ಜೆಡಿಎಸ್‌ ಟಿಕೆಟ್‌ಗೂ 1 ಲಕ್ಷ ಶುಲ್ಕ ನಿಗದಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 50% ರಿಯಾಯಿತಿ

Published : Mar 10, 2023, 01:54 PM IST
ಜೆಡಿಎಸ್‌ ಟಿಕೆಟ್‌ಗೂ 1 ಲಕ್ಷ ಶುಲ್ಕ ನಿಗದಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 50% ರಿಯಾಯಿತಿ

ಸಾರಾಂಶ

ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬಯಸಿದ ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕ ನಿಗದಿ ಮಾಡಿದಂತೆ ಜೆಡಿಎಸ್‌ನಲ್ಲಿ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಒಂದು ಲಕ್ಷ ರು. ಶುಲ್ಕ ನಿಗದಿಗೊಳಿಸಲಾಗಿದೆ. 

ಬೆಂಗಳೂರು (ಮಾ.09): ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬಯಸಿದ ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕ ನಿಗದಿ ಮಾಡಿದಂತೆ ಜೆಡಿಎಸ್‌ನಲ್ಲಿ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಒಂದು ಲಕ್ಷ ರು. ಶುಲ್ಕ ನಿಗದಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಪಕ್ಷವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಕಾಂಕ್ಷಿಗಳಿಂದ ಶುಲ್ಕ ಪಡೆದುಕೊಳ್ಳಲು ಜೆಡಿಎಸ್‌ ಮುಂದಾಗಿದೆ.  

ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಒಂದು ಲಕ್ಷ ರು. ಶುಲ್ಕ ನೀಡಬೇಕು. ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳು ಸಹ ಒಂದು ಲಕ್ಷ ರು. ಕೊಡಬೇಕು. ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರಿಗೆ ಶೇ.50ರಷ್ಟುರಿಯಾಯಿತಿ ನೀಡಲಾಗಿದೆ ಎಂದು ಹೇಳಿದರು. ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ. 

ಗುಜರಾತ್‌ ಇವಿಎಂ ರಾಜ್ಯಕ್ಕೆ ಬೇಡ: ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನಿಂದ ಮನವಿ

ಕಾಂಗ್ರೆಸ್‌-ಬಿಜೆಪಿ ಮೊದಲು ಪಟ್ಟಿ ಬಿಡುಗಡೆ ಮಾಡಲಿ, ನಂತರ ನಾವು ಪಟ್ಟಿಬಿಡುಗಡೆ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದಿನಾಂಕ ಹೇಳಿದ್ದು ನಿಜ. ಆದರೆ, ಇನ್ನೂ ಅಭ್ಯರ್ಥಿ ಪಟ್ಟಿಅಂತಿಮವಾಗಿಲ್ಲ ಎಂದರು. ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕ್ರೆಡಿಟ್‌ ಮಾಜಿ ಸಚಿವ ಎಚ್‌.ಡಿ.ರೇವಣ್ಣನಿಗೆ ಹೋಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಹೆದ್ದಾರಿಯನ್ನು ಉದ್ಘಾಟನೆ ಮಾಡಲಿ ಯಾವುದೇ ಅಡ್ಡಿ ಇಲ್ಲ. ಆದರೆ, ಈ ವಿಚಾರವನ್ನು ಚುನಾವಣೆಗೆ ಬಳಸಿಕೊಂಡರೆ, ಆ ರಸ್ತೆಯುದ್ದಕ್ಕೂ ಒಂದು ಸ್ಥಾನ ಕೂಡ ಬರಲ್ಲ ಎಂದು ಇದೇ ವೇಳೆ ತಿಳಿಸಿದರು.

ಅಭಿನಂದನಾ ಸಮಾರಂಭದ ಹೆಸರಲ್ಲಿ ಭರ್ಜರಿ ಬಾಡೂಟ: ಪಟ್ಟಣ ಪಂಚಾಯಿತಿ ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೃಹತ್‌ ಅಭಿನಂದನಾ ಸಮಾರಂಭ ಹಾಗೂ ಇಡೀ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟವನ್ನು ಏರ್ಪಡಿಸಲಾಗಿದೆ. ಹಾರೋಹಳ್ಳಿ ತಾಲೂಕಿನ ಸಿದ್ಧಾಪುರ ಗ್ರಾಮದ ಬಳಿ 35-40 ಸಾವಿರ ಜೆಡಿಎಸ್‌ ಕಾರ್ಯಕರ್ತರಿಗೆ ತಾಲೂಕು ಕೇಂದ್ರದ ಅಭಿನಂದನಾ ಹೆಸರಿನಲ್ಲಿ ಭರ್ಜರಿ ಬಾಡೂಟದೊಂದಿಗೆ ಮತ ಪ್ರಚಾರಕ್ಕೆ ಜೆಡಿಎಸ್‌ ವೇದಿಕೆ ಸಿದ್ಧ ಮಾಡಿಕೊಂಡಿದೆ. ಈಗಾಗಲೇ ಹಲವು ಕಡೆಗಳಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಿ ಹೆಚ್ಚು ಜನರ ಕರೆತರಲು ತಿಳಿಸಲಾಗಿದೆ. 

ಉಜ್ವಲ ಭವಿಷ್ಯ ಬಯಸುವವರು ಮೋದಿಗೆ ಮತ ಹಾಕ್ತಾರೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಈ ವೇಳೆ ಹಾರೋಹಳ್ಳಿ ತಾಲೂಕು ಮಾಡಿದ ಕ್ರೆಡಿಟ್‌ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು ಎಂದು ಹೇಳುವ ಮೂಲಕ ಮತದಾರರ ಸೆಳೆಯವ ಪ್ಲಾನ್‌ ರೂಪಿಸಿದೆ. ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್‌ ಅಭ್ಯಥಿಯಾಗಿದ್ದು ಇದು ನಮ್ಮ ಕೊಡುಗೆ ಎಂದು ಮತದಾರರಿಗೆ ಹೇಳುವ ಮೂಲಕ ಮತ ಭೇಟೆಗೆ ಅಣಿಯಾಗಿ ಮಗನ ಗೆಲ್ಲಿಸುವ ತಂತ್ರವು ಇದರಲ್ಲಿ ಅಡಗಿದೆ. ಅದಕ್ಕಾಗಿ ಹಾರೋಹಳ್ಳಿ ಪಕ್ಕದ ಸಿದ್ಧಾಪುರ ಗ್ರಾಮದ ಬಳಿ ಬೃಹತ್‌ ವೇದಿಕೆಗೆ ಸಿದ್ಧತೆ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕ್ಷೇತ್ರದ ಮತದಾರ ಸೆಳೆದು ಮಗನ ಗೆಲುವಿಗೆ ಹೊಸದೊಂದು ತಂತ್ರ ರೂಪಿಸಿದ್ದಾರೆ ಎಂದು ಹೇಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ
ಮಾಜಿ ಸಚಿವ ರಾಜಣ್ಣಗೆ ಸಿಹಿ ಸುದ್ದಿ : ಮುಖ್ಯಮಂತ್ರಿ ಸಿದ್ಧರಾಮಯ್ಯ