ಪ್ಯಾರಿಸ್‌ ಒಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಇಂದು ಮತ್ತೊಂದು ಪದಕ ನಿರೀಕ್ಷೆ!

By Kannadaprabha News  |  First Published Aug 1, 2024, 8:54 AM IST

ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್‌ ಕುಶಾಲೆ ಫೈನಲ್‌ ಪ್ರವೇಶಿಸಿದ್ದು, ಗುರುವಾರ ಪದಕ ಸುತ್ತು ನಡೆಯಲಿದೆ. ಇದೀಗ ಎಲ್ಲರ ಚಿತ್ತ ಸ್ವಪ್ನಿಲ್ ಮೇಲೆ ನೆಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ


ಪ್ಯಾರಿಸ್: 2024ರ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಈಗಾಗಲೇ 2 ಕಂಚಿನ ಪದಕ ಗೆದ್ದಿರುವ ಭಾರತ, ಗುರುವಾರ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್‌ ಕುಶಾಲೆ ಫೈನಲ್‌ ಪ್ರವೇಶಿಸಿದ್ದು, ಗುರುವಾರ ಪದಕ ಸುತ್ತು ನಡೆಯಲಿದೆ

ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್‌ 7ನೇ ಸ್ಥಾನ ಪಡೆದರು. ಆದರೆ 11ನೇ ಸ್ಥಾನ ಪಡೆದ ಐಶ್ವರಿ ಪ್ರತಾಪ್‌ ತೋಮರ್‌ ಫೈನಲ್‌ ಪ್ರವೇಶಿಸಲು ವಿಫಲರಾದರು. ಒಟ್ಟು 44 ಶೂಟರ್‌ಗಳ ಪೈಕಿ ಅಗ್ರ-8 ಸ್ಥಾನ ಪಡೆದವರು ಫೈನಲ್‌ಗೇರಿದರು.

Tap to resize

Latest Videos

undefined

ಸ್ವಪ್ನಿಲ್‌ ಮಂಡಿಯೂರಿ ಶೂಟ್‌ ಮಾಡುವ ವಿಭಾಗದಲ್ಲಿ 198 (99, 99), ಪ್ರೋನ್‌ ಅಂದರೆ ನೆಲದ ಮೇಲೆ ಮಲಗಿ ಶೂಟ್‌ ಮಾಡುವ ವಿಭಾಗದಲ್ಲಿ 197 (98, 99) ಹಾಗೂ ನಿಂತುಕೊಂಡು ಶೂಟ್‌ ಮಾಡುವ ವಿಭಾಗದಲ್ಲಿ 195 (98, 97) ಅಂಕಗಳನ್ನು ಪಡೆದರು. ಒಟ್ಟಾರೆ ಸ್ವಪ್ನಿಲ್‌ 590 ಅಂಕ ಪಡೆದರೆ, ತೋಮರ್‌ 589 ಅಂಕ ಗಳಿಸಿ ಫೈನಲ್‌ ಸ್ಥಾನದಿಂದ ವಂಚಿತರಾದರು.

ಪ್ಯಾರಿಸ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್‌ ಬಾಕ್ಸ್‌ನಲ್ಲಿ ಅಂತದ್ದೇನಿದೆ?

ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌, ಐಶ್ವರಿ ತೋಮರ್‌ ಹಾಗೂ ಅಖಿಲ್‌ ಶೆರೊನ್‌ ಚಿನ್ನ ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಸ್ವಪ್ನಿಲ್‌ 4ನೇ ಸ್ಥಾನ ಪಡೆದಿದ್ದರು.

ಪಂಜಾಬ್‌ ರೈತನ ಮಗನಿಗೆ 2ನೇ ಬಾರಿ ಕೈಹಿಡಿದ ಅದೃಷ್ಟ!

ಸೌಮ್ಯ ಸ್ವಭಾವದ, 22 ವರ್ಷದ ಪಂಜಾಬ್‌ ರೈತನ ಮಗ ಸರಬ್ಜೋತ್‌ ಸಿಂಗ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 2ನೇ ಬಾರಿ ಅದೃಷ್ಟ ಕೈಹಿಡಿಯಿತು. ವೈಯಕ್ತಿಕ ವಿಭಾಗದಲ್ಲಿ 0.1 ಅಂಕದಿಂದ ಫೈನಲ್‌ಗೇರುವುದರಿಂದ ವಂಚಿತರಾಗಿದ್ದ ಸಿಂಗ್‌, ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆಲುವಲ್ಲಿ ಹಿಂದೆ ಬೀಳಲಿಲ್ಲ.

