ಬಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Published : Sep 16, 2017, 11:39 PM ISTUpdated : Apr 11, 2018, 12:49 PM IST
ಬಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಸಾರಾಂಶ

ಜ್ಯೋತಿ ಅವರು ಕಲಬುರಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್‌ನಲ್ಲಿ ಹೆರಿಗೆಗೆಂದು ಚಿಂಚೋಳಿ ತಾಲೂಕಿನ ತಾಂಡೂರಿಗೆ ತೆರಳುತ್ತಿದ್ದರು.

ಕಲಬುರಗಿ(ಸೆ.16): ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲೆ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಬಳಿ ಶನಿವಾರ ನಡೆದಿದೆ.

ಜಿಲ್ಲೆಯ ಚಿಂಚೋಳಿ ತಾಲೂಕಿನ ಛತ್ತರ್‌ಸಾಲಾ ಗ್ರಾಮದ ಜ್ಯೋತಿ(26) ಎಂಬುವವರೇ ಬಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ. ಜ್ಯೋತಿ ಅವರು ಕಲಬುರಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್‌ನಲ್ಲಿ ಹೆರಿಗೆಗೆಂದು ಚಿಂಚೋಳಿ ತಾಲೂಕಿನ ತಾಂಡೂರಿಗೆ ತೆರಳುತ್ತಿದ್ದರು. ಬಸ್ ಸೇಡಂ ಸಮೀಪದಲ್ಲಿರುವಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಹೆರಿಗೆಗೆ ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರು ಸಹಾಯ ಮಾಡಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ಶಿವಾಜಿ ಹಾಗೂ ನಿರ್ವಾಹಕ ಪ್ರಶಾಂತ್ ಅವರು ಬಸ್ ಅನ್ನು ತಕ್ಷಣ ಸೇಡಂ ಸರ್ಕಾರಿ ಆಸ್ಪತ್ರೆ ಕೊಂಡೊಯ್ದು ಜ್ಯೋತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live Updates Today Sep 26th: ಮಧ್ಯಪ್ರದೇಶದಲ್ಲಿ 21 ವರ್ಷ ನಂತರ ಸರ್ಕಾರಿ ಬಸ್‌ ಸೇವೆ ಆರಂಭ!
Karnataka News Live Updates Sep 26th: ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ, ಸಿಎಂ ಪಾತ್ರದಲ್ಲಿ ನಟನೆ