ಇಂದಿನಿಂದ ಥಾಮಸ್‌, ಉಬರ್‌ ಕಪ್‌ ಬ್ಯಾಡ್ಮಿಂಟನ್‌

By Naveen Kodase  |  First Published May 8, 2022, 11:41 AM IST

* ಇಂದಿನಿಂದ ಪ್ರತಿಷ್ಠಿತ ಥಾಮಸ್‌ ಹಾಗೂ ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಫೈನಲ್‌ ಪಂದ್ಯಾವಳಿ

* ಭಾರತ ತಂಡಗಳನ್ನು ಮುನ್ನಡೆಸಲಿರುವ ಲಕ್ಷ್ಯ ಸೆನ್‌ ಹಾಗೂ ಪಿ.ವಿ.ಸಿಂಧು

* ಥಾಮಸ್‌ ಕಪ್‌ನಲ್ಲಿ ಈವರೆಗೂ ಒಂದೂ ಪದಕ ಗೆಲ್ಲದ ಭಾರತ ಪುರುಷರ ತಂಡ


ಬ್ಯಾಂಕಾಕ್‌(ಮೇ.08): ಥಾಮಸ್‌ ಹಾಗೂ ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಫೈನಲ್‌ ಪಂದ್ಯಾವಳಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಭಾರತ ತಂಡಗಳನ್ನು ಲಕ್ಷ್ಯ ಸೆನ್‌ ಹಾಗೂ ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ. ಥಾಮಸ್‌ ಕಪ್‌ನಲ್ಲಿ ಈವರೆಗೂ ಒಂದೂ ಪದಕ ಗೆಲ್ಲದ ಭಾರತ ಪುರುಷರ ತಂಡ, ಸೆಮಿಫೈನಲ್‌ಗೂ ಪ್ರವೇಶಿಸಿಲ್ಲ. ಈ ಬಾರಿ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಆಡಲಿದೆ. 

ಈ ಗುಂಪಿನಲ್ಲಿ ಚೈನೀಸ್‌ ತೈಪೆ ಹಾಗೂ ಕೆನಡಾ ಸಹ ಇವೆ. ಉಬರ್‌ ಕಪ್‌ನಲ್ಲಿ 2014, 2016ರಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಮಹಿಳಾ ತಂಡ, ಈ ಬಾರಿ ‘ಡಿ’ ಗುಂಪಿನಲ್ಲಿದ್ದು ಮೊದಲ ಪಂದ್ಯದಲ್ಲಿ ಕೆನಡಾ ಎದುರಾಗಲಿದೆ. ಗುಂಪಿನಲ್ಲಿ ದ.ಕೊರಿಯಾ ಹಾಗೂ ಅಮೆರಿಕ ಸಹ ಇವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ಗೇರಲಿವೆ.

Latest Videos

undefined

ಕಿವುಡರ ಒಲಿಂಪಿಕ್ಸ್‌: ಚಿನ್ನ ಗೆದ್ದ 15ರ ಅಭಿನವ್‌ ದೇಶ್ವಾಲ್‌

ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದಿದೆ. ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 15 ವರ್ಷದ ಅಭಿನವ್‌ ದೇಶ್ವಾಲ್‌ ಚಿನ್ನದ ಪದಕ ಜಯಿಸಿದರು. ಉತ್ತರಾಖಂಡದ ಅಭಿನವ್‌, ಫೈನಲ್‌ನಲ್ಲಿ 24 ಯತ್ನಗಳ ಮುಕ್ತಾಯಕ್ಕೆ ಉಕ್ರೇನ್‌ನ ಒಲೆಸ್ಕಿ ಲೆಜೆಬ್ನೆ್ಯಕ್‌ ಜೊತೆ 234.2 ಅಂಕಗಳಲ್ಲಿ ಸಮಬಲ ಸಾಧಿಸಿದ್ದರು. ಬಳಿಕ ಶೂಟ್‌ ಆಫ್‌ನಲ್ಲಿ ಅಭಿನವ್‌ 10.3 ಅಂಕ ಗಳಿಸಿದರೆ, ಒಲೆಸ್ಕಿ 9.7 ಅಂಕಕ್ಕೆ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ 3 ಚಿನ್ನ, 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಕಿವುಡರ ಒಲಿಂಪಿಕ್ಸ್‌: ಕಂಚು ಗೆದ್ದ ವೇದಿಕಾ

ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ 3ನೇ ಪದಕ ಜಯಿಸಿದೆ. ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ವೇದಿಕಾ ಶರ್ಮಾ ಕಂಚಿನ ಪದಕ ಗೆದ್ದಿದ್ದಾರೆ. ಈ ಮೊದಲು ಧನುಶ್‌ ಶ್ರೀಕಾಂತ್‌ ಚಿನ್ನ, ಶೌರ್ಯಾ ಸೈನಿ ಕಂಚು ಜಯಿಸಿದ್ದರು. 8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ವೇದಿಕಾ 207.2 ಅಂಕ ಗಳಿಸಿದರು.

ಗಂಗೂಲಿ ಯಶಸ್ವಿ ರಾಜಕಾರಣಿ ಆಗಬಲ್ಲರು: ಪತ್ನಿ ಡೋನಾ

30 ವರ್ಷದ ರಾಷ್ಟ್ರೀಯ ದಾಖಲೆ ಮುರಿದ ಅವಿನಾಶ್‌

ನವದೆಹಲಿ: ಭಾರತದ ಅಗ್ರ ಓಟಗಾರ ಅವಿನಾಶ್‌ ಸಬ್ಲೆ 5000 ಮೀ.ನಲ್ಲಿ 30 ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಸೌಂಡ್‌ ರನ್ನಿಂಗ್‌ ಟ್ರ್ಯಾಕ್‌ ಮೀಟ್‌ ಕೂಟದಲ್ಲಿ ಪಾಲ್ಗೊಂಡಿದ್ದ ಅವರು 13 ನಿಮಿಷ 26.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 12ನೇ ಸ್ಥಾನ ಪಡೆದರು. 1992ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಬಹುದೂರ್‌ ಪ್ರಸಾದ್‌ 13 ನಿಮಿಷ 29.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಈ ವರೆಗಿನ ದಾಖಲೆ ಎನಿಸಿತ್ತು. ಒಲಿಂಪಿಯನ್‌ ಅವಿನಾಶ್‌, 3000 ಮೀ. ಸ್ಟೀಪಲ್‌ ಚೇಸ್‌ನಲ್ಲೂ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

click me!