
ಬೆಂಗಳೂರು[ಡಿ.11] ಜೋಮ್ಯಾಟೋದ ಆಹಾರ ಸರಬರಾಜು ಮಾಡುವ ವ್ಯಕ್ತಿಯೊಬ್ಬ ಹೊಟ್ಟೆ ಹಸಿವಿನಿಂದಲೋ ಏನೋ ಗ್ರಾಹಕರಿಗೆ ನೀಡಬೇಕಿದ್ದ ಆಹಾರವನ್ನು ಸ್ವಲ್ಪ ತಿಂದು ಪುನಃ ಪ್ಯಾಕ್ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ಇದಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲೂ ವ್ಯಕ್ತವಾಗಿದೆ. ಆದರೆ ಅಂತಿಮವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೊಮಾಟೋ, ನಾವು ತನಿಖೆಯನ್ನು ನಡೆಸಿದ್ದದೇವೆ. ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ಮಧುರೈನ ಎಜೆಂಟ್ ಆಗಿದ್ದು ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಈ ಘಟನೆಗೆ ಗ್ರಾಹಕರ ಬಳಿ ಕ್ಷಮಾಪಣೆ ಕೇಳುತ್ತೇವೆ ಎಂದು ಹೇಳಿದೆ.
ಇವಳೆಂಥಾ ದಿಟ್ಟೆ! ’ಮಿಡ್ ನೈಟ್’ ವಿಡಿಯೋ ಹಾಕಿದ್ದಾಳೆ ಪೂನಂ ಪಾಂಡೆ
ಆಹಾರ ಡಿಲೆವರಿ ಮಾಡುವ ವ್ಯಕ್ತಿ ಗ್ರಾಹಕರಿಗೆ ಸೇರಬೇಕಾದ್ದನ್ನು ತಿಂದಿದ್ದು ತಪ್ಪೇ ಇರಬಹುದು.. ಆದರೆ ಆ ಕ್ಷಣಕ್ಕೆ ಆತನ ಸ್ಥಿತಿ ಏನಾಗಿತ್ತೋ? ಎಂದು ಕೆಲವರು ಮರುಕ ವ್ಯಕ್ತಪಡಿಸಿದ್ದರೆ.. ಕಂಪನಿ ತೆಗೆದುಕೊಂಡ ಕ್ರಮ ಸರಿಯಾಗಿದೆ. ಕರ್ತವ್ಯದಿಂದ ವಿಮುಖರಾದವರಿಗೆ ಇಂಥ ಶಿಕ್ಷೆಯನ್ನೇ ನೀಡಬೇಕು ಎಂದು ಹೇಳಲಾಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.