ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

Published : Jun 29, 2024, 11:35 AM IST
ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

ಸಾರಾಂಶ

ಇತ್ತೀಚೆಗೆ ಕ್ರಿಕೆಟಿಗ  ಮೊಹಮ್ಮದ್  ಶಮಿ ಜೊತೆಗೆ   ಮದುವೆಯಾಗುತ್ತಾರೆ ಎಂಬ ಊಹಾಪೋಹಾದ ಸುದ್ದಿಯ ಬೆನ್ನಲ್ಲೇ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸಾನಿಯಾ ಫೋಟೋ ಹಂಚಿಕೊಂಡಿದ್ದಾರೆ.

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯೆಬ್ ಮಲಿಕ್ ಅವರು ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹವಾದ ಬಳಿಕ ಸಾನಿಯಾ ಮಿರ್ಜಾ ಅವರ ವೈಯಕ್ತಿಕ ಜೀವನದ ಬಗ್ಗೆ  ಸಾಕಷ್ಟು ಸುದ್ದಿಯಾಯ್ತು. ವಿಚ್ಚೇದನ ಪಡೆದಿರುವ ಬಗ್ಗೆ  ಸಾನಿಯಾ ಕುಟುಂಬವು ಸ್ಪಷ್ಟಪಡಿಸಿ  'ಖುಲಾ' ಪಡೆದಿದ್ದರು ಎಂದು ಬಹಿರಂಗಪಡಿಸಿತ್ತು. ಅಂದಿನಿಂದ ಸಾನಿಯಾ ತನ್ನ ಟೆನಿಸ್ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾಳೆ ಮತ್ತು ತನ್ನ ಮಗ ಇಜಾನ್‌ನನ್ನು ಸಿಂಗಲ್ ಪೇರೆಂಟ್ ಆಗಿ ಬೆಳೆಸುತ್ತಿದ್ದಾರೆ.

ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!

ಇತ್ತೀಚೆಗೆ ಕ್ರಿಕೆಟಿಗ  ಮೊಹಮ್ಮದ್  ಶಮಿ ಜೊತೆಗೆ ಸಾನಿಯಾ ಮಿರ್ಜಾ  ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಇದನ್ನು ಸಾನಿಯಾ ತಂದೆ ಅಲ್ಲಗಳೆದಿದ್ದರು. ಇದೀಗ  ಇನ್‌ಸ್ಟಾಗ್ರಾಮ್‌ನಲ್ಲಿ ಸಾನಿಯಾ ಮಗ ಇಝಾನ್ ಜೊತೆಗಿನ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ಯಾಶುಯಲ್ ಕ್ರೀಡಾ ಉಡುಗೆ ಮತ್ತು ಕ್ಯಾಪ್‌ ತೊಟ್ಟು ಮಗನ ಜೊತೆಗೆ ಟೆನಿಸ್ ಕೋರ್ಟ್‌ನಲ್ಲಿ ಪೋಸ್ ನೀಡಿದ್ದಾರೆ.  ಸಾನಿಯಾಳ ಟೀ ಶರ್ಟ್ ನಲ್ಲಿ "ನಾನು ಚೆನ್ನಾಗಿರುತ್ತೇನೆ ಎಂಬ ಭಾವನೆ ನನಗೆ ಸಿಕ್ಕಿತು" ಎಂದು ಬರೆಯಲಾಗಿದ್ದು, ಈ ಫೋಟೋಗೆ "YES" ಎಂಬ ಕ್ಯಾಪ್ಶನ್ ನೀಡಲಾಗಿದೆ.

ಈ ಫೋಟೋಗೆ ತುಂಬಾ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಪೀಳಿಗೆಯ ಟೆನಿಸ್ ತಾರೆಯನ್ನು ಪರಿಚಯಿಸಿದ್ದೀರಿ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಮಗನಿಗೂ ಟೆನಿಸ್ ಕ್ರೀಡೆಯನ್ನು ಕಲಿಸಲಾಗುತ್ತಿದೆ ಎಂಬುದು ಈ ಫೋಟೋದಿಂದ ಸ್ಪಷ್ಟವಾಗಿದೆ.

ಮದುವೆಯಾದ 5 ದಿನಕ್ಕೆ ಗರ್ಭಿಣಿಯಾದ್ರಾ ಸೋನಾಕ್ಷಿ!? ಆಸ್ಪತ್ರೆಯಲ್ಲಿ ಕಾಣಿಸಿದ ನವಜೋಡಿ

ಇತ್ತೀಚೆಗೆ, ಕಪಿಲ್ ಶರ್ಮಾ ಅವರ ಶೋನಲ್ಲಿ, ಸಾನಿಯಾ ತಮಾಷೆಯಾಗಿ ಶಾರುಖ್ ಖಾನ್ ಅವರ ಬಯೋಪಿಕ್‌ನಲ್ಲಿ ನಟಿಸುವ ಬಗ್ಗೆ  ಚರ್ಚಿಸಿದರು. ತನ್ನ ಏಕಾಂಗಿ ಸ್ಥಿತಿಯನ್ನು ಸೂಕ್ಷ್ಮವಾಗಿ ಹೇಳುವ ಮೂಲಕ ಸುಳಿವು ನೀಡಿದರು. ಶೋಯೆಬ್ ಮಲಿಕ್ ಅವರ ವಿಚ್ಛೇದನವು ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿತು. ಜೊತೆಗೆ ಮಲಿಕ್ ತ್ವರಿತ ಮರುಮದುವೆ ವಿವಾದವನ್ನು ಹುಟ್ಟುಹಾಕಿತು. ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದಲ್ಲಿ, ಸಾನಿಯಾ ವಿಚ್ಛೇದನದ ನಂತರದ ವೈಯಕ್ತಿಕ ಬೆಳವಣಿಗೆಯ ಬಗ್ಗೆ ಪ್ರತಿಬಿಂಬಿಸಿದರು. ತಾಯ್ತನದ ಮೂಲಕ ತಾನು ಕಲಿತ ತಾಳ್ಮೆ ಮತ್ತು ವೃತ್ತಿಜೀವನ ಮತ್ತು ಪೋಷಕತನವನ್ನು ಸಮತೋಲನಗೊಳಿಸುವ ಸವಾಲುಗಳನ್ನು ಒತ್ತಿ ಹೇಳಿದರು.

ಶೋಯೆಬ್ ಮರುಮದುವೆಗೂ ಮುನ್ನ ಸಾನಿಯಾ 'ಖುಲಾ' ಪಡೆದಿದ್ದು, ಅಂದಿನಿಂದ ತನ್ನ ಟೆನಿಸ್ ವೃತ್ತಿಜೀವನಕ್ಕೆ ಸಮರ್ಪಿತಳಾಗಿದ್ದಾಳೆ ಮತ್ತು ತನ್ನ ಮಗ ಇಜಾನ್‌ನನ್ನು ಸಿಂಗಲ್ ಪೇರೆಂಟ್‌ ಆಗಿ ಬೆಳೆಸುತ್ತಿದ್ದಾಳೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!