Australian Open: ಮೂರನೇ ಸುತ್ತಿಗೆ ರಾಫೆಲ್‌ ನಡಾಲ್ ಲಗ್ಗೆ

By Kannadaprabha NewsFirst Published Jan 20, 2022, 9:32 AM IST
Highlights

* ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನಡಾಲ್‌

* ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್‌ ನವೊಮಿ ಒಸಾಕ 3ನೇ ಸುತ್ತಿಗೆ ಪ್ರವೇಶ

* ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಬಾರ್ಟಿ ಕೂಡಾ ಮೂರನೇ ಸುತ್ತು ಪ್ರವೇಶ

ಮೆಲ್ಬರ್ನ್(ಜ.20)‌: ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ (Australian Open Tennis Grand Slam Tournament) ಟೂರ್ನಿಯಲ್ಲಿ 6ನೇ ಶ್ರೇಯಾಂಕಿತ ರಾಫೆಲ್‌ ನಡಾಲ್‌(Rafael Nadal), ವಿಶ್ವ ನಂ.1 ಆಶ್ಲೆ ಬಾರ್ಟಿ(Ashleigh Barty), ಹಾಲಿ ಚಾಂಪಿಯನ್‌ ನವೊಮಿ ಒಸಾಕ(Naomi Osaka) 3ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಜರ್ಮನಿಯ ಯಾನಿಕ್‌ ಹಾನ್ಸ್‌ಫಮನ್‌ ವಿರುದ್ಧ 6-2, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದರು. 3ನೇ ಸುತ್ತಿನಲ್ಲಿ ಸ್ಪೇನ್‌ನ ನಡಾಲ್‌ಗೆ ರಷ್ಯಾದ ಕಚನೊವ್‌ ಎದುರಾಗಲಿದ್ದಾರೆ.

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಬಾರ್ಟಿ, ಇಟಲಿಯ ಲುಸಿಯಾ ಬ್ರೊನ್ಜೆಟಿ ವಿರುದ್ಧ 6-1, 6-1ರಲ್ಲಿ ಜಯಿಸಿದರ. ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ವಿರುದ್ಧ ಒಸಾಕ 6-0, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.

ಬೋಪಣ್ಣ ಜೋಡಿಗೆ ಸೋಲು: ಭಾರತದ ರೋಹನ್‌ ಬೋಪಣ್ಣ (Rohan Bopanna) ಹಾಗೂ ಫ್ರಾನ್ಸ್‌ನ ರೋಜರ್‌ ವ್ಯಾಸಲಿನ್‌ ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಫಿಲಿಪ್ಪೀನ್ಸ್‌ನ ಟ್ರೀಟ್‌ ಹ್ಯುಯಿ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್‌ ವಿರುದ್ಧ 6-3, 6-7, 2-6 ಸೆಟ್‌ಗಳಲ್ಲಿ ಸೋಲುಂಡರು.

Signed, sealed and delivered ✍️ is into the third round! • pic.twitter.com/a4CKZgWDdx

— #AusOpen (@AustralianOpen)

ಬ್ಯಾಡ್ಮಿಂಟನ್‌: ಸಿಂಧು 2ನೇ ಸುತ್ತಿಗೆ ಪ್ರವೇಶ

ಲಖನೌ: ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು (PV Sindhu) 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ಮೊದಲ ಸುತ್ತಿನಲ್ಲಿ ಭಾರತದವರೇ ಆದ ತಾನ್ಯ ಹೇಮಂತ್‌ ವಿರುದ್ಧ 21-9, 21-9 ಗೇಮ್‌ಗಳಲ್ಲಿ ಗೆದ್ದರು. 2ನೇ ಸುತ್ತಿನಲ್ಲಿ ಸಿಂಧುಗೆ ಅಮೆರಿಕದ ಲಾರೆನ್‌ ಲಾಮ್‌ ಎದುರಾಗಲಿದ್ದಾರೆ.

Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಪಿ ವಿ ಸಿಂಧು, ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಬ್ಯಾಡ್ಮಿಂಟನ್‌: ಲಕ್ಷ್ಯ ಸೆನ್‌ ವಿಶ್ವ ನಂ.13!

ನವದೆಹಲಿ: ಭಾರತದ 20 ವರ್ಷದ ಶಟ್ಲರ್‌ ಲಕ್ಷ್ಯ ಸೆನ್‌ (Lakshya Sen), ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ತಮ್ಮ ವೃತ್ತಿಬದುಕಿನ ಶ್ರೇಷ್ಠ 13ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ಇಂಡಿಯಾ ಓಪನ್‌ (India Open) ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅವರು, ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡಿದ್ದಾರೆ. ಲಕ್ಷ್ಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ 8ನೇ ಸ್ಥಾನಕ್ಕೇರಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು 7ನೇ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 10ನೇ ಸಾನದಲ್ಲಿ ಮುಂದುವರಿದಿದ್ದಾರೆ.

ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ (Pro Kabaddi League) 8ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್‌ (Telugu Titans) ಮೊದಲ ಗೆಲುವು ಸಾಧಿಸಿದೆ. ಬುಧವಾರ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ 35-34ರ ರೋಚಕ ಸಾಧಿಸಿತು.  ಮೊದಲ 10 ಪಂದ್ಯಗಳಲ್ಲಿ ಟೈಟಾನ್ಸ್‌ ಟೈಟಾನ್ಸ್ 8 ಸೋಲು, 2 ಟೈ ಕಂಡಿತ್ತು. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ಹರ್ಯಾಣ ಸ್ಟೀಲರ್ಲ್ಸ್‌ 37-30ರಲ್ಲಿ ಗೆಲುವು ಸಾಧಿಸಿತು.

ಇಂದಿನ ಪಂದ್ಯ: 
ತಲೈವಾಸ್‌-ಗುಜರಾತ್‌ ಸಂಜೆ 7.30ಕ್ಕೆ,
ಬೆಂಗಳೂರು-ಬೆಂಗಾಲ್‌ ರಾತ್ರಿ 8.30ಕ್ಕೆ.

click me!