‘ಗಂಡುಮೆಟ್ಟಿದ ನಾಡಿನ ಜನರಿಗೆ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ

By Suvarna Web DeskFirst Published Dec 21, 2017, 9:14 PM IST
Highlights

ಗಂಡುಮೆಟ್ಟಿದ ನಾಡಿನ ಜನರಿಗೆ ನಮಸ್ಕಾರ ಎಂದು ಯೋಗಿ ಆದಿತ್ಯನಾಥ್ ಭಾಷಣ ಪ್ರಾರಂಭಿಸಿದರು.

ಹುಬ್ಬಳ್ಳಿ (ಡಿ.21): ಗಂಡುಮೆಟ್ಟಿದ ನಾಡಿನ ಜನರಿಗೆ ನಮಸ್ಕಾರ ಎಂದು ಯೋಗಿ ಆದಿತ್ಯನಾಥ್ ಭಾಷಣ ಪ್ರಾರಂಭಿಸಿದರು.

ಕರ್ನಾಟಕದ ಭೂಮಿ ರಾಮಭಕ್ತ ಭಜರಂಗಬಲಿ ಹನುಮಂತನ ನಾಡಾಗಿದೆ. ಯಶಸ್ವಿ ಪರಿವರ್ತನಾ ಯಾತ್ರೆ ಮಾಡುತ್ತಿರುವ ಯಡಿಯೂರಪ್ಪನವರಿಗೆ ಅಭಿನಂದನೆಗಳು. ಕರ್ನಾಟಕ ರಾಮಭಕ್ತರ, ಹನುಮ ಭಕ್ತರ ನಾಡು. ಇಂತಹ  ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಪೂಜೆ ಮಾಡುತ್ತಿರುವುದು ದೌರ್ಭಾಗ್ಯ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ, ಅಂದರೆ ಟಿಪ್ಪು ಪೂಜೆ ಮಾಡುವವರು ಮತ್ತೆ ಬರಲ್ಲ. ಗೋಮಾಂಸ ಸೇವನೆಯ ಪರವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಮಾತು ನನಗೆ ಬೇಸರ ತಂದಿತ್ತು. ಮುಖ್ಯಮಂತ್ರಿಯಾದವರು ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡಬೇಕು. ರಕ್ಷಕರೇ ಭಕ್ಷಕರಾದಾಗ ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Latest Videos

ಕಾಂಗ್ರೆಸ್‌ನವರು ಕರ್ನಾಟಕದ ಜನರ ಹಣ ಲೂಟಿ ಮಾಡಿ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಗಮನ ಕೊಡುತ್ತಿಲ್ಲ.  ದೇಶದಲ್ಲಿ ಬಿಜೆಪಿ ಸರ್ಕಾರ ಇರುವಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ.  ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ.  ಗುಜರಾತ್ ಜನರು ಕಾಂಗ್ರೆಸ್ ಕಪಾಳಕ್ಕೆ ಹೊಡೆದಿದ್ದಾರೆ. ಕರ್ನಾಟಕದ ಜನರೂ ಕಾಂಗ್ರೆಸ್‌ ಪಕ್ಷದ ಕಪಾಳಕ್ಕೆ ಹೊಡೆದು ಮನೆಗೆ ಕಳಿಸಬೇಕಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ದೇಶದ ಮತ್ತು ರಾಜ್ಯದ ಹಿತದ್ರಷ್ಟಿಯಿಂದ ಒಳ್ಳೆಯದು. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ವಿಕಾಸದತ್ತ ಕೊಂಡೊಯ್ಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ದೇಶದ ಅಭಿವೃದ್ಧಿ ಸಹಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

click me!