
ಹಾಸನ: ಅಮಾಯಕರನ್ನು ಯಾಮಾರಿಸಿ ಇಲ್ಲವೇ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡುವ ಪ್ರಕರಣಗಳು ಹಾಸನ ಜಿಲ್ಲೆಯಲ್ಲೂ ಹೆಚ್ಚಾಗ ತೊಡಗಿವೆ. ಮಹಿಳೆಯೊಬ್ಬರು ಕಳ್ಳರ ಕೈ ಚಳಕದಿಂದ 60 ಸಾವಿರ ಕಳೆದುಕೊಂಡಿದ್ದಾರೆ. ಹಾಸನದ ರೀನಾ ,ಹಣ ಕಳೆದುಕೊಂಡ ಮಹಿಳೆ. ಇವರ ಅಕೌಂಟ್ ನಿಂದ 60 ಸಾವಿರ ಹಣ ಮಾಯವಾಗಿದೆ.
"
ಜೂನ್ 16 ರಂದು ಹಾಸನದಿಂದ ಮಡಿಕೇರಿಗೆ ತೆರಳುವ ವೇಳೆ ಜನರ ನೂಕುನುಗ್ಗಲು ವೇಳೆ ಕಳ್ಳರು, ರೀನಾ ಅನ್ನೋ ಮಹಿಳೆಯ ಪರ್ಸ್ ಎಗರಿಸಿದ್ದಾರೆ. ವಿಪರ್ಯಾಸ ಎಂದ್ರೆ ರೀನಾ ಪರ್ಸ್ ನಲ್ಲೆ ಒಂದು ಕಡೆ ಎಟಿಎಂ ನಂಬರ್ ಸಹ ಬರೆದಿಟ್ಟಿದ್ದರು. ಲಾಡು ಬಂದು ಬಾಯಿಗೆ ಬಿತ್ತು ಅನ್ನೋ ಹಾಗೆ, ಅದೇ ದಿನ ಸಂಜೆ ಬಿಎಂ ರಸ್ತೆಯಲ್ಲಿರುವ ಬ್ಯಾಂಕ್ ಇಂಡಿಯಾ ಎಟಿಎಂ ನಿಂದ 40 ಸಾವಿರ, ಮಾರನೇ ದಿನ ಕೆರೂರು ವೈಶ್ಯ ಬ್ಯಾಂಕ್ ಎಟಿಎಂ ನಲ್ಲಿ 20 ಸಾವಿರ ಡ್ರಾ ಮಾಡಿದ್ದಾರೆ.
ಎಟಿಎಂ ನಿಂದ ಹಣ ಡ್ರಾ ಮಾಡಿಕೊಂಡಿರುವುದು ಓರ್ವ ಮಹಿಳೆ. ಅನಕ್ಷರಸ್ಥ ಮಹಿಳೆಯಂತೆ ಆಕೆ ಸಿಸಿಟಿವಿ ದೃಶ್ಯ ದಲ್ಲಿ ಕಾಣಿಸುತ್ತಿದ್ದಾಳೆ. ಎಟಿಎಂ ನಲ್ಲಿ ಆಕೆ ಕದ್ದ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಹಾಸನ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆದ್ರೆ ಆಕೆಯ ಗುರುತು ಪತ್ತೆಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.