ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ: ಮರಕ್ಕೆ ಕಟ್ಟಿ ಯುವತಿಗೆ ಥಳಿತ

Published : Oct 06, 2018, 01:28 PM IST
ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ: ಮರಕ್ಕೆ ಕಟ್ಟಿ ಯುವತಿಗೆ ಥಳಿತ

ಸಾರಾಂಶ

ಬೇರೆ ಜಾತಿಯ ಯುವಕನೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ನವಾಡ ಜಿಲ್ಲೆಯ ರಜೌಲಿ ಪ್ರದೇಶದಲ್ಲಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ. 

ಪಾಟ್ನಾ :  ಬೇರೆ ಜಾತಿಯ ಯುವಕನೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ನವಾಡ ಜಿಲ್ಲೆಯ ರಜೌಲಿ ಪ್ರದೇಶದಲ್ಲಿ  ಇಂತಹ ಅಮಾನವೀಯ ಕೃತ್ಯ ಎಸಗಲಾಗಿದೆ.  

ಇಲ್ಲಿ ಹಳ್ಳಿ ಪಂಚಾಯತ್  ನಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ ಈ ರೀತಿಯಾಗಿ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೇ ಆಕೆಯ ತಂದೆಯೂ ಕೂಡ ಈ ಶಿಕ್ಷೆಯನ್ನು ಸಮ್ಮತಿಸಿದ್ದು ಬೇರೆ ಜಾತಿ ಯುವಕನೊಂದಿಗೆ ಓಡಿ ಹೋಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದರಿಂದ ಆಕೆಯನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಲಾಗಿದೆ.  ಕಳೆದ ಸೆಪ್ಟೆಂಬರ್ 30ರಂದು ಇಬ್ಬರೂ ಕೂಡ ಹಳ್ಳಿಯನ್ನು ಬಿಟ್ಟು ಓಡಿಹೋಗಿದ್ದರು. ಪಕ್ಕದ ಹಳ್ಳಿಗೆ ತೆರಳಿ ಇಬ್ಬರೂ ಕೂಡ ಒಟ್ಟಿಗೆ ವಾಸ ಮಾಡುತ್ತಿದ್ದರು. ಈ ವೇಳೆ ಆಕೆಯನ್ನು ಮತ್ತೆ ವಾಪಸ್ ಕರೆದುಕೊಂಡು ಬಂದು ಈ ಕೃತ್ಯ ಎಸಗಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಯುವತಿ ತನ್ನ ಗೆಳೆಯನೊಂದಿಗೆ ಹಳ್ಳಿಯೊಂದರಲ್ಲಿ ವಾಸ ಮಾಡುತ್ತಿದ್ದೆ ಈ ವೇಳೆ ತಮ್ಮನ್ನು ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ.

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!