ರಾಮನಗರ (ಸೆ.27): ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಜೆಡಿಎಸ್ (JDS) ಮಿಷನ್-123 ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಮುಂದಿನ ಚುನಾವಣೆಯನ್ನು (Election) ಗಮನದಲ್ಲಿಟ್ಟುಕೊಂಡು ಆಯೋಜಿಸಿರುವ ಈ ಕಾರ್ಯಾಗಾರದ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ಕಾರ್ಯಾಗಾರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 123 ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು.
ಮತ್ತೊಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಿಸಿದ ಕುಮಾರಸ್ವಾಮಿ
ಹಾಲಿ ಮತ್ತು ಮಾಜಿ ಶಾಸಕರು, ಕಳೆದ ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಮುಂದಿನ ಚುನಾವಣೆಯ ಆಕಾಂಕ್ಷಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳ 123 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿ ಅವರಿಗೆಲ್ಲ ಗ್ರೀನ್ ಕಾರ್ಡ್ ವಿತರಣೆ ಮಾಡಲಾಗುವುದು.
ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕೆಲಸ ವೀಕ್ಷಿಸಲಾಗುವುದು. ಸಂಘಟನೆ ತೃಪ್ತಿ ತರದಿದ್ದರೆ ಹಳದಿ (ಪರಿಶೀಲನೆ) ಅಥವಾ ರೆಡ್ ಕಾರ್ಡ್ (ಟಿಕೆಟ್ ನಿರಾಕರಣೆ) ನೀಡಲಾಗುವುದು ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಹಿರಿಯ ನಾಯಕ ವೈ.ಎಸ್ .ವಿ.ದತ್ತಾ, ಸಂಸದ ಪ್ರಜ್ವಲ್ ರೇವಣ್ಣ , ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಕಾರ್ಯಾಗಾರದಲ್ಲಿ ಭಾಗಿಯಾಗಲಿದ್ದಾರೆ.
ಜೆಡಿಎಸ್ ತೋರುವ ಒಲವು ತೋರಿದ್ರಾ ಮುಖಂಡ
2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ (Congress) ಸಿದ್ಧತೆ ನಡೆಸಿದ್ದು, ಹಲವು ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದೆ. ಆದ್ರೆ, ಇದರ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪಕ್ಷದಿಂದ ಅಂತರ ಕಾಯ್ದುಕೊಂಡು ಜೆಡಿಎಸ್‌ಗೆ ಹತ್ತಿರವಾಗುತ್ತಿದ್ದಾರೆ.
ಹೌದು....ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ (CM Ibrahim) ಅವರು ಯಾಕೋ ತಮ್ಮ ನಡೆ ಬದಲಿಸುವಂತೆ ಕಾಣಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ರಾಹಿಂ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಒಡನಾಟ ಹೆಚ್ಚಾಗುತ್ತಿದೆ.
ಕುಮಾರಸ್ವಾಮಿ ಕೈಬಲಪಡಿಸಬೇಕಿದೆ: ಜೆಡಿಎಸ್ ಸೇರುವ ಮುನ್ಸೂಚನೆ ಕೊಟ್ರಾ ಕಾಂಗ್ರೆಸ್ ಹಿರಿಯ ನಾಯಕ
ನಿನ್ನೆ (ಸೆ.21 ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ (HD Kumaraswamy) ಜತೆ ವೇದಿಕೆ ಹಂಚಿಕೊಂಡಿದ್ದ ಇಬ್ರಾಹಿಂ, ಇಂದು (ಸೆ.22) ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿಯನ್ಜು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.