* ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರ, ಆದರೆ ಪತ್ನಿ ನಿರ್ಮಲಾ ಕೌರ್‌ಗೆ ಪಾಸಿಟಿವ್
* ಮಿಲ್ಖಾ ಸಿಂಗ್‌ಗೆ ಮೇ 20ರಂದು ಕೋವಿಡ್ ತಗುಲಿರುವುದು ಪತ್ತೆಯಾಗಿತ್ತು.
* ಇದೀಗ ಮಿಲ್ಖಾ ಸಿಂಗ್ ಹಾಗೂ ಪತ್ನಿ ಒಂದೇ ಆಸ್ಪತ್ರೆಯ ಒಂದೇ ರೂಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವದೆಹಲಿ(ಮೇ.27): ಭಾರತದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮಿಲ್ಖಾ ಸಿಂಗ್ ಪತ್ನಿ ನಿರ್ಮಲಾ ಕೌರ್‌ಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಿಲ್ಖಾ ಸಿಂಗ್ ಆಕ್ಸಿಜನ್ ಸಪೋರ್ಟ್ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಆದಾಗಿಯೂ ಅವರು ಸ್ವಲ್ಪ ಆಯಾಸಗೊಂಡಿದ್ದಾರೆ, ಹೀಗಾಗಿ ಅವರಿಗೆ ಘನ ರೂಪದ ಆಹಾರ ಸ್ವೀಕರಿಸಲು ಮನವೊಲಿಸಲಾಗುತ್ತಿದೆ. ಮಿಲ್ಖಾ ಸಿಂಗ್ ಹಾಗೂ ಮತ್ತವರ ಪತ್ನಿ ನಿರ್ಮಲಾ ಒಂದೇ ರೂಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಮಿಲ್ಖಾ ಸಿಂಗ್ ಅವರನ್ನು ಐಸಿಯುನಿಂದ ರೂಮ್‌ಗೆ ಶಿಫ್ಟ್ ಮಾಡಿದ್ದೇವೆ. ಸದ್ಯ ಮಿಲ್ಖಾ ಸಿಂಗ್ ಹಾಗೂ ಮತ್ತವರ ಪತ್ನಿ ನಿರ್ಮಲಾ ಮಿಲ್ಖಾ ಸಿಂಗ್ ಒಂದೇ ರೂಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಆರೋಗ್ಯದ ಮೇಲೂ ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆಸ್ಪತ್ರೆಗೆ ದಾಖಲು
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ಮೇ.20ರಂದು ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಇದಾಗಿ ಕೆಲ ದಿನಗಳ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಮಿಲ್ಖಾ ಸಿಂಗ್ ಅವರು ಮೊಹಾಲಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಮಿಲ್ಖಾ ಸಿಂಗ್ 4 ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು 1958ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದ್ದರು. ಇನ್ನು 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ 4 ಸ್ಥಾನ ಪಡೆಯುವ ಮೂಲಕ ಕೂದಲೆಳೆ ಅಂತರದಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona