Japan Open‌: ಪದಕದ ನಿರೀಕ್ಷೆಯಲ್ಲಿ ಸಿಂಧು, ಸೆನ್‌

By Naveen Kodase  |  First Published Mar 8, 2022, 1:38 PM IST

* ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭ

* ಪದಕದ ನಿರೀಕ್ಷೆಯಲ್ಲಿ ಪಿ.ವಿ.ಸಿಂಧು, ಶ್ರೀಕಾಂತ್

* ಸಿಂಧುಗೆ ಥಾಯ್ಲೆಂಡ್‌ನ ಬುಸಾನನ್‌ ಎದುರಾಳಿ


ಬೆರ್ಲಿನ್(ಮಾ.08)‌: ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ (German Badminton Open) ಮಂಗಳವಾರದಿಂದ ಆರಂಭವಾಗಲಿದ್ದು, 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು (PV Sindhu) ಪದಕದ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಕಿದಂಬಿ ಶ್ರೀಕಾಂತ್‌ (Kidambi Srikanth) ಹಾಗೂ ಲಕ್ಷ್ಯ ಸೆನ್‌, ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಸೈನಾ ನೆಹ್ವಾಲ್‌ (Saina Nehwal) ಕೂಡಾ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 

7ನೇ ಶ್ರೇಯಾಂಕಿತ ಸಿಂಧು ಮೊದಲ ಸುತ್ತಲ್ಲಿ ಥಾಯ್ಲೆಂಡ್‌ನ ಬುಸಾನನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಲಕ್ಷ್ಯ ಥಾಯ್ಲೆಂಡ್‌ನ ಕಾಂಟಫೆನ್ ವಾಂಗ್‌ಚೊರಯೆನ್‌ ವಿರುದ್ಧ ಆಡುವ ಮೂಲಕ ಅಭಿಯಾನ ಅರಂಭಿಸಲಿದ್ದು, ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರಿಸ್‌ ಲೆವೆರ್ಡೆಜ್‌ ಎದುರಾಗಲಿದ್ದಾರೆ. ಎಚ್‌.ಎಸ್‌.ಪ್ರಣಯ್‌ (HS Prannoy), ಪಾರುಪಳ್ಳಿ ಕಶ್ಯಪ್‌ (Parupalli Kashyap) ಕೂಡಾ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಧ್ರುವ್‌ ಕಪಿಲಾ-ಅರ್ಜುನ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ತ್ರೀಸಾ ಜೊಲ್ಲಿ-ಗಾಯತ್ರಿ ಗೋಪಿಚಂದ್‌, ಮಿಶ್ರ ಡಬಲ್ಸ್‌ನಲ್ಲಿ ಇಶಾನ್‌ ಭಟ್ನಗರ-ತನಿಶಾ ಕ್ರಾಸ್ಟೊ, ಸಾಯಿ ಪ್ರತೀಕ್‌-ಸಿಕ್ಕಿ ರೆಡ್ಡಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Tap to resize

Latest Videos

undefined

ಶೂಟಿಂಗ್‌ ವಿಶ್ವಕಪ್‌ನಲ್ಲಿ 4ನೇ ಚಿನ್ನ ಗೆದ್ದ ಭಾರತ

ಕೈರೋ: ಈಜಿಪ್ಟಿನ ಕೈರೋದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ (Shooting World Cup) ಭಾರತ 4ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಒಟ್ಟಾರೆ ಪದಕ ಗಳಿಕೆ 7ಕ್ಕೆ ಏರಿಕೆಯಾಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೋಮವಾರ 25 ಮೀ. ರಾರ‍ಯಪಿಡ್‌ ಫೈಯರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಅನೀಶ್‌ ಭನ್ವಾಲಾ, ರಿಧಮ್‌ ಸಂಗ್ವಾನ್‌ ಜೋಡಿ ಥಾಯ್ಲೆಂಡ್‌ ಜೋಡಿ ವಿರುದ್ಧ 17-7 ಅಂತರದಲ್ಲಿ ಗೆದ್ದು ಬಂಗಾರಕ್ಕೆ ಮುತ್ತಿಕ್ಕಿತು. ಇದಕ್ಕೂ ಮೊದಲು ಪುರುಷರ 25 ಮೀ. ರಾರ‍ಯಪಿಡ್‌ ಫೈಯರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅನೀಶ್‌, ಗುರುಪ್ರೀತ್‌ ಸಿಂಗ್‌ ಹಾಗೂ ಭವೇಶ್‌ ಶೆಕಾವತ್‌ ಫೈನಲಲ್ಲಿ ಜರ್ಮನಿಗೆ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಸೌಹಾರ್ದ ಪಂದ್ಯಗಳಿಗೆ ಸುನಿಲ್‌ ಚೆಟ್ರಿ ಅಲಭ್ಯ

