನಿ ಅವರ ಒಟ್ಟು ಆಸ್ತಿಯ ಮೌಲ್ಯ 53.15 ಕೋಟಿ ರು. 


ಕಲಬುರಗಿ(ಏ.13):   ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಡಾ.ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ರಾಜೇಂದ್ರಪ್ಪ ದೊಡ್ಮನಿ ಅವರ ಒಟ್ಟು ಆಸ್ತಿಯ ಮೌಲ್ಯ 53.15 ಕೋಟಿ ರು. 

ಈ ಪೈಕಿ, ಅವರ ಪತ್ನಿ ಡಾ. ಜಯಶ್ರೀ ಹೆಸರಲ್ಲಿರುವ ಆಸ್ತಿ ಮೌಲ್ಯ 13.3 ಕೋಟಿ, ಅವಿಭಕ್ತ ಕುಟುಂಬದ ಹೆಸರಲ್ಲಿ ರಾಧಾಕೃಷ್ಣ ಅವರ ಹತ್ತಿರವಿರುವ ಒಟ್ಟು ಆಸ್ತಿ 10.85 ಕೋಟಿ. ಇವರ ಬಳಿ ಇನ್ನೋವಾ ಮತ್ತು ಮಹೀಂದ್ರಾ ಕಾರುಗಳಿವೆ.

Tap to resize

Latest Videos

undefined

ಬರೋಬ್ಬರಿ 98 ಕೋಟಿ ರೂ ಆಸ್ತಿಗೆ ಒಡೆಯ ಬಿಜೆಪಿ ರೆಬೆಲ್ ಶಾಸಕ ಕೆಎಸ್‌ ಈಶ್ವರಪ್ಪ!

ಕಲಬುರಗಿ ಜಿಲ್ಲೆಯ ಗುಂಡಗುರ್ತಿ ಹಾಗೂ ಕನಕಪುರದ ಸಾತನೂರು ಹೋಬಳಿಯಲ್ಲಿ 2.3 ಕೋಟಿ ರು.ಮೌಲ್ಯದ ಕೃಷಿ ಭೂಮಿ ಹಾಗೂ ಕಲಬುರಗಿಯ ಕಸನೂರು, ಕಲಬುರಗಿ ಮತ್ತು ಬೆಂಗಳೂರಲ್ಲಿ 16.32 ಕೋಟಿ ರು.ಮೌಲ್ಯದ ಕೃಷಿಯೇತರ ಮಳಿಗೆ, ಮುಂಗಟ್ಟುಗಳು, ನಿವೇಶನಗಳನ್ನು ಹೊಂದಿದ್ದಾರೆ. ಇವರ ಪತ್ನಿ ಬೆಂಗಳೂರಿನ ರಾಚೇನಹಳ್ಳಿ, ಸದಾಶಿವನಗರದಲ್ಲಿ 4.65 ಕೋಟಿ ರು.ಮೊತ್ತದ ಕೃಷಿಯೇತರ ನಿವೇಶನ, ವಸಂತ ನಗರ ಹಾಗೂ ಸದಾಶಿವ ನಗರದಲ್ಲಿ 5.47 ಕೋಟಿ ರು ಮೌಲ್ಯದ ಮನೆಗಳನ್ನು ಹೊಂದಿದ್ದಾರೆ.

ಇನ್ನು, ರಾಧಾಕೃಷ್ಣ ಅವರು 4.18 ಕೋಟಿ ರು. ಹಾಗೂ ಇವರ ಪತ್ನಿ 52.83 ಲಕ್ಷ ರು. ಸಾಲ ಮಾಡಿದ್ದಾರೆ.

click me!