ಶಬ್ಬಾಶ್‌..! ಕುಸ್ತಿಯಲ್ಲಿ ಸೋಲೇ ಕಾಣದ ಜಪಾನ್ ಆಟಗಾರ್ತಿಗೆ ಶಾಕ್ ಕೊಟ್ಟ ವಿನೇಶ್‌ ಫೋಗಟ್..!

Published : Aug 06, 2024, 04:10 PM ISTUpdated : Aug 06, 2024, 04:41 PM IST
ಶಬ್ಬಾಶ್‌..! ಕುಸ್ತಿಯಲ್ಲಿ ಸೋಲೇ ಕಾಣದ ಜಪಾನ್ ಆಟಗಾರ್ತಿಗೆ ಶಾಕ್ ಕೊಟ್ಟ ವಿನೇಶ್‌ ಫೋಗಟ್..!

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಸೋಲಿಸಿದ್ದು ಸಾಮಾನ್ಯ ಕುಸ್ತಿಪಟುವನ್ನೇನು ಅಲ್ಲ. ಜಪಾನಿನ ಕುಸ್ತಿಪಟು ಸೋಲೇ ಕಂಡಿರಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಮಹಿಳೆಯ 50 ಕೆ.ಜಿ ಪ್ರೀಸ್ಟೈಲ್‌ ಕುಸ್ತಿಯಲ್ಲಿ ವಿನೇಶ್ ಫೋಗಟ್‌ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಕಾರಣದಿಂದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ವಿನೇಶ್, ಇದೀಗ ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿರುವ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೆ ವಿನೇಶ್ ಫೋಗಾಟ್ ಕಳೆದೊಂದು ವರ್ಷದಿಂದಲೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದ್ದರು. ಪೊಲೀಸರ ಲಾಠಿ ಏಟು ತಿಂದರೂ ಜಗ್ಗದೇ ಹೋರಾಡಿದ್ದ ವಿನೇಶ್ ಮೇಲೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯದಲ್ಲೇ ಎದುರಾಗಿದ್ದು ಯ್ಯೂ ಸುಸುಕಿ ಎನ್ನುವ ದೈತ್ಯ ಪ್ರತಿಭೆ. ಪಂದ್ಯ ಆರಂಭಕ್ಕೂ ಮುನ್ನವೇ ಯ್ಯೂ ಸುಸುಕಿ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದ್ದರು. ಯಾಕೆಂದರೆ ಯ್ಯೂ ಸುಸುಕಿ ಕುಸ್ತಿ ವೃತ್ತಿಜೀವನದಲ್ಲಿ ಇದುವರೆಗೂ ಒಂದೇ ಒಂದು ಸೋಲು ಕಂಡಿರಲಿಲ್ಲ.

ಹೌದು, ಯ್ಯೂ ಸುಸುಕಿ 2010ರಲ್ಲಿ ವೃತ್ತಿಪರ ಕುಸ್ತಿಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಆಕೆ ಸೋತಿದ್ದೇ ಇಲ್ಲ. ಯ್ಯೂ ಸುಸುಕಿ ಮೂರು ಬಾರಿ ವರ್ಲ್ಡ್‌ ಕೆಡೆಟ್ ಚಾಂಪಿಯನ್‌ಶಿಪ್, ಎರಡು ಬಾರಿ ವರ್ಲ್ಡ್‌ ಜೂನಿಯರ್ ಚಾಂಪಿಯನ್‌ಶಿಪ್, ಒಮ್ಮೆ ಅಂಡರ್ 23 ವಿಶ್ವ ಚಾಂಪಿಯನ್‌ಶಿಪ್‌, ಎರಡು ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌, ನಾಲ್ಕು ಬಾರಿ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯ್ಯೂ ಸುಸುಕಿ ಚಿನ್ನದ ಪದಕ ಜಯಿಸಿದ್ದರು. 

ಇಂತಹ ಬಲಾಢ್ಯ ಆಟಗಾರ್ತಿ, ವಿನೇಶ್ ಎದುರು 2-0 ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ ಆಕ್ರಮಣಕಾರಿ ಪ್ರದರ್ಶನ ತೋರಿದ ವಿನೇಶ್ ಫೋಗಟ್ ಸಿನಿಮೀಯಾ ಶೈಲಿಯಲ್ಲಿ 3-2 ಅಂತರದಲ್ಲಿ ಜಪಾನ್ ಆಟಗಾರ್ತಿಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. 

ಇದೀಗ ವಿನೇಶ್ ಫೋಗಟ್ ಅವರ ಅದ್ಭುತ ಕುಸ್ತಿ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯನ್ ಗೇಮ್ಸ್‌: ಕಬಡ್ಡಿಯಲ್ಲಿ ಭಾರತಕ್ಕೆ ಡಬಲ್ ಚಿನ್ನ..! ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತ ಪುರುಷ, ಮಹಿಳಾ ತಂಡಗಳು
Asian Games 2026: ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ; ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಕಿರೀಟ!