ಶೂಟಿಂಗ್‌ ವಿಶ್ವಕಪ್‌: ಗನೀಮತ್‌-ಅಂಗದ್‌ ಜೋಡಿಗೆ ಚಿನ್ನದ ಪದಕ

By Kannadaprabha News  |  First Published Mar 24, 2021, 10:13 AM IST

ದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ನಲ್ಲಿ ಭಾರತೀಯ ಶೂಟರ್‌ಗಳ ಪ್ರಾಬಲ್ಯ ಮತ್ತೆ ಮುಂದುವರೆದಿದ್ದು, ಸ್ಕೀಟ್‌ ಮಿಶ್ರ ತಂಡ ವಿಭಾಗದಲ್ಲಿ ಗನೀಮತ್‌ ಶೆಖೂಂ ಹಾಗೂ ಅಂಗದ್‌ ವೀರ್‌ ಸಿಂಗ್‌ ಚಿನ್ನದ ಪದಕ ಜಯಿಸಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಮಾ.24): ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತೀಯ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದೆ. ಮಂಗಳವಾರ ಸ್ಕೀಟ್‌ ಮಿಶ್ರ ತಂಡ ವಿಭಾಗದಲ್ಲಿ ಗನೀಮತ್‌ ಶೆಖೂಂ ಹಾಗೂ ಅಂಗದ್‌ ವೀರ್‌ ಸಿಂಗ್‌ ಚಿನ್ನದ ಪದಕ ಜಯಿಸಿದರು.

ಅರ್ಹತಾ ಸುತ್ತಿನಲ್ಲಿ 141 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ 20 ವರ್ಷದ ಗನೀಮತ್‌ ಹಾಗೂ 25 ವರ್ಷದ ಅಂಗದ್‌, ಚಿನ್ನದ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕಜಕಸ್ತಾನದ ಜೋಡಿ ವಿರುದ್ಧ 33-29ರ ಅಂತರದಲ್ಲಿ ಜಯಗಳಿಸಿತು. ಮಂಗಳವಾರ ನಡೆದ ಏಕೈಕ ಫೈನಲ್‌ ಇದು.

Tap to resize

Latest Videos

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

ಭಾರತ ಈ ಟೂರ್ನಿಯಲ್ಲಿ 7 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೇ ವೇಳೆ ಪುರುಷರ ರೈಫಲ್‌ 3 ಪೊಸಿಷನ್‌ ಫೈನಲ್‌ಗೆ ಭಾರತದ ಮೂವರು ಪ್ರವೇಶಿಸಿದ್ದು, ಪದಕದ ನಿರೀಕ್ಷೆಯಲ್ಲಿದ್ದಾರೆ.
 

India at the top of medal tally at World Cup on day 5 with the clinching of Gold today by the Skeet Mixed Team of and .
Tomorrow I'm attending the World Cup event at KS Shooting Range. pic.twitter.com/iJfpKqr1ZE

— Kiren Rijiju (@KirenRijiju)

Another gold for India at World Cup , 2021.

The Skeet Mixed Team of and clinches gold🥇with a 33-29 win over team Kazakhstan.

Congratulations to you both !👏👏 pic.twitter.com/GLY2iRDvwB

— Dept of Sports MYAS (@IndiaSports)
click me!