ಕದಿರೇಶ್ ಹತ್ಯೆಗೆ ಜಮೀರ್ ಖಂಡನೆ

By Suvarna Web DeskFirst Published Feb 7, 2018, 10:26 PM IST
Highlights

ಬಿಜೆಪಿ ಕಾರ್ಪೊರೇಟರ್ ರೇಖಾ ಅವರ ಪತಿ ಕದಿರೇಶ್ ಕೊಲೆಯನ್ನು ಶಾಸಕ ಜಮೀರ್ ಅಹಮದ್ ಖಾನ್ ಖಂಡಿಸಿದ್ದಾರೆ.

ಬೆಂಗಳೂರು: ಬಿಜೆಪಿ ಕಾರ್ಪೊರೇಟರ್ ರೇಖಾ ಅವರ ಪತಿ ಕದಿರೇಶ್ ಕೊಲೆಯನ್ನು ಶಾಸಕ ಜಮೀರ್ ಅಹಮದ್ ಖಾನ್ ಖಂಡಿಸಿದ್ದಾರೆ.

ಕದಿರೇಶ್ ನನಗೆ ಒಳ್ಳೆ ಸ್ನೇಹಿತ, ಆತನ ಸಾವು ನೋವು ತಂದಿದೆ, ಎಂದು ಹೇಳಿರುವ ಜಮೀರ್ ಅಹಮದ್. ‘ಬಿಜೆಪಿಯವರು ಹತ್ಯೆಯಲ್ದಿ ರಾಜಕಾರಣ ಮಾಡುತ್ತಿದ್ದಾರೆ, ಎನ್.ಆರ್.ರಮೇಶ್ ಅನಾವಶ್ಯಕವಾಗಿ ನನ್ನ ಹೆಸರನ್ನ ತಂದಿದ್ದಾರೆ, ರಮೇಶ್ ಹತ್ಯೆಯಲ್ಲೂ ರಾಜಕಾರಣ ಮಾಡ್ತಿದ್ದಾರೆ,’ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕದಿರೇಶ್ ಕೊಲೆಗೆ ಅರವಿಂದ ಲಿಂಬಾವಳಿ ಪ್ರತಿಕ್ರಿಯೆ:

ವಿಧಾನಸೌಧದ ಮಗ್ಗುಲಲ್ಲೇ ಬರ್ಬರ ಹತ್ಯೆಯಾಗಿದೆ, ಬೆಂಗಳೂರಿನಲ್ಲೇ ಈ ರೀತಿ ನಡೆಯುತ್ತಿರುವುದು ಆಘಾತ ತಂದಿದೆ. ಕದಿರೇಶ್ ಬಿಜೆಪಿ‌ ಕಾರ್ಯಕರ್ತ ಎಂಬ ಕಾರಣಕ್ಕೆ ಕೊಲೆಯಾಗಿರಬಹುದು, ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ವಾರ್ಡ್ ನಂಬರ್ 138 ಛಲವಾದಿ ಪಾಳ್ಯರ ಕಾರ್ಪೋರೇಟರ್​ ರೇಖಾ ಪತಿ ಕದಿರೇಶನ್’ನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಹತ್ಯೆ ಮಾಡಿದ್ದಾರೆ. ಸಂಜೆ 4 ಗಂಟೆ ವೇಳೆಗೆ ಕಾಟನ್​ಪೇಟೆಯ ಅಂಜಿನಪ್ಪ ಗಾರ್ಡನ್​​ನಲ್ಲಿ ಕದಿರೇಶ್​ ಹತ್ಯೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಮೃತ ಕದಿರೇಶ್ ಕಾಟನ್​ಪೇಟೆಯಲ್ಲಿ 2002ರಲ್ಲೇ ರೌಡಿ ಶೀಟರ್ ಖಾತೆ ತೆರೆದಿದ್ದ. ಕದಿರೇಶ್​​ ವಿರುದ್ಧ ಹಲವಾರು ಶ್ರೀರಾಂಪುರ, ಕಾಟನ್​ಪೇಟೆ’ಗಳಲ್ಲಿ ಕೇಸ್’ಗಳು ದಾಖಲಾಗಿತ್ತು. ಒಟ್ಟು 15 ಪ್ರಕರಣಗಳಲ್ಲಿ ಕದಿರೇಶ್ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.

ಕದಿರೇಶ್ ವಿರುದ್ಧದ 5 ಪ್ರಕರಣಗಳು ಖುಲಾಸೆಯಾಗಿದ್ದು, ಇನ್ನೂ 10 ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಕದಿರೇಶ್​​ ವಿರುದ್ಧ ಕೊಲೆ, ಕೊಲೆಯತ್ನ. ಹಲ್ಲೆ ಬೆದರಿಕೆ ದೂರುಗಳಿತ್ತು.

click me!