
ಮೈಸೂರು (ಫೆ,28): ಎರಡನೇ ಮದುವೆಗೆ ಪೋಷಕರು ಒಪ್ಪದ ಕಾರಣ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಲ್ಲಿ ನಡೆದಿದೆ.
ಮೆಲಿನಾ ಎಂಬಾಕೆಯೇ ನೇಣಿಗೆ ಶರಣಾದ ಮಹಿಳೆ. ಮೇಲೀನಾಗೆ ಈ ಮೊದಲೇ ವಿವಾಹವಾಗಿದ್ದು, ಪತಿಯನ್ನು ಕಳೆದುಕೊಂಡಿದ್ದಳು. ಆದರೆ ಕೆಲ ದಿನಗಳ ಬಳಿಕ ಎನ್.ಆರ್.ಮೋಹಲ್ಲಾದ ರೋಷನ್ ಎಂಬಾತನ ಮೇಲೆ ಪ್ರೀತಿ ಉಂಟಾಗಿ ಆತನನ್ನು ಮದುವೆ ಮಾಡಿಕೊಡುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಳು.
ಆದರೆ ಮೇಲಿನಾಗಿಂತಲೂ ಯುವಕ ರೋಷನ್ 5ವರ್ಷ ಕಡಿಮೆ ವಯಸ್ಸಿನವನಾಗಿದ್ದರಿಂದ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಮೇಲಿನಾ ಇಂದು ನಾಯ್ಡು ನಗರದಲ್ಲಿನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ.
ಮೇಲಿನಾ ತನ್ನ ಡೆತ್‌ನೋಟ್’ನಲ್ಲಿ ಮಮತಾ, ಲಿಲ್ಲಿ, ಪಪ್ಪಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರ ಹೆಸರನ್ನು ಬರೆದಿದ್ದಳು. ಈ ಹಿನ್ನೆಲೆಯಲ್ಲಿ ಈ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ರೋಷನ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನೆ ಸಂಬಂಧ ಮೆಲೀನಾ ತಾಯಿ ಮೇರಿ ಎನ್.ಆರ್. ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.