
ಮಂಡ್ಯ, (ಸೆ.12): ಡ್ರಗ್ಸ್ ದಂಧೆಯಲ್ಲಿ ಬರೋಬ್ಬರಿ 32 ರಾಜಕಾರಣಿಗಳಿದ್ದು, ಈ ಬಗ್ಗೆ ಹೋಂ ಮಿನಿಸ್ಟರ್‌ಗೆ ಆಧಾರ ಸಹಿತ ಲಿಸ್ಟ್ ಕೊಡ್ತೀನಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.
"
ಶನಿವಾರ ಮಂಡ್ಯದಲ್ಲಿ ಮಾತನಾಡಿದ ಮುತಾಲಿಕ್, ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ಗಳಿವೆ. ಅವರಿಗೆ ಸಾವಿರಾರು ಕೋಟಿ ರೂ. ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್‌ನಿಂದ. ವೈನ್, ಡ್ರಗ್ಸ್ ಲಾಬಿ ರಾಜಕೀಯವನ್ನು ಕೈಯಲ್ಲಿ ಹಿಡಿದುಕೊಂಡಿದೆ. ಈ ಮಾಫಿಯಾದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನವರೂ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್
8 ಮತ್ತು 9ನೇ ತರಗತಿ ಮಕ್ಕಳವರೆಗೆ ಡ್ರಗ್ಸ್ ಪ್ರವೇಶ ಮಾಡಿದೆ. ಮೈಸೂರಿನ ಶಾಲೆಯಲ್ಲಿ ಒಬ್ಬ ಹುಡುಗ ಪೆನ್ ಮೂಸಿ ನೋಡುತ್ತಿದ್ದ. ಅದರೊಳಗೆ ಡ್ರಗ್ಸ್ ಇತ್ತು. ತನಿಖೆ ಮಾಡಿದ್ರೆ 10 ಜನ ವಿದ್ಯಾರ್ಥಿ ಆ ಜಾಲದಲ್ಲಿ ಇರುವುದು ಗೊತ್ತಾಯಿತು ಎಂದು ಹೇಳಿದರು.
"
ಸದ್ಯ ಸಿಸಿಬಿ ಅಧಿಕಾರಿಗಳು ಸ್ಯಾಂಡಲ್‌ವುಡ್‌ನ್ನು ಜಾಲಾಡುತ್ತಿದ್ದಾರೆ. ಆದ್ರೆ, ಈ ಪ್ರಕರಣದಲ್ಲಿ ರಾಜಕೀಯ ನಾಯಕ ಮೇಲೆ ಆರೋಪಗಳು ಕೇಳಿಬರುತ್ತಿವೆಯಾದರೂ ಇದರುವರೆಗೂ ಒಬ್ಬರಿಗೂ ನೋಟಿಸ್ ನೀಡಿಲ್ಲ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.