ಹಲವು ಯುವ ಭಾರತೀಯ ಶೂಟಿಂಗ್‌ ತಾರೆಗಳಂತೆ ಸರಬ್ಜೋತ್‌ ಸಹ ಕಿರಿಯರ ವಿಭಾಗದಲ್ಲಿ ಅನೇಕ ಪದಕಗಳನ್ನು ಗೆದ್ದು ಗಮನ ಸೆಳೆದವರೇ. ಕಳೆದ 2 ವರ್ಷದಲ್ಲಿ 3 ವಿಶ್ವಕಪ್‌ ಪದಕಗಳನ್ನು ಗೆದ್ದಿರುವ ಸರಬ್ಜೋತ್‌, ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಕರ್ನಾಟಕದ ಟಿ.ಎಸ್‌.ದಿವ್ಯಾ ಜೊತೆಗೂಡಿ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.

ಮನು ಭಾಕರ್‌ಗೆ ಇದೆ ಹ್ಯಾಟ್ರಿಕ್‌ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ..! ಇನ್ನೊಂದು ಸ್ಪರ್ಧೆಗೆ ಕ್ಷಣಗಣನೆ

ಪರಸ್ಪರ ಬೆಂಬಲಿಸಿ ಪದಕ ಗೆದ್ದ ಜೋಡಿ!

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಸರಬ್ಜೋತ್‌ಗೆ, ಆ ಮಟ್ಟದ ಒತ್ತಡ ನಿರ್ವಹಿಸಿದ ಅನುಭವವಿರಲಿಲ್ಲ. ಆದರೆ ಜೊತೆಗಿದ್ದ ಮನು, ಒತ್ತಡ ನಿರ್ವಹಣೆ ವಿಷಯದಲ್ಲಿ ಅನುಭವಿ. ಸರಬ್ಜೋತ್‌ ಪೋಡಿಯಂ ಹತ್ತುವುದರ ಹಿಂದೆ ಮನು ಅವರ ಬೆಂಬಲವನ್ನು ಮರೆಯುವ ಹಾಗಿಲ್ಲ. ಫೈನಲ್‌ನಲ್ಲಿ 22 ವರ್ಷದ ಇಬ್ಬರು ಶೂಟರ್‌ಗಳು ಒಬ್ಬರನ್ನೊಬ್ಬರು ಪರಸ್ಪರ ಬೆಂಬಲಿಸಿ, ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದ್ದೇ ಗೆಲುವಿಗೆ ಪ್ರಮುಖ ಕಾರಣ.

ಫೈನಲ್‌ ಅನ್ನು 8.6 (ಗರಿಷ್ಠ 10.9ರ ಪೈಕಿ) ಅಂಕಗಳೊಂದಿಗೆ ಆರಂಭಿಸಿದ ಸರಬ್ಜೋತ್‌ರ ಕೈಗಳು ಒಂದು ಹಂತದಲ್ಲಿ ನಡುಗುತ್ತಿದ್ದವು. ಆಗ ಕೋಚ್‌ ಮುಂಖ್ಬಯಾರ್ ದೋರ್ಜ್ಸುರೆನ್ ಆಗಮಿಸಿ, ಸರಬ್ಜೋತ್‌ಗೆ ಧೈರ್ಯ ತುಂಬಿದರು. 2ನೇ ಸೆಟ್‌ನಿಂದ ಸರಬ್ಜೋತ್‌ ಲಯ ಕಾಯ್ದುಕೊಂಡರು. ಕೊನೆಯ ಶಾಟ್‌ನಲ್ಲಿ ಮನು 9.4 ಅಂಕ ಪಡೆದಾಗ ಸರಬ್ಜೋತ್‌ 10.2 ಅಂಕಕ್ಕೆ ಗುರಿಯಿಟ್ಟು, ಪದಕ ಭಾರತದ ಕೈತಪ್ಪದಂತೆ ನೋಡಿಕೊಂಡರು.

click me!