
ಅಹಮ್ಮದಾಬಾದ್(ಜೂ.18): ಇಲ್ಲೇನು ತಪ್ಪಾಗಿದೆ ಅಂತಾ ಅಂದ್ಕೊಂಡಿದ್ದೀರಾ? "ಗಂಡನ ಗಡ್ಡ ಮೀಸೆಗೆ ಕೋರ್ಟ್ ಹತ್ತಿದ ಪತ್ನಿ" ಹೀಗಾಗಬೇಕಿತ್ತು ಅನಿಸುತ್ತಿದೆಯಾ? ನಿಮ್ಮ ಊಹೆ ತಪ್ಪು. ಇದು ಪತ್ನಿಯ ಗಡ್ಡ ಮೀಸೆಯಿಂದಲೇ , ಪತಿ ಕೋರ್ಟ್ ಮೆಟ್ಟಿಲೇರಿದ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ.
ಪತ್ನಿಗೆ ಗಡ್ಡ ಮೀಸೆ ಇದೆ. ಇಷ್ಟೇ ಅಲ್ಲ ಆಕೆಗೆ ಪುರುಷರ ಧ್ವನಿ ಇದೆ ಎಂದು ವಿಚ್ಚೇದನಕ್ಕಾಗಿ ನ್ಯಾಯಾಲದ ಮೊರೆ ಹೋಗಲಾಗಿದೆ. ತಾನು ಮದುವೆಯಾಗೋ ವೇಳೆ ಆಕೆಯ ಮುಖವನ್ನ ನೋಡಲು ಬಿಟ್ಟಿಲ್ಲ. ಹುಡುಗಿ ನೋಡಿದ ಸಂದರ್ಭದಿಂದ, ನಿಶ್ಚಿತಾರ್ಥ ಹಾಗೂ ಮದುವೆ ಸಮಾರಂಭದಲ್ಲಿ ಆಕೆಯ ಮುಖಕ್ಕೆ ದುಪ್ಪಟ್ಟ ಹಾಕಲಾಗಿತ್ತು. ಆದರೆ ಮದುವೆಯಾಗಿ ಒಂದು ವಾರ ಕಳೆದಾಗ ಆಕೆಗೆ ಗಡ್ಡ ಮೀಸೆ ಇರುವುದು ಗೊತ್ತಾಗಿದೆ. ಇಷ್ಟೇ ಅಲ್ಲ ಆಕೆ ಪುರುಷರ ಧ್ವನಿಯಲ್ಲಿ ಮಾತನಾಡತ್ತಿದ್ದಾಳೆ. ಹೀಗಾಗಿ ನನಗೆ ವಿಚ್ಚೇದನ ಬೇಕಿದೆ ಎಂದು ಪತಿ ಕೋರ್ಟ್‌ನಲ್ಲಿ ಹೇಳಿದ್ದಾರೆ.
ತನಗೆ ಮೋಸವಾಗಿದೆ ಎಂದು ನ್ಯಾಯಲಯಕ್ಕೆ ಹೋದ ಪತಿಗೆ ನಿರಾಸೆಯಾಗಿದೆ. ಪತಿ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ನೀಡಿದ್ದಾರೆ. ಪತಿಯ ಕುಟುಂಬದವರೂ ಕಿರುಕುಳ ನೀಡಿದ್ದಾರೆ ಎಂದು ಪತ್ನಿಯ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಇಷ್ಟೇ ಅಲ್ಲ ಪತಿಯ ಜೊತೆ ಬಾಳಲು ಆಕೆ ಸಿದ್ಧಳಿದ್ದಾಳೆ. ಒಂದು ವೇಳೆ ಡಿವೋರ್ಸ್ ನೀಡುವುದಾದರೆ ಜೀವನಾಂಶಕ್ಕಾಗಿ ಪ್ರತಿ ತಿಂಗಳು 20 ಸಾವಿರ ನೀಡಬೇಕು ಎಂದು ಪತ್ನಿಯ ವಕೀಲರು ವಾದಿಸಿದ್ದಾರೆ.
ವಾದ ಪ್ರತಿವಾದಗಳನ್ನ ಆಲಿಸಿದ ಕೋರ್ಟ್, ಪತಿಯ ವಿಚ್ಚೇದನ ಅರ್ಜಿಯನ್ನ ತಿರಸ್ಕರಿಸಿದೆ. ಈ ಆರೋಪಗಳ ಆಧಾರದ ಮೇಲೆ ವಿಚ್ಚೇದನ ನೀಡಲುು ಸಾಧ್ಯವಿಲ್ಲ ಎಂದಿದೆ. ಇಷ್ಟೇ ಅಲ್ಲ ಹಲವು ಬಾರಿ ಪತಿ ಕೋರ್ಟ್ ಪ್ರೋಸಿಡಿಂಗ್ಸ್‌ಗೆ ಗೈರಾಗಿದ್ದರು ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.