ಸ್ವತಂತ್ರ ದಿನಾಚರಣೆಯಂದು ಮದರಸಗಳ ಕಾರ್ಯಕ್ರಮಗಳನ್ನು ವಿಡಿಯೋ ಮಾಡುವಂತೆ ಯೋಗಿ ಸರ್ಕಾರ ಆದೇಶ

By Suvarna Web DeskFirst Published Aug 11, 2017, 5:13 PM IST
Highlights

ಈ ಬಾರಿ ನಡೆಯಲಿರುವ ಸ್ವತಂತ್ರ ದಿನಾಚರಣೆಯನ್ನು ಮದರಸಗಳಲ್ಲಿ ಹೇಗೆ ಆಚರಿಸುತ್ತಾರೆ ಎನ್ನುವುದನ್ನು ವಿಡಿಯೋಗ್ರಾಫ್ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.

ಲಕ್ನೋ (ಆ.11): ಈ ಬಾರಿ ನಡೆಯಲಿರುವ ಸ್ವತಂತ್ರ ದಿನಾಚರಣೆಯನ್ನು ಮದರಸಗಳಲ್ಲಿ ಹೇಗೆ ಆಚರಿಸುತ್ತಾರೆ ಎನ್ನುವುದನ್ನು ವಿಡಿಯೋಗ್ರಾಫ್ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.

ಸ್ವತಂತ್ರ ದಿನಾಚರಣೆ ದಿನ ಬೆಳಿಗ್ಗೆ 8 ಗಂಟೆಗೆ  ದ್ವಜಾರೋಹಣ ಮಾಡಲಾಗುತ್ತದೆ. 8.10 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಲಾಗುತ್ತದೆ. ಈ ವಿಡಿಯೋವನ್ನು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಆದೇಶಿಸಲಾಗಿದೆ.

Latest Videos

ಕಳೆದ ವರ್ಷ ಸ್ವತಂತ್ರ ದಿನಾಚರಣೆಯಲ್ಲಿ ಮದರಸಗಳು ರೀತಿ ರಿವಾಜುಗಳನ್ನು ಪಾಲಿಸಿರಲಿಲ್ಲ. ಇದನ್ನು ಉತ್ತರ ಪ್ರದೇಶ ಮದಸರ ಮಂಡಳಿ ಸೇರಿದಂತೆ ಕೆಲವು ಸಂಘಟನೆಗಳು ವಿರೋಧಿಸಿದ್ದವು. ಈ ಹಿನ್ನಲೆಯಲ್ಲಿ ಈ ಭಾರಿ ಸ್ವತಂತ್ರ ದಿನಾಚರಣೆಯ ವಿಡಿಯೋ ಮಾಡಬೇಕೆಂದು ಆದೇಶ ನೀಡಲಾಗಿದೆ.

ಸ್ವಾತಂತ್ರ ಹೋರಾಟಕ್ಕೆ ಮದರಸಗಳು ಹಾಗೂ ಅದರ ಶಿಕ್ಷಕರು ಮೌಲ್ಯಯುತವಾದ ಕೊಡುಗೆ ನೀಡಿದ್ದಾರೆ. ಆದರೂ ನಮ್ಮನ್ನು ಸಂಶಯಾಸ್ಪದವಾಗಿ ನೋಡುತ್ತಿರುವುದು ದುರಾದೃಷ್ಟಕರವಾದ ವಿಚಾರ ಎಂದು ಮದರಸದ ಮುಖ್ಯಸ್ಥರು ಹೇಳಿದ್ದಾರೆ.  

click me!