ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್: ಸೆಮೀಸ್‌ಗೆ ಸಿಂಧು, ಶ್ರೀಕಾಂತ್

By Kannadaprabha News  |  First Published Mar 6, 2021, 10:36 AM IST

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬಾಸೆಲ್‌(ಮಾ.06): ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್‌ನ ಬುಸನಾನ್‌ ವಿರುದ್ದ 21-16, 23-21 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಇದೇ ವೇಳೆ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ವಾಂಗ್‌ಚಾರೊಯಿನ್‌ ವಿರುದ್ದ 21-17, 21-12 ನೇರ ಗೇಮ್‌ಗಳಲ್ಲಿ ಗೆದ್ದರು. ಆದರೆ ಅಜಯ್ ಜಯರಾಮ್‌ ಹಾಗೂ ಬಿ. ಸಾಯಿ ಪ್ರಣೀತ್ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ತಮ್ಮ ಹೋರಾಟ ಅಂತ್ಯಗೊಳಿಸಿಕೊಂಡರು.

advances to the semifinals of the Swiss Open Badminton tournament after beating Thailand’s 21-16, 23-21. She will face Mia Blichfeldt of Denmark next. pic.twitter.com/xHlIfGtpSC

— SAIMedia (@Media_SAI)

Tap to resize

Latest Videos

ಸ್ವಿಸ್‌ ಓಪನ್‌ ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌ ಲಗ್ಗೆ

ಇನ್ನು ಇದೇ ವೇಳೆ ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್‌ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಸಹ ಸೋತು ನಿರಾಸೆ ಅನುಭವಿಸಿತು. ಮಲೇಷ್ಯಾದ ಜೋಡಿ ವಿರುದ್ದ 1-2 ಗೇಮ್‌ಗಳಲ್ಲಿ ಪರಾಭವಗೊಂಡಿತು. 
 

click me!