ಬದಲಾಗಲಿದೆ ರಾಮಜನ್ಮ ಭೂಮಿ ಅಯೋಧ್ಯೆ

By Web DeskFirst Published Aug 2, 2018, 7:53 AM IST
Highlights

ರಾಮಜನ್ಮ ಭೂಮಿ ಪ್ರದೇಶವಾದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ಅತ್ಯಂತ ಭವ್ಯವಾದ ನವ್ಯ ಅಯೋಧ್ಯ ನಗರ. ಇದಕ್ಕೆ ಯೋಗಿ ಆದಿತ್ಯನಾಥ ಸರ್ಕಾರ ಹಲವಯ ಯೋಜನೆಗಳನ್ನು ಕೈಗೊಳ್ಳುತ್ತಿದೆ.

ಫೈಜಾಬಾದ್: ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ರಾಮಜನ್ಮ ಭೂಮಿ ಅಯೋಧ್ಯೆ ಯನ್ನು ಇನ್ನಷ್ಟು ಆಕರ್ಷಣೆಯ ತಾಣವನ್ನಾಗಿ ಮಾಡಲು ಹೊರಟಿದ್ದಾರೆ. ರಾಮಜನ್ಮ ಭೂಮಿಯಿಂದ ಕೇವಲ 10 ಕಿ.ಮೀ. ದೂರದಲ್ಲಿ ‘ನವ್ಯ ಅಯೋಧ್ಯಾ ನಗರ’ ಎಂಬ ಐಷಾರಾಮಿ ನಗರ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾಪ ಕಳಿಸಿದೆ. ಯೋಜನೆಗಾಗಿ 500 ಎಕರೆ ಜಮೀನನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಸರಯೂ ನದಿ ದಂಡೆಯ ಮೇಲೆ ನಗರವು ನಿರ್ಮಾಣ ಗೊಳ್ಳಲಿದೆ. 

ಲಂಡನ್ ಮಾದರಿಯ ಸುಸಜ್ಜಿತ ರಸ್ತೆ, ಒಳಚರಂಡಿ, ಹೋಟೆಲ್, ವಿದ್ಯುತ್ ವ್ಯವಸ್ಥೆ, ಬೃಹತ್ ವಾಣಿಜ್ಯಿಕ ಹಾಗೂ ವಸತಿ ಸಂಕೀರ್ಣ ಗಳು, ನದಿ ಪಕ್ಕ ರೆಸಾರ್ಟ್, ಪಂಚತಾರಾ ಹೋಟೆಲ್‌ಗಳು ತಲೆಯೆತ್ತ ಲಿವೆ. ‘ಹಳೇ ಅಯೋಧ್ಯಾ ನಗರಿಯು ತುಂಬಾ ಇಕ್ಕಟ್ಟಾಗಿದೆ. ಅದೇ ನಗರವನ್ನು ಸುಧಾರಿಸಿ ಅಭಿವೃದ್ಧಿಪಡಿಸಲು ಆಗುವುದಿಲ್ಲ. ಹೀಗಾಗಿ ಹೊಸ ಅಯೋಧ್ಯಾ ನಗರವನ್ನು ಸ್ಥಾಪಿಸುತ್ತಿದ್ದೇವೆ. ವರ್ಷಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ’ ಎಂದು ಫೈಜಾಬಾದ್ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಹೇಳಿದರು.

click me!