ಹೆಣ್ಣಿನ ಪಾವಿತ್ರ್ಯತೆ ಯೋನಿಯಲ್ಲಿಲ್ಲ

By Web DeskFirst Published Nov 6, 2018, 11:58 AM IST
Highlights

ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಆಕೆಯ ಯೋನಿಯಲ್ಲಿ ಇಲ್ಲ. ಆದರೆ ಹಿಂದಿನಿಂದಲೂ ಮುಟ್ಟಾದಾಗ ಮಹಿಳೆ ಅಶುದ್ಧಳು ಎನ್ನುವುದನ್ನು ಆಕೆಯ ತಲೆಗೆ ತುಂಬಲಾಗಿದೆ ಎಂದು ನಟಿ ಪಾರ್ವತಿ ಹೇಳಿದ್ದಾರೆ. 

ತಿರುವುನಂತಪುರ :  ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನಿಂದ ತೀರ್ಪು ಬಂದ ಬೆನ್ನಲ್ಲೇ ಅನೇಕರಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದವು. ಇದೀಗ ಸುಪ್ರೀಂ ತೀರ್ಪಿನ ಪರ ನಟಿ ಪಾರ್ವತಿ ಬ್ಯಾಟಿಂಗ್ ಮಾಡಿದ್ದಾರೆ.  

ಕೆಲ ಮಹಿಳೆಯರು ದೇಗುಲವನ್ನು ಪ್ರವೇಶಿಲು ಯತ್ನ ಮಾಡಿ ವಿಫಲರಾದರು. ಇದೀಗ ಈ ಬಗ್ಗೆ ಬಹುಭಾಷಾ ನಟಿ ಪಾರ್ವತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಸುಪ್ರೀಂಕೋರ್ಟ್ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ ತೀರ್ಪನ್ನು ಸ್ವಾಗತಿಸಿದ ಪಾರ್ವತಿ ಮುಟ್ಟಾಗುವುದರಿಂದಲೇ ಮಕ್ಕಳು ಜನಿಸುತ್ತಾರೆ. ಆದರೆ ಮುಟ್ಟಾದಾಗ ಅಪವಿತ್ರವೆಂದು ಯಾಕೆ ಪರಿಣಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ಮುಟ್ಟಾದಾಗ ಮಹಿಳೆ ದೇಹ ಅಪವಿತ್ರ ಎಂದು ಯಾಕೆ ಬಯಸಬೇಕು. ನನಗೆ ದೇವಾಲಯಕ್ಕೆ ಯಾವಾಗ ತೆರಳಬೇಕು ಎನಿಸುತ್ತದೆಯೋ ಆಗ ಹೋಗುತ್ತೇನೆ ಎಂದಿದ್ದಾರೆ. 

ಹಿಂದಿನಿಂದಲೂ ಕೂಡ ಮುಟ್ಟಾದಾಗ ಅಪವಿತ್ರಳು ಎಂಬ ಭಾವನೆಯನ್ನು ತಲೆಗೆ ತುಂಬಲಾಗಿದೆ. ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಕೇವಲ ಯೋನಿಯಲ್ಲಿ ಇಲ್ಲ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

click me!