ಆಡಳಿತ ಮಂಡಳಿಯಲ್ಲಿ ಹೆಚ್ಚಾದ ಮಹಿಳಾ ಪಾರುಪತ್ಯ

By Internet DeskFirst Published Sep 27, 2016, 3:59 PM IST
Highlights

ನವದೆಹಲಿ (ಸೆ.27): ಇದೊಂದು ಮಹಿಳಾ ಸಾಧಕರಿಗೆ ಮತ್ತು ಉದ್ಯೋಗಿಗಳಿಗೆ ಸ್ಫೂರ್ತಿ ಕೊಡುವ ಮಾಹಿತಿ ಇದು. ಹಿಂದಿನ ಆರು ವರ್ಷಗಳಿಂದ ಈಚೆಗೆ ವಿವಿಧ ಸಂಸ್ಥಗಳಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸ್ಥಾನಗಳನ್ನು ಅಲಂಕರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.

ಈ ಬಗ್ಗೆ ‘ಕ್ರೆಡಿಟ್‌ ಸ್ಯೂಸ್‌ ರಿಸಚ್‌ರ್‍ ಇನ್ಸಿಟ್ಯೂಟ್ ನ  ದ್ವೈವಾರ್ಷಿಕ ವರದಿಯಲ್ಲಿ ಅದನ್ನು ಉಲ್ಲೇಖಿಸಲಾಗಿದೆ. ಅದರ ಪ್ರಕಾರ 2010ರಲ್ಲಿ ಪ್ರಮುಖ ಸಂಸ್ಥೆಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಮಹಿಳಾ ಅಧಿಕಾರಿಗಳ ಪ್ರಮಾಣ ಶೇ.5.5ರಷ್ಟುಇತ್ತು. 2015ರಲ್ಲಿ ಅದು ಶೇ.11.2ಕ್ಕೆ ಏರಿಕೆಯಾಗಿದೆ.

Latest Videos

ಏಷ್ಯಾ-ಫೆಸಿಫಿಕ್‌ ವಲಯದಲ್ಲಿ ಲಿಂಗ ವೈವಿಧ್ಯತೆ (ಜೆಂಡರ್‌ ಡೈವರ್ಸಿಟಿ)ಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದ್ದು, ಜಾಗತಿಕ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಅಂತರ ಶೇ.14.7ಕ್ಕೆ ತಗ್ಗಿದೆ. ನಿರ್ದೇಶಕ ಮಂಡಳಿಗಳಲ್ಲಿ ಮಹಿಳೆಯರು

ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ವಿಚಾರದಲ್ಲಿ ಪ್ರಗತಿಯಾಗಿದೆ. ಆದರೆ ಆಡಳಿತ ಮಂಡಳಿ ಮಟ್ಟದಲ್ಲಿ ಅದರ ಪ್ರಮಾಣ ನಿರೀಕ್ಷಿತವಾಗಿಲ್ಲ ಎಂದು ವರದಿ ಹೇಳಿದೆ. 2014ರಲ್ಲಿ ಅದರ ಪ್ರಮಾಣ ಶೇ.7.8 ಇದ್ದದ್ದು ಪ್ರಸಕ್ತ ಸಾಲಿನಲ್ಲಿ ಶೇ.7.2ಕ್ಕೆ ಇಳಿಕೆಯಾಗಿದೆ. ಆದರೆ ಕೊರಿಯಾ ಮತ್ತು

ಜಪಾನ್‌ನಲ್ಲಿ ಈ ಪ್ರಮಾಣ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಬೋರ್ಡ್‌ರೂಮ್‌ (ಆಡಳಿತ ಮಂಡಳಿ)ನಲ್ಲಿ ಮಹಿಳೆಯರ ಭಾಗಿದಾರಿಕೆ ಶೇ.14.7ಕ್ಕೆ ಹೆಚ್ಚಾಗಿದೆ. 2013ರಲ್ಲಿ ಅದರ ಪ್ರಮಾಣ ಶೇ.12.7ರಷ್ಟಾಗಿತ್ತು. ಪ್ರಮುಖ ಹುದ್ದೆಯಲ್ಲಿದ್ದರೂ ಅವರು ಮತ್ತೊಬ್ಬರ ಕೈಗೊಂಬೆ

(ಕ್ವೀನ್‌ ಬೀ ಸಿಂಡ್ರೋಮ್‌) ಯಾಗಿದ್ದಾರೆ ಎಂಬ ವಾದವನ್ನು ವರದಿ ತಿರಸ್ಕರಿಸಿದೆ.

ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ ರಾಷ್ಟ್ರಗಳಾಗಿರು ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ದಕ್ಷಿಣ ಕೊರಿಯಾ, ತೈವಾನ್‌ ಮತ್ತು ಥೈಯ್ಲೆಂಡ್‌ಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಮಹಿಳೆಯರು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿದಾರಿಗಳಾಗುತ್ತಿದ್ದಾರೆ.

click me!