ನವದೆಹಲಿ: 2024ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯ (AFC Asian Cup Football Tournament) ಸಿದ್ಧತೆಯ ಭಾಗವಾಗಿ ನಡೆಯಲಿರುವ ಬಹರೇನ್‌ ಹಾಗೂ ಬೆಲಾರಸ್‌ ವಿರುದ್ಧದ ಸೌಹಾರ್ದ ಫುಟ್ಬಾಲ್‌ ಪಂದ್ಯಗಳಿಗೆ ಭಾರತದ ನಾಯಕ ಸುನಿಲ್‌ ಚೆಟ್ರಿ (Sunil Chhetri) ಗೈರಾಗಲಿದ್ದಾರೆ. 

ಬಹರೇನ್‌ನ ಮನಾಮದಲ್ಲಿ ಕ್ರಮವಾಗಿ ಮಾ.23 ಮತ್ತು 26ಕ್ಕೆ ನಡೆಯಬೇಕಿರುವ ಪಂದ್ಯಕ್ಕೆ 38 ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಚೆಟ್ರಿ ಸ್ಥಾನ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ಯಾರಾ ಬ್ಯಾಡ್ಮಿಂಟನ್‌: 3 ಚಿನ್ನ ಗೆದ್ದ ಪ್ರಮೋದ್‌ ಭಗತ್‌

ಮ್ಯಾಡ್ರಿಡ್‌: ಟೋಕಿಯೋ ಪ್ಯಾರಾಲಿಂಪಿಕ್ಸ್‌ (Tokyo Paralympics) ಚಾಂಪಿಯನ್‌ ಪ್ರಮೋದ್‌ ಭಗತ್‌ ಸ್ಪಾನಿಸ್‌ ಪ್ಯಾರಾ ಬ್ಯಾಡ್ಮಿಂಟನ್‌ (Para Badminton) ಟೂರ್ನಿಯಲ್ಲಿ ಎಲ್ಲಾ 3 ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಬಾಚಿದ್ದಾರೆ. ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವ ನಂ.1 ಭಗತ್‌, ಭಾರತದ ಕುಮಾರ್‌ ನಿತೇಶ್‌ ವಿರುದ್ಧ ಗೆದ್ದು ಚಿನ್ನ ಪಡೆದರೆ, ಡಬಲ್ಸ್‌ನಲ್ಲಿ ಮನೋಜ್‌ ಸರ್ಕಾರ್‌ ಜೊತೆ ಸೇರಿ ಚಿನ್ನಕ್ಕೆ ಕೊರಲೊಡ್ಡಿದರು. ಈ ಜೋಡಿ ಭಾರತದವರೇ ಆದ ಸುಕಾಂತ್‌ ಕದಂ-ನಿತೇಶ್‌ ಜೋಡಿಯನ್ನು ಮಣಿಸಿತು. ಮಿಶ್ರ ಡಬಲ್ಸ್‌ನಲ್ಲಿ ಭಗತ್‌-ಪಾಲಕ್‌ ಕೊಹ್ಲಿ ಜೋಡಿ ರಘುಪತಿ-ಮಾನಸಿ ಜೋಷಿ ವಿರುದ್ಧ ಚಿನ್ನ ಗೆದ್ದಿತು. ಇನ್ನು, ಕದಂ ಚಿನ್ನ ಹಾಗೂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
 

click me!