ಟೊಕಿಯೊ ಒಲಿಂಪಿಕ್ಸ್ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಜಪಾನ್; ಕ್ರೀಡಾಸಕ್ತರಿಗೆ ನಿರಾಸೆ!

By Suvarna News  |  First Published Mar 9, 2021, 8:05 PM IST

ಕೊರೋನಾ ವೈರಸ್ ಕಾರಣ ಮುಂದೂಡಲ್ಪಟ್ಟ ಟೊಕಿಯೋ ಒಲಿಂಪಿಕ್ಸ್ ಆಯೋಜನೆಗೆ ಜಪಾನ್ ಸಜ್ಜಾಗಿದೆ. ಆದರೆ ಕ್ರೀಡಾಭಿಮಾನಿಗಳಿಗೆ ಕೊಂಚ ನಿರಾಸೆಯಾಗಲಿದೆ. ಈ ಕುರಿತು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.


ಟೊಕಿಯೊ(ಮಾ.09): ಕೊರೋನಾ ವೈರಸ್ ಕಾರಣ 2020ರಲ್ಲಿ ಆಯೋಜನೆಗೊಳ್ಳಬೇಕಿದ್ದ ಟೊಕಿಯೋ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತ್ತು. ಇದೀಗ ಈ ವರ್ಷ ಒಲಿಂಪಿಕ್ಸ್ ಆಯೋಜನೆಗೊಳ್ಳಲಿದೆ. ಇದಕ್ಕಾಗಿ ತಯಾರಿಗಳು ಅಂತಿಮ ಹಂತದಲ್ಲಿದೆ. ಆದರೆ ಕ್ರೀಡಾಭಿಮಾನಿಗಳ ಪ್ರವೇಶ ಕುರಿತು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಟೋಕಿಯೋ ಒಲಿಂಪಿಕ್ಸ್‌ ವೇಳೆ ಕ್ರೀಡಾಳುಗಳು ಸೆಕ್ಸ್‌ ಮಾಡುವಂತಿಲ್ಲ!

Tap to resize

Latest Videos

ಕೊರೋನಾ ಭೀತಿ ಇನ್ನೂ ಇರುವುದರಿಂದ ವಿಶ್ವದ ಅತೀ ದೊಡ್ಡ ಕ್ರೀಡಾಕೂಟ ಆಯೋಜನೆ ಸವಾಲಾಗಿದೆ.  ಕ್ರೀಡಾಪಟುಗಳು, ಭದ್ರತಾ ಸಿಬ್ಬಂದಿಗಳು, ಕ್ರೀಡಾ ಆಯೋಜಕರ ಸುರಕ್ಷತೆ ದೃಷ್ಟಿಯಿಂದ ವಿದೇಶಿ ಕ್ರೀಡಾಭಿಮಾನಿಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಪಾನ್ ಸರ್ಕಾರ ಹೇಳಿದೆ.

ಜಪಾನ್ ಕ್ರೀಡಾಭಿಮಾನಿಗಳ ಪ್ರವೇಶಕ್ಕೂ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲಿಸಬೇಕಿದೆ. ಇನ್ನು ವಿದೇಶದಿಂದ ಕ್ರೀಡಾಭಿಮಾನಿಗಳು ಆಗಮಿಸಿದರೆ ಕೊರೋನಾ ಭೀತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ವಿದೇಶದಿಂದ ಆಗಮಿಸಿದ ಕ್ರೀಡಾಭಿಮಾನಿಗಳಲ್ಲಿ ಪಾಸಿಟೀವ್ ಪ್ರಕರಣ ಕಂಡುಬಂದರೆ ಸಂಪೂರ್ಣ ಕ್ರೀಡಾಕೂಟದ ಮೇಲೆ ಪರಿಣಾಮಬೀರಲಿದೆ. ಹೀಗಾಗಿ ನಿರ್ಬಂಧ ವಿಧಿಸಲಾಗುವುದು ಎಂದು ಜಪಾನ್ ಹೇಳಿದೆ.

ಟೊಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಕೊರೋನಾ ಮಾರ್ಗಸೂಚಿ ಪಾಲಿಸುತ್ತಾ ಸರಳ ಹಾಗೂ ಸುಂದರ ಉದ್ಘಾಟನಾ ಸಮಾರಂಭ ಆಯೋಜಿಸಲಾಗುವುದು ಎಂದು ಜಪಾನ್ ಹೇಳಿದೆ.

click me!