
ನವದೆಹಲಿ: ಇತ್ತೀಚೆಗೆ ಕಲ್ಲಿಕೋಟೆಯ ಪ್ರಾಧ್ಯಾಪಕರೊಬ್ಬರು ತಮ್ಮ ಕಾಲೇಜಿನ ವಿದ್ಯಾರ್ಥಿನಿಯರ ಎದೆ ಕೊರೆದಿಟ್ಟಕಲ್ಲಂಗಡಿ ಹಣ್ಣಿನಂತಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಕೇರಳದ ಶಿಕ್ಷಕರೊಬ್ಬರು ಜೀನ್ಸ್ ಹಾಗೂ ಟೀ ಶರ್ಟ್ ಧರಿಸುವ ಮಹಿಳೆ ಹಿಜಡಾಗಳಿಗೆ ಜನ್ಮ ನೀಡುತ್ತಾಳೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಕೇರಳದ ಶ್ರೀ ಶಂಕರ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಶಿಕ್ಷಕರಾಗಿರುವ ಡಾ.ರಜಿತ್ ಕುಮಾರ್, ಹಿಜಡಾ ಮತ್ತು ದುರ್ಬಲ ಮಕ್ಕಳು ಯಾಕೆ ಹುಟ್ಟುತ್ತಾರೆ ಎಂಬ ಬಗ್ಗೆ ತರಗತಿಯೊಂದರಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಮಹಿಳೆಯರು ಜೀನ್ಸ್ ಧರಿಸುವುದರಿಂದ ಅವರಲ್ಲಿ ಸ್ತ್ರೀತನ ದುರ್ಬಲಗೊಳ್ಳುತ್ತದೆ.
ಹೀಗಾಗಿ ಅವರು ಹಿಜಡಾಗಳಿಗೆ ಜನ್ಮ ನೀಡುತ್ತಾರೆ. ಸರಿಯಾಗಿ ಬಟ್ಟೆತೊಡುವ ಪುರಷ ಮತ್ತು ಮಹಿಳೆಯರಿಗೆ ಒಳ್ಳೆಯ ಮಗು ಜನಿಸುತ್ತದೆ ಎಂದು ಹೇಳಿದ್ದಾರೆ. ರಜಿತ್ ಕುಮಾರ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ರಜಿತ್ ಕುಮಾರ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.