
ಬೆಂಗಳೂರು(ಡಿ.6): ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರನ್ನು ಒಳಗೊಂಡ ಅಹಿಂದ ವರ್ಗದ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಲ್ಯಾಪ್‌ಟಾಪ್ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಎಸ್ಸಿ-ಎಸ್ಟಿ ವರ್ಗದವರಿಗೆ ಬಜೆಟ್’ನಲ್ಲಿ ಹಣ ಮೀಸಲು ಸೇರಿದಂತೆ ಅಹಿಂದ ಓಲೈಕೆಗಾಗಿ ನಾಲ್ಕೂವರೆ ವರ್ಷಗಳಲ್ಲಿ ಸಹಸ್ರಾರು ಕೋಟಿ ರು.ಗಳನ್ನು ಸಿದ್ದರಾಮಯ್ಯ ಸರ್ಕಾರ ವಿನಿಯೋಗಿಸಿದೆ.
ಹೀಗಾಗಿ ಸರ್ಕಾರಕ್ಕೆ ಅಹಿಂದ ಸರ್ಕಾರ ಎಂಬ ಟೀಕೆಗಳೂ ಇವೆ. ಆದಾಗ್ಯೂ ತಮಗೆ ಆ ಬಗ್ಗೆ ಮುಜುಗರವಿಲ್ಲ, ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟು ಕೊಂಡು ಯೋಜನೆ ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ.
ಸಿದ್ದು ಸರ್ಕಾರದ ಮರು ಆಯ್ಕೆ ಯಲ್ಲಿ ಅಹಿಂದ ಓಲೈಕೆ ಪೂರ್ಣ ಪ್ರಮಾಣ ದಲ್ಲಿ ಅಲ್ಲದಿದ್ದರೂ, ಒಂದಷ್ಟು ಮಟ್ಟಿಗಾ ದರೂ ನೆರವಿಗೆ ಬರುತ್ತದೆ ಎಂಬ ಸಾರ್ವತ್ರಿಕ ಅಭಿಪ್ರಾಯ ರಾಜ್ಯದಲ್ಲಿ ವ್ಯಕ್ತವಾಗಿದೆ.
ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಈ ಅಭಿಪ್ರಾಯ ಹೇಳಿದವರ ಸಂಖ್ಯೆ ಶೇ.50ರ ಗಡಿ ದಾಟಿರುವುದು ಗಮನಾರ್ಹ. ಆದರೆ ಕರಾವಳಿಯಲ್ಲಿ ಸರ್ಕಾರಕ್ಕೆ ಅಹಿಂದ ಓಲೈಕೆ ಎಂಬುದು ತಿರುಗುಬಾಣವಾಗಲಿದೆ ಎಂಬ ಸಂದೇಶ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.