ಡೇವಿಸ್‌ ಕಪ್‌ ರೀತಿ ಹೊಸ ಟೆನಿಸ್‌ ಟೂರ್ನಿ

By Kannadaprabha News  |  First Published Jan 2, 2020, 11:06 AM IST

ಟೆನಿಸ್ ವಿಶ್ವಕಪ್ ಎಂದೇ ಹೆಸರಾದ ಡೇವಿಸ್ ಕಪ್ ಟೂರ್ನಿಯ ರೀತಿಯಲ್ಲಿಯೇ ‘ಎಟಿಪಿ ಕಪ್‌’ ಟೂರ್ನಿ ಆರಂಭವಾಗಿದೆ. ಈ ಟೂರ್ನಿಯಲ್ಲಿ ಭಾರತೀಯರಿಗೆ ಅವಕಾಶ ಸಿಕ್ಕಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಸಿಡ್ನಿ(ಜ.02): ಟೆನಿಸ್‌ನ ಹೊಸ ಪರ್ವ ಎಂದೇ ಬಣ್ಣಿಸಲಾಗುತ್ತಿರುವ ‘ಎಟಿಪಿ ಕಪ್‌’ ತಂಡಗಳ ಚಾಂಪಿಯನ್‌ಶಿಪ್‌ ಶುಕ್ರವಾರದಿಂದ ಆಸ್ಪ್ರೇಲಿಯಾದಲ್ಲಿ ನಡೆಯಲಿದೆ. ಡೇವಿಸ್‌ ಕಪ್‌ ರೀತಿಯ ಜಾಗತಿಕ ಮಟ್ಟದ ಟೂರ್ನಿ ಇದಾಗಿದೆ. 

Tomorrow, it begins!

Who's your tip to take the title? 🏆

— ATPCup (@ATPCup)

ಎಟಿಪಿ ರ‍್ಯಾಂಕಿಂಗ್’ನಲ್ಲಿ ಉನ್ನತ ಸ್ಥಾನದಲ್ಲಿರುವ ಆಟಗಾರ ಯಾವ ದೇಶಕ್ಕೆ ಸೇರುತ್ತಾನೋ, ಆ ದೇಶಕ್ಕೆ ಪ್ರವೇಶ ನೀಡಲಾಗಿದೆ. ಉದಾಹರಣೆ ಎಟಿಪಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಸರ್ಬಿಯಾಗೆ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದೆ. ಈ ರೀತಿ ಒಟ್ಟು 24 ತಂಡಗಳು ಪ್ರವೇಶ ಪಡೆದಿವೆ. 

Welcome to our 24 captains!

From 6 groups across 3 cities, one will lead their country to the 🏆 | | pic.twitter.com/Jk6fzWs4XM

— ATPCup (@ATPCup)

Tap to resize

Latest Videos

ತಲಾ 4 ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ. ರೌಂಡ್‌ ರಾಬಿನ್‌ ಮಾದರಿ ಪ್ರಕಾರ ಒಟ್ಟು 8 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಜ.12ಕ್ಕೆ ಫೈನಲ್‌ ನಡೆಯಲಿದೆ. ಸ್ಪೇನ್‌, ಜರ್ಮನಿ, ಫ್ರಾನ್ಸ್‌ ಸೇರಿದಂತೆ ಪ್ರಮುಖ ತಂಡಗಳು ಕಣದಲ್ಲಿವೆ. ಭಾರತದ ಸಿಂಗಲ್ಸ್‌ ಆಟಗಾರರು ಎಟಿಪಿ ರಾರ‍ಯಂಕಿಂಗ್‌ ಪಟ್ಟಿಯ ಅಗ್ರ 100ರೊಳಗೆ ಸ್ಥಾನ ಪಡೆಯದ ಕಾರಣ, ಭಾರತ ತಂಡಕ್ಕೆ ಪ್ರವೇಶ ಸಿಕ್ಕಿಲ್ಲ.
 

click